ಕುಂದಾಪುರ: ಶಾಂತಿ ಕದಡಿದರೆ ಲಾಠಿ ರುಚಿ ತೋರಿಸೋದು ಅನಿವಾರ್ಯ – ಐಜಿಪಿ ಅಮೃತಪಾಲ್

Call us

Call us

Call us

ಕುಂದಾಪುರ: ಶಾಂತಿ ಕದಡುವವರು ಯಾರೇ ಆಗಿರಲಿ, ಕಾನೂನಿಗೆ ತಲೆಭಾಗದಿದ್ದರೇ ಲಾಠಿ ಬೀಸುವುದು ಖಚಿತ. ಕರಾವಳಿಯಲ್ಲಿ ಕೋಮು ವೈಷಮ್ಯ ಹಿಂದಿನಿಂದಲೂ ಇದ್ದೇ ಇದೆ. ಆದರೆ ತಮಗೆ ಶಾಂತಿ ಬೇಕೇ-ಬೇಡವೇ ಎಂಬ ಬಗ್ಗೆ ಇಲ್ಲಿನ ಜನರೇ ಯೋಚನೆ ಮಾಡಬೇಕು. ಅನಗತ್ಯವಾಗಿ ಸಂಘರ್ಷಗಳಿಗೆ ಎಡೆಮಾಡಿಕೊಡಬಾರದು. ಇದು ಪಶ್ಚಿಮ ವಲಯ ಐಜಿಪಿ ಅಮೃತ್‌ಪಾಲ್ ಅವರ ಖಡಕ್ ನುಡಿ.

Call us

Click Here

ಕುಂದಾಪುರ ಠಾಣಾ ಪರಿವೀಕ್ಷಣೆಗೆ ಆಗಮಿಸಿದ ಅವರು ಕರಾವಳಿಯಲ್ಲಿ ಕೋಮು ಸಂಘರ್ಷ, ಶಾಂತಿ ಕದಡುವ ಪ್ರಯತ್ನ ಜಾಸ್ತಿಯಾಗುತ್ತಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಕುಂದಾಪುರದಲ್ಲಿ ಇನ್ನು ಒಂದು ವರ್ಷದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯಾಗಲಿದೆ. ಕೋಮು ಸೂಕ್ಷ್ಮ ಪ್ರದೇಶವಾದ ಕಂಡ್ಲೂರಿನಲ್ಲಿಯೇ ಠಾಣೆ ಆರಂಭಿಸುವುದು ಬಹುತೇಕ ಖಚಿತ ಎಂದವರು ಹೇಳಿದರು. (ಕುಂದಾಪ್ರ ಡಾಟ್ ಕಾಂ ವರದಿ)

ಹಳೆ ಕೊಲೆ ಪ್ರಕರಣಗಳನ್ನು ರೀ ಓಪನ್ ಮಾಡಲಾಗುವುದು:
ಕುಂದಾಪುರದ ಹೃದಯ ಭಾಗದಲ್ಲಿ ನಡೆದ ಸುಬ್ರಾಯ್ ಹೊನ್ನಾವರ್ ಶೂಟೌಟ್, ಬೆಳ್ವೆ ಉದಯಕುಮಾರ್ ಶೆಟ್ಟಿ, ಕುಸುಮಾ ಕೊಲೆ ಸೇರಿದಂತೆ 2005ರ ನಂತರ ಕುಂದಾಪುರ ತಾಲೂಕಿನಲ್ಲಿ ನಡೆದ ಎಲ್ಲಾ ಪ್ರಕರಣಗಳ ತನಿಕೆಯನ್ನು ಮತ್ತೆ ಕೈಗೆತ್ತಿಕೊಳ್ಳುವ ಬಗ್ಗೆ ಅವರು ತಿಳಿಸಿದರು.

ಶಿರೂರಿನ ರತ್ನಾ ಕೊಠಾರಿಯದ್ದು ಸಹಜ ಸಾವು:
ರತ್ನಾ ಕೊಠಾರಿಯದ್ದು ಸಹಜ ಸಾವು ಎಂಬುದನ್ನು ತನಿಕೆಯಿಂದ ದೃಢಪಡಿಸಿಕೊಂಡಿದ್ದೇವೆ. ಅದೊಂದು ಕೊಲೆ ಎಂದು ಪರಿಗಣಿಸಿ ಎರಡು ವರ್ಷ ವಿಸ್ಕೃತ ತನಿಕೆ ನಡೆಸಿದ ಬಳಿಕವಷ್ಟೇ ಈ ನಿರ್ಧಾರಕ್ಕೆ ಬಂದಿದ್ದೇವೆ. ಇದು ಸಹಜ ಸಾವು ಎಂಬುವುದರಲ್ಲಿ ಸಂಶಯವೇ ಬೇಡ ಎಂದವರು ಹೇಳಿದರು. (ಕುಂದಾಪ್ರ ಡಾಟ್ ಕಾಂ ವರದಿ)

ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರ:
ಮಹಿಳಾ ಠಾಣೆಯನ್ನು ಕುಂದಾಪುರದಲ್ಲಿಯೇ ಉಳಿಸಬೇಕು ಎಂಬ ನಾಗರೀಕರು ಆಗ್ರಹಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರದ ಬಗ್ಗೆ ಸರಕಾರದಿಂದ ಆದೇಶವಾಗಿದೆ. ಆದಾಗ್ಯೂ ಇದು ಜನರ ಮನವಿಗೆ ಮೇರೆಗೆ ಸರಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದರು.

Click here

Click here

Click here

Click Here

Call us

Call us

ಕುಂದಾಪುರದಲ್ಲಿ ಪೊಲೀಸರ ಆರೋಗ್ಯ ಸ್ಕಿಮಿಗೆ ಒಳಪಡುವ ಆಸ್ಪತ್ರೆ ಇಲ್ಲ
ಕೇಂದ್ರ ಸರಕಾರದ ಆರೋಗ್ಯ ಯೋಜನೆಯ ಅನ್ವಯ ಪೊಲೀಸ್ ಸಿಬ್ಬಂದ್ದಿಗಳಿಗೆ ಉತ್ತಮ ಸೌಲಭ್ಯ ಇರುವ ಆಸ್ಪತ್ರೆಯ ಅಗತ್ಯವಿದೆ. ಆದರೆ ಕುಂದಾಪುರದಲ್ಲಿ ಸದ್ಯ ಅಂತಹ ಆಸ್ವತ್ರೆಗಳಿಲ್ಲ. ನಮ್ಮ ದರಕ್ಕೆ ಆಸ್ಪತ್ರೆ ಒಪ್ಪಬೇಕು ಮತ್ತು ಆಸ್ಪತ್ರೆಯಲ್ಲಿ ಸುಸಜ್ಜಿತವಾದ ವ್ಯವಸ್ಥಿಯಿರಬೇಕು. ಇದಾದಲ್ಲಿ ಆರೋಗ್ಯ ಸ್ಕಿಮ್ ಇಲ್ಲಿಗೂ ಅನ್ವಯವಾಗುತ್ತದೆ ಎಂದವರು ಹೇಳಿದರು. (ಕುಂದಾಪ್ರ ಡಾಟ್ ಕಾಂ ವರದಿ)

ಐಜಿಪಿಯನ್ನು ಪೊಲೀಸ್ ಗೌರವದೊಂದಿಗೆ ಭರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಉಡುಪಿ ಎಸ್ಪಿ ಅಣ್ಣಾಮಲೈ, ಎಎಸ್ಪಿ ಸಂತೋಷ್ ಕುಮಾರ್, ಕುಂದಾಪುರ ಡಿವೈಎಸ್ಪಿ ಮಂಜುನಾಥ್ ಶೆಟ್ಟಿ, ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ, ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್, ಕ್ರೈಮ್ ವಿಭಾಗದ ಎಸ್ಸೈ ದೇವರಾಜ್, ಟ್ರಾಫಿಕ್ ಠಾಣೆ ಎಸ್ಸೈ ಜಯ ಹಾಗೂ ದೇವೇಂದ್ರ, ಶಂಕರನಾರಾಯಣ ಎಸ್ಸೈ ದೇಜಪ್ಪ, ಅಮಾಸೆಬೈಲು ಎಸ್ಸೈ ಸುನೀಲ್ ಮಹಿಳಾ ಠಾಣೆ ಎಸ್ಸೈ ಸುಜಾತಾ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

_MG_8185 _MG_8193 _MG_8202 _MG_8205 _MG_8233 _MG_8235

Leave a Reply