ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಈದುಲ್ ಫಿತ್ರ್ ಪ್ರಯುಕ್ತ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕುಂದಾಪುರ ತಾಲೂಕು ಘಟಕದ ನಿಯೋಗ ತಾಲೂಕು ಅಧ್ಯಕ್ಷರಾದ ಎಸ್. ದಸ್ತಗೀರ್ ಸಾಹೇಬ್ ಕಂಡ್ಲೂರುರವರ ನೇತೃತ್ವದಲ್ಲಿ ತ್ರಾಸಿಯ ಹೋಲಿಕ್ರಾಸ್ ವೃದ್ಧಾಶ್ರಮಕ್ಕೆ ಭೇಟಿ ನೀಡಿತು.
ವೃದ್ಧಾಶ್ರಮದ ಹಿರಿಯರೊಂದಿಗೆ ಜೊತೆ ನಡೆಸಿ ಅವರಿಗೆ ಹಣ್ಣು ಹಂಪಲು ಹಾಗೂ ಬ್ರೆಡ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಮುಹಮ್ಮದ್ ರಫೀಕ್ ಗಂಗೊಳ್ಳಿ, ತಾಲೂಕು ಕೋಶಾಧಿಕಾರಿ ಮುಜಾವರ್ ಅಬು ಮುಹಮ್ಮದ್ ಕುಂದಾಪುರ, ಜಿಲ್ಲಾ ಸಮಿತಿ ಸದಸ್ಯರಾದ ಶಾಬಾನ್ ಹಂಗಳೂರು, ರೆಹಾನ್ ತ್ರಾಸಿ ತಾಲೂಕು ಸಮಿತಿ ಸದಸ್ಯರಾದ ಝಹೀರ್ ನಾಖುದಾ ಹಾಗೂ ಇತರರು ಉಪಸ್ಥಿತರಿದ್ದರು.