ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಶನಿವಾರ ಶಿರೂರಿನಿಂದ ಮುದೂರು ತನಕ ವಿವಿಧ ಭಾಗಗಳಲ್ಲಿ ರೋಡ್ ಶೋ ನಡೆಸಿ ನಡೆಸಿ ಮತಯಾಚನೆ ಮಾಡಿದರು. ಈ ವೇಳೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾಣ್ ರೋಡ್ ಶೋಗೆ ಸಾಥ್ ನೀಡಿದರು.
ದೊಂಬೆ, ಶಿರೂರು, ಹಡವಿನಕೋಣೆ, ಉಪ್ಪುಂದ, ಬಿಜೂರು, ಹೊಸಕೋಟೆ, ನಾಯ್ಕನಕಟ್ಟೆ, ಕಂಬದಕೋಣೆ, ಕಾಲ್ತೋಡು, ತಗ್ಗರ್ಸೆ, ವಸ್ರೆ, ಯಳಜಿತ, ಗೋಳಿಹೊಳೆ, ಅರೆಶಿರೂರು, ಕೊಲ್ಲೂರು, ಜಡ್ಕಲ್ ಮುದೂರು ಭಾಗದಲ್ಲಿ ಅವರು ರೋಡ್ ಶೋ ನಡೆಸಿದರು.
ಈ ವೇಳೆ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನಕುಮಾರ್ ಉಪ್ಪುಂದ, ಪ್ರಚಾರ ಸಮಿತಿ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಕೆ. ಬಾಬು ಶೆಟ್ಟಿ, ಸದಾಶಿವ ಪಡುವರಿ, ನಗರ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗಾಣಿಗ ಬಂಕೇಶ್ವರ, ಸತೀಶ್ ಕೆ.ವಿ, ಶೇಖರ ಪೂಜಾರಿ ಉಪ್ಪುಂದ, ರವೀಂದ್ರ ಶೆಟ್ಟಿ, ಉದಯ ಪೂಜಾರಿ, ರಿಯಾಜ್ ಅಹಮ್ಮದ್, ರಾಜೇಶ್ ದೇವಾಡಿಗ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.