ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನ

Click Here

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಇಲ್ಲಿನ ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಲುವಾಗಿ ಮೇ 5ರಂದು ಸಹಸ್ರ ಕಲಶಗಳೊಂದಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು.

Click Here

Call us

Click Here

ಬೆಳಗ್ಗೆ ಯಾಗೇಶ್ವರಿ ಹೋಮ, ಸಹಸ್ರಕಲಶಗಳೊಂದಿಗೆ ಬ್ರಹ್ಮ ಕಲಶಾಭಿಷೇಕ ಮಹಾಪೂಜೆ ಧ್ವಜಪೂಜೆ, ಕ್ಷೇತ್ರಪಾಲ ಪೂಜೆ, ಚತುರ್ವೇದ ಪಾರಾಯಣ ಸಹಿತ ಭೇರಿತಾಡನ, ಪಳಹ ಪೂಜೆ, ವಿಶೇಷ ಬಲಿ, ಪಲ್ಲಕ್ಕಿ ಉತ್ಸವ ಮಯೂರ ಆರೋಹಣೋತ್ಸವ, ಡೋಲಾರೋಹಣೋತ್ಸವ, ತಂತ್ರಿ ನಿತ್ಯಾನಂದ ಅಡಿಗ ಅವರ ನೇತೃತ್ವದಲ್ಲಿ ನಡೆಯಿತು.

ಧಾರ್ಮಿಕ ವಿಧಿಗಳೊಂದಿಗೆ ಗರ್ಭಗುಡಿಯ ಶಿಖರಕ್ಕೆ ಕಲಶಾಭಿಷೇಕ ನೆರವೇರಿಸಲಾಯಿತು.

ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಕಾರ್ಯನಿರ್ವಹಣಾಕಾರಿ ಎಸ್ ಸಿ. ಕೋಟಾರಗಸ್ತಿ, ಸದಸ್ಯರಾದ ಡಾ. ರಾಮಚಂದ್ರ ಅಡಿಗ, ಡಾ. ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗಣೇಶ ಕಿಣಿ ಬೆಳ್ವೆ, ಗೋಪಾಲಕೃಷ್ಣ ನಾಡ, ಶೇಖರ ಶೇಖರ ಪೂಜಾರಿ, ಸಂಧ್ಯಾ ರಮೇಶ, ರತ್ನ ಆರ್.ಕುಂದರ್, ಅರ್ಚಕರಾದ ಡಾ. ನಿತ್ಯಾನಂದ ಅಡಿಗ, ಡಾ. ಕೆ.ಎನ್. ನರಸಿಂಹ ಅಡಿಗ, ಗೋವಿಂದ ಅಡಿಗ, ಶ್ರೀಧರ ಅಡಿಗ, ಸುಬ್ರಹ್ಮಣ್ಯ ಅಡಿಗ, ಕೇರಳ ವಿಧಾನಸಭೆಯ ವಿಪಕ್ಷ ನಾಯಕ ವಿ.ಡಿ. ಸತೀಶ, ಕೊಲ್ಲೂರು ಗ್ರಾ. ಪಂ.ಅಧ್ಯಕ್ಷಶಿವರಾಮಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

Leave a Reply