ಕುಂದಾಪುರದಲ್ಲೊಂದು ಉಚಿತ ವೈಫೈ ಸೇವೆ!

Call us

Call us

Call us

ಕುಂದಾಪುರ: ಈಗಂತು ಹೇಳಿ ಕೇಳಿ ಇಂಟರ್‌ನೆಟ್ ಯುಗ. ಎಲ್ಲವೂ ಆನ್‌ಲೈನ್‌ಮಯ. ಸಾಮಾಜಿಕ ತಾಣಗಳ ದೆಸೆಯಿಂದ ದಿನವಿಡೀ ಮೊಬೈಲ್ ಡಾಟ್ ಆನ್ ಆಗಿಯೇ ಇರುತ್ತೆ. ತಿಂಗಳಿಗೋ ನೂರಾರು ರೂಪಾಯಿ ಖರ್ಚು. ಹೀಗಿರುವಾಗ ಉಚಿತ ಇಂಟರ್‌ನೆಟ್ ಸೌಲಭ್ಯ ಸಿಕ್ಕರೆ ಯಾರು ತಾನೆ ಬೇಡ ಅಂದಾರು? ದೊಡ್ಡ ನಗರ, ಸ್ಟಾರ್ ಹೋಟೆಲ್‌, ಆಫೀಸುಗಳಿಗಷ್ಟೇ (ಕೆಲವೆಡೆ ಮಾಲಕರಿಗೆ ತಿಳಿಯದೆ ವೈಫೈ ಆನ್ ಇರುತ್ತದೆ.) ಸೀಮಿತವಾದ ಉಚಿತ ಇಂಟರ್ನೆಟ್ ಸೌಲಭ್ಯವನ್ನು ಕುಂದಾಪುರಲ್ಲಿಯೂ ವೈಫೈ ಮೂಲಕ ನೀಡುತ್ತಾರೆಂದರೆ, ಯಾರು ತಾನೆ ಬಳಸದೇ ಇದ್ದಾರು?

Call us

Click Here

ಹೌದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ರಸ್ತೆಯಲ್ಲಿನ ದೃಷ್ಠಿ ಡಿಜಿಟಲ್ಸ್ ಬ್ಯಾನರ್ಸ್ ಮಾಲಿಕರಾದ ಸಂತೋಷ್ ಖಾರ್ವಿ ಹಾಗೂ ರಾಜೇಶ್ ಖಾರ್ವಿ ಸಾರ್ವಜನಿಕರಿಗೆ ವೈಫೈ ಇಂಟರ್‌ನೆಟ್ ಒದಗಿಸುವ ಮೂಲಕ ಆನ್ಲೈನ್ ಪ್ರೀಯರಿಗೆ ಉಚಿತ ಸೇವೆ ನೀಡುತ್ತಿದ್ದಾರೆ. ಮೊದಲಿಗೆ ವೈಫೈ ಎಲ್ಲರೂ ಬಳಸಿಕೊಳ್ಳಲಿ ಎಂದು ಓಪನ್ ಆಗಿಯೇ ಇಟ್ಟಿದ್ದರು. ಆದರೆ ಅದು ಹೆಚ್ಚಿನ ಮಂದಿಗೆ ತಿಳಿಯುತ್ತಲೇ ಇರಲಿಲ್ಲ. ಹಾಗಾಗಿ ಕೆಲವು ತಿಂಗಳ ಹಿಂದೆ ತಮ್ಮ ಅಂಗಡಿಯ ಎದುರು Free wifi zoon ಎಂದು ಬೋರ್ಡ್ ಹಾಕಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)

ಬಿಟ್ಟಿ ವೈಫೈ ಸಿಗುತ್ತೆ ಎಂದು ತಿಳಿದದ್ದೇ ತಡ, ದೃಷ್ಟಿ ಡಿಜಿಟಲ್ಸ್ ಸುತ್ತಲು ಮೊಬೈಲ್ ಹಿಡಿದು ನಿಲ್ಲುವ ಮಂದಿ ಹೆಚ್ಚಾಗಿ ಕಾಣಿಸತೊಡಗಿದರು. ಇನ್ನು ಕೆಲವರು ಒಂದು ಮೇಲ್ ಕಳುಹಿಸೋದಿದೆ ವೈಫೈ ಬಳಸಬಹುದಾ ಎಂದು ಪರ್ಮಿಷನ್ ತೊಗೊಂಡೆ ಬಳಸುತ್ತಿದ್ದರು. ಒಟ್ಟಿನಲ್ಲಿ ಬಿ.ಎಸ್.ಎನ್.ಎನ್ ನಿಂದ ದೊರೆಯುವ ನಾಲ್ಕು ಎಂಬಿಪಿಎಸ್ ಅನ್ಲಿಮಿಟೆಡ್ ವೈಫೈ 15ದಿನ ಕಳೆಯೊದರೊಳಗೆ 15 ಜೀಬಿ ಸಾಮರ್ಥವನ್ನು ಮೀರಿ ಅಂಗಡಿಯವರ ವೈಯಕ್ತಿಕ ಮೇಲ್ ಕಳುಹಿಸೋದಕ್ಕೂ ಕಷ್ಟವಾಗುತ್ತಿತ್ತು! ಹಾಗಾಗಿ ಕೆಲವು ದಿನಗಳಿಂದಿಗೆ ಅನಿವಾರ್ಯವಾಗಿ ವೈಫೈಗೆ ಪಾಸ್ವರ್ಡ್ ಹಾಕಿದ್ದಾರೆ. ಅಂಗಡಿಗೆ ಬಂದು ಕೇಳುವವರಿಗೆ ಮಾತ್ರ ಉಚಿತವಾಗಿ ನೀಡುತ್ತಿದ್ದಾರೆ.  (ಕುಂದಾಪ್ರ ಡಾಟ್ ಕಾಂ ವರದಿ)

ಅದೇನೆ ಇರಲಿ. ದೇಶದಲ್ಲಿ ಡಿಜಿಟಲ್ ಇಂಡಿಯಾದ ಕನಸು ಸಾಕಾರಗೊಳ್ಳುತ್ತಿರುವ ಹೊತ್ತಿನಲ್ಲಿ, ವ್ಯಾವಹಾರಿಕವಾಗಿ ಯೋಚಿಸದೇ ಕುಂದಾಪುರದಲ್ಲಿಯೂ ಉಚಿತ ವೈಫೈ ಸೌಲಭ್ಯ ನೀಡುತ್ತಿರುವ ಸಂತೋಷ್ ಹಾಗೂ ರಾಜೇಶ್ ಅವರ ಸೊಶೀಯಲ್ ಕಾರ್ಯ ಮಾತ್ರ ಶ್ಲಾಘನಾರ್ಹವಾದುದು. Kundapa.com ಅಂದ ಹಾಗೇ ಈ ಸಂತೋಷ್ ಖಾರ್ವಿ ‘ನಮ್ಮ ಕುಂದಾಪುರ’ ವಾಟ್ಸಪ್ ಗ್ರೂಪಿನ ಆಡ್ಮಿನ್. (ಕುಂದಾಪ್ರ ಡಾಟ್ ಕಾಂ ವರದಿ)

– ಸುನಿಲ್ ಹೆಚ್. ಜಿ. ಬೈಂದೂರು

Click here

Click here

Click here

Click Here

Call us

Call us

[box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted.[/box]

Leave a Reply