ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಉಪ್ಪುಂದ ಲೇಡಿ ಜೆಸಿ ವಿಭಾಗದ ವತಿಯಿಂದ ಬೈಂದೂರು ಸಿಟಿ ಜೆಸಿ ಸದಸ್ಯರ ಭಾಗವಹಿಸುವಿಕೆಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಸನ್ಮಾನ ತರಬೇತಿ ಸಂವಾದ ಹಾಗೂ ಸ್ಪರ್ಧಾ ಕಾರ್ಯಕ್ರಮ ಉಪ್ಪಂದದ ರೈತ ಸೇರಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಂಬದಕೊಣೆ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಉಪ್ಪುಂದ ಇದರ ಅಧ್ಯಕ್ಷರಾದ ಎಸ್ ಪ್ರಕಾಶ್ಚಂದ್ರ ಶೆಟ್ಟಿ ಅವರು ಸೃಷ್ಟಿಯಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಜೀವನದ ಎಲ್ಲಾ ಹಂತಗಳಲ್ಲಿ ಮಹಿಳೆಯ ಮೇಲೆ ಅವಲಂಬಿತನಾಗಿರುತ್ತಾನೆ ಪ್ರತಿಯೊಬ್ಬ ಮಹಿಳೆಯು ಕೂಡ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದಾಗ ಈ ದೇಶ ಇನ್ನಷ್ಟು ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಬಹು ಅಂಗ ವಿಕಲ ಇಬ್ಬರು ಗಂಡು ಮಕ್ಕಳನ್ನ 45 ವರ್ಷಗಳಿಂದ ಬಹಳ ಜಾಗರೂಕತೆಯಿಂದ ಸಾಕುತ್ತಿರುವ ಮಹಾತಾಯಿ ಗಿರಿಜಾ ಅವರನ್ನು, ಉದ್ಯಮ ಕ್ಷೇತ್ರದಲ್ಲಿ ತನ್ನನ್ನ ತೊಡಗಿಸಿಕೊಂಡ ಲೀಲಾ ಅವರನನ್ನು ಹಾಗೂ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶಿನಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜೆ ಸಿ ಉಪ್ಪುಂದ ಲೇಡಿ ಜೇಸಿ ಅಧ್ಯಕ್ಷರಾದ ಜೆಸಿ ರೇಖಾ ವಹಿಸಿದ್ದರು. ವಲಯ ಕಾರ್ಯಕ್ರಮ ವಿಭಾಗದ ನಿರ್ದೇಶಕರಾದ ಜೆಸಿ ಅಕ್ಷತಾ ಗಿರೀಶ್, ಪೂರ್ವ ಅಧ್ಯಕ್ಷರಾದ ಜೆಸಿ ಮಂಗೇಶ್ ಶಾನುಭಾಗ್, ಜೆಸಿಐ ಉಪ್ಪುಂದ ಅಧ್ಯಕ್ಷರಾದ ಜೆಸಿ ಪ್ರದೀಪ್ ಶೆಟ್ಟಿ ಕಾರಿ ಕಟ್ಟೆ, ಬೈಂದೂರು ಸಿಟಿ ಜೆಸಿ ಪೂರ್ವ ಅಧ್ಯಕ್ಷರಾದ ಜೆಸಿ ಪ್ರಿಯದರ್ಶಿನಿ ಬೆಸ್ಕೂರ್, ಉಪ್ಪುಂದ ಜಿಸಿ ನಿಕಟ ಪೂರ್ವ ಅಧ್ಯಕ್ಷ ನಾಗರಾಜ ಪೂಜಾರಿ, ಲೇಡಿ ಜೆಸಿ ಅಧ್ಯಕ್ಷರಾದ ಜೆ.ಸಿ. ಗುಲಾಬಿ ಮರವಂತೆ, ಬೈಂದೂರು ಕಾರ್ಯದರ್ಶಿ ಸತೀಶ್ ಬೈಂದೂರು, ಜೆಸಿ ಅಧ್ಯಕ್ಷರಾದ ನಿಶಾ ಸಂತೋಷ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೆಸಿ ರಮಣಿ ಸ್ವಾಗತಿಸಿದರು,ಜೆಸಿ ಸೌಮ್ಯ, ಜೆಸಿವಾಣಿ ವಾಚಿಸಿದರು, ಸದಸ್ಯರಾದ ಸುಮನ ,ಶಿಲ್ಪ, ಸಂಗೀತ ಮತ್ತು ಸುಪರ್ಣ ಪರಿಚಯ ವಾಚಿಸಿದರು. ಜೆಸಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಪುರಂದರ ಉಪ್ಪುಂದ ಧನ್ಯವಾದ ಸಮರ್ಪಿಸಿದರು ನಂತರ ವಲಯ ತರಬೇತುದಾರರಾದ ಅಕ್ಷತಾ ಗಿರೀಶ್ ಅವರಿಂದ ತರಬೇತಿ ಕಾರ್ಯಕ್ರಮ ನಡೆಯಿತು.