ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಬದುಕಿನಲ್ಲಿ ಸಮಯದ ಅರಿವಿರಬೇಕಾದ್ದು ಅತ್ಯಗತ್ಯ. ವಿಳಂಬ ಪೃವತಿ ರೂಢಿಸಿಕೊಳ್ಳದೆ ಸಮಪಾಲನೆಯಿಂದ ಕಾರ್ಯಪ್ರವರ್ತರಾದರೆ ಯಶಸ್ಸು ಸಾಧ್ಯ ಎಂದು ದಿ ಹಿಂದೂ ಗ್ರೂಪ್ ಮಾರಾಟ ಮತ್ತು ವಿತರಣಾ ಉಪಾಧ್ಯಕ್ಷ ಶ್ರೀಧರ ಅರನಾಳ ಹೇಳಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದವತಿಯಿಂದ ಮಂಗಳವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಅತಿಥಿ ಉಪನ್ಯಾಸದಲ್ಲಿ ’ಒತ್ತಡ ಹಾಗೂ ಭಾವನೆಗಳ ನಿರ್ವಹಣೆಯ ತಂತ್ರಗಳು’ ವಿಷಯದ ಕುರಿತು ಮಾತನಾಡಿದರು.
ಮಾತಾಡುವುದೂ ಒಂದು ಕಲೆ. ಆಡಬೇಕಾದ ಮಾತನ್ನು ಧ್ಯಾನವಿಟ್ಟು, ಸಂದರ್ಭವರಿತು, ಪರಿಣಾಮವನ್ನೂ ಮುಂದಾಲೋಚಿಸಿ, ಹದದಲ್ಲಿ ಮಾತನಾಡಬೇಕಾದದದ್ದು ಮುಖ್ಯ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸಲು ಉತ್ತಮ ಒತ್ತಡ ಮನು?ನಿಗೆ ಅನಿವಾರ್ಯವಿದೆ. ಆದರೆ ಒತ್ತಡ ಹೆಚ್ಚಾದಲ್ಲಿ ಆರೋಗ್ಯದ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂದರು. ಹಾಗೆಯೇ ವ್ಯಕ್ತಿಯೂ ಸಂತೋ?ದಿಂದ ಕಾರ್ಯಮಗ್ನಾನಾಗಬೇಕೇ ಹೊರತು ಒತ್ತಡದಿಂದಲ್ಲ. ಮನು? ದೊರೆಯದ ವಸ್ತುಗಳ ಕುರಿತು ಚಿಂತಿಸುವ ಬದಲು ಅದನ್ನು ಹೇಗೆ ಮುಂದಿನ ದಿನದಲ್ಲಿ ಧಕ್ಕಿಸಿಕೊಳ್ಳಬಹುದು ಎಂಬುದರ ಕುರಿತು ಕಾರ‍್ಯಪ್ರವೃತ್ತರಾಗಬೇಕು ಎಂದರು. ನಂತರ ಪತ್ರಿಕಾರಂಗದ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿ?ನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಓದು ಬದುಕಿನ ಬಹು ಮುಖ್ಯ ಭಾಗ. ದಿನನಿತ್ಯದ ಜೀವನದಲ್ಲಿ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ದಿ ಹಿಂದೂ ಗ್ರೂಪ್‌ನ ಪ್ರದಾನ ವ್ಯವಸ್ಥಾಪಕರಾದ ಬಾಬು ವಿಜಯನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಂಬಿಎ ವಿಭಾಗದ ಸಂಯೋಜಕಿ ಪ್ರಿಯಾ ಸಿಕ್ವೇರಾ ಸ್ವಾಗತಿಸಿ, ಎಂಬಿಎ ಪ್ರಥಮ ವ?ದ ವಿದ್ಯಾರ್ಥಿನಿ ಸಿಯೋನಾ ವಂದಿಸಿ, ವಿದ್ಯಾರ್ಥಿ ಶ್ರವಣ್ ಆಚಾರ್ಯ ಮುಖ್ಯ ಅತಿಥಿಯನ್ನು ಪರಿಚಯಿಸಿ, ವಿದ್ಯಾರ್ಥಿ ಸತ್ಯಜಿತ್ ಪ್ರಾರ್ಥಿಸಿ, ಪ್ರಣವ ಸ್ವರೂಪ ನಿರೂಪಿಸಿದರು.