ಕುಂದಾಪುರ: ವಕೀಲ ಜಯಪ್ರಕಾಶ್ ಸಾಲಿನ್ಸ್ ನಿಧನಕ್ಕೆ ಕಂಬನಿ

Click Here

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ, ಗೋಪಾಡಿ ಗ್ರಾಮದ ನಿವಾಸಿ ಜಯಪ್ರಕಾಶ್ ಸಾಲಿನ್ಸ್ (53ವ) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಎ.3ರಂದು ಕೊನೆಯುಸಿರೆಳೆದರು.

Click Here

Call us

Click Here

ವಕೀಲ ಜಯಪ್ರಕಾಶ್ ಅವರು ಹಿರಿಯ ವಕೀಲ ರವಿಕಿರಣ ಮುರ್ಡೇಶ್ವರ ಅವರೊಂದಿಗೆ, ಕುಂದಾಪುರದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ವೆಯ್ಟ್ ಲಿಫ್ಟರ್ ಆಗಿ ಕ್ರೀಡೆಯಲ್ಲಿ ಆಸ್ತಕ್ತಿ ಹೊಂದುವುದರ ಜೊತೆಗೆ ಉತ್ತಮ ನಾಯಕತ್ವ, ಪರೋಪಕಾರದ ಗುಣವನ್ನು ಹೊಂದಿದ್ದರು. ಅವರು ಕುಂದಾಪುರ ಚರ್ಚಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.

ಎ.04ರಂದು ಶಾಸ್ತ್ರಿ ವೃತ್ತದ ಸಿಎಸ್ಐ ಕೃಪಾ ಚರ್ಚ್ ಸ್ಮಶಾನದಲ್ಲಿ ಜಯಪ್ರಕಾಶ್ ಸಾಲಿನ್ಸ್ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಮೃತ ಜಯಪ್ರಕಾಶ್ ಅವರು ಮಡದಿ ಹಾಗೂ ಮತ್ತು ಇಬ್ಬರು ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಜಯಪ್ರಕಾಶ್ ಸಾಲಿನ್ಸ್ ನಿಧನಕ್ಕೆ ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಹಿರಿಯ ವಕೀಲ ರವಿಕಿರಣ ಮುರ್ಡೇಶ್ವರ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

Leave a Reply