2nd PU Results: ವಿಜ್ಞಾನ ವಿಭಾಗದಲ್ಲಿ ಕುಂದಾಪುರದ ನೇಹಾ ಜೆ. ರಾವ್ ರಾಜ್ಯಕ್ಕೆ ತೃತೀಯ, ಜಿಲ್ಲೆಗೆ 2ನೇ ರ್ಯಾಂಕ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಶ್ರೀ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿನಿ, ಬಸ್ರೂರು ಮೂರುಕೈ ಬ್ಯಾಂಕರ‍್ಸ್ ಕಾಲನಿ ನಿವಾಸಿ ಜಗದೀಶ್ ರಾವ್ ಹಾಗೂ ಸ್ಮಿತಾ ಜೆ.ರಾವ್ ಪುತ್ರಿ ನೇಹಾ ಜೆ. ರಾವ್, ವಿಜ್ಞಾನ ವಿಭಾಗದಲ್ಲಿ 594 ಅಂಕ ಪಡೆದು ತೃತೀಯ ರ‍್ಯಾಂಕ್ ಪಡೆದರೆ ಉಡುಪಿ ಜಿಲ್ಲೆಗೆ 2ನೇ ರ್ಯಾಂಕ್ ಪಡೆದಿದ್ದಾಳೆ.

Call us

Click Here

ರ‍್ಯಾಂಕ್ ಪಡೆದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ವಿದ್ಯಾರ್ಥಿನಿ ನೇಹಾ ಕುಂದಾಪ್ರ ಡಾಟ್ ಕಾಂ ಜೊತೆಗೆ ಸಂತಸ ಹಂಚಿಕೊಂಡಿದ್ದು, ನಾನು ಯಾವುದೇ ಟೂಶನ್ ತರಗತಿಗೆ ಹೋಗದೆ, ಕಾಲೇಜು ಶಿಕ್ಷಕರ ತರಬೇತಿ ಹಾಗೂ ಮಾರ್ಗದರ್ಶನದಿಂದ ಮತ್ತು ಪೋಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಟೈಮ್ಟೇಬಲ್ ಪ್ರಕಾರ ಓದುತ್ತಿರಲಿಲ್ಲ. ಓದಿಗೆ ಒತ್ತಡವೂ ಇರಲಿಲ್ಲ. ಹೆಚ್ಚಾಗಿ ಹಗಲಿನ ವೇಳೆ ಓದುತ್ತಿದ್ದೆ ಎಂದಿದ್ದಾಳೆ. ಮುಂದೆ ಕಂಟ್ಯೋಟರ್ ಸೈನ್ ತೆಗೆದುಕೊಂಡು ಇಂಜಿನಿಯರ್ ಮಾಡುವ ಗುರಿ ಇದೆ ಎಂದಿದ್ದಾಳೆ.

ನೇಹಾಳಿಗೆ ಟ್ರಾಯಿಂಗ್, ಪೇಂಟಿಂಗ್ ನೆಚ್ಚಿನ ಅವ್ಯಾಸವಾಗಿದ್ದು, ಆಂಕರ್ ಆಸಕ್ತ ಕ್ಷೇತ್ರವಾಗಿದ್ದು, ಕಾಲೇಜು ಕಾರ್ಯಕ್ರಮದಲ್ಲಿ ನಿರೂಪಣೆ ಮಾಡೂವುದೂ ಇಷ್ಟದ ವಿಷಯ ಎಂದಿದ್ದಾಳೆ. ನೇಹಾ ತಮ್ಮ ಯಜ್ಞೇಶ್ ವೆಂಕಟರಮಣ ಆಂಗ್ಲಾ ಮಧ್ಯಮ ಶಾಲೆ 5ನೇ ತರಗತಿ ವಿದ್ಯಾರ್ಥಿ.

ನೇಹಾಳ ಪೋಷಕರು ಮಾತನಾಡಿ, ಮಗಳು ಸಾಧನೆ ಸಂತೋಷ ತಂದಿದೆ. ಅವಳ ಓದು ಪರಿಶ್ರಮಕ್ಕೆ ಸಿಕ್ಕಿದ ಪ್ರತಿಫಲ ಫಲಿತಾಂಶವಾಗಿದ್ದು, ಅವಳನ್ನು ಸ್ವತಂತ್ರವಾಗಿ ಬಿಟ್ಟಿದ್ದು, ಯಾವುದೇ ಒತ್ತಡ ಹಾಕಲಿಲ್ಲ. ಮುಂದೆ ಕೂಡಾ ಅವಳಿಚ್ಛೆಯಂತೆ ಮುಂದುವರಿಯಲು ಬೆಂಗಾವಲಾಗಿ ನಿಲ್ಲುತ್ತೇವೆ ಎಂದಿದ್ದಾರೆ.

Leave a Reply