ಕುಂದಾಪುರ: ಮಂಗಳೂರು ವಿವಿ ಅಂತರ ವಲಯ ಥ್ರೋಬಾಲ್ ಪಂದ್ಯಾಟ – ಆಳ್ವಾಸ್ ಕಾಲೇಜು ಚಾಂಪಿಯನ್

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ ಮೂಡ್ಲಕಟ್ಟೆ ಕುಂದಾಪುರ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳೆಯರಿಗಾಗಿ ನಡೆದ ಅಂತರ ವಲಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಮೂಡುಬಿದಿರೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು 2-0 ನೇರ ಸೆಟ್ಗಳಿಂದ ಸೋಲಿಸಿ ಆಳ್ವಾಸ್ ಚಾಂಪಿಯನ್ ಆಯಿತು.

Call us

Click Here

ಈ ಅಂತರ ವಲಯ ಪಂದ್ಯಾವಳಿಗೂ ಮುನ್ನ ಇದೇ ಮೈದಾನದಲ್ಲಿ ಮೇ 17ರಂದು ನಡೆದ ಉಡುಪಿ ವಲಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಇದೇ ಹೆಬ್ರಿ ತಂಡವನ್ನು ಸೋಲಿಸಿ ಆಳ್ವಾಸ್ ಕಾಲೇಜು ಚಾಂಪಿಯನ್ ಆಗಿತ್ತು. ಇಂಟರ್ಜೋನ್ ಪಂದ್ಯಾವಳಿಯಲ್ಲಿ ಪಧುವ ಕಾಲೇಜು ಮಂಗಳೂರು ತೃತೀಯ ಮತ್ತು ಎಂಎಸ್ಆರ್ಎಸ್ ಕಾಲೇಜು ಶಿರ್ವ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಉಡುಪಿ ವಲಯದ ಪಂದ್ಯಾವಳಿಯಲ್ಲಿ ಎಸ್.ಎಂ.ಸಿ ಶಿರ್ವ ತೃತೀಯ ಹಾಗೂ ಎಂ.ಎಸ್.ಆರ್.ಎಸ್ ಶಿರ್ವ ನಾಲ್ಕನೇ ಸ್ಥಾನ ಪಡೆದರು.

ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಈ ಪಂದ್ಯಾವಳಿಯನ್ನು ತಮ್ಮ ಆರಂಭದ ವರ್ಷದಲ್ಲಿಯೇ ಆಯೋಜಿಸಿದೆ. ಮೇ 17 ರಂದು ಉಡುಪಿ ವಲಯ ಪಂದ್ಯಾವಳಿ ಮತ್ತು ಮೇ 19 ರಂದು ಇಂಟರ್ಜೋನ್ ಪಂದ್ಯಾವಳಿ ನಡೆಯಿತು. ಮೇ 19 ರಂದು ಇಂಟರ್ಜೋನ್ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯವರಾದ ಆಡಳಿತ ನಿರ್ದೇಶಕರು, ಸೃಷ್ಟಿ ಇನ್ಫೋಟಿಕ್ ಕುಂದಾಪುರದ ಹರ್ಷವರ್ಧನ್ ಶೆಟ್ಟಿ ಯವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮುಖ್ಯವಾಗಿ ಮೂರು E ಗಳಾದ ಎಜುಕೇಶನ್, ಎನ್ವಿರಾನ್ಮೆಂಟ್, ಎಕ್ಸ್ಪೋಜರ್ ಗಳನ್ನ ಬೆಳೆಸಿಕೊಳ್ಳಬೇಕು. ಅವಾಗ ಜೀವನದಲ್ಲಿ ಸದೃಢತೆಯನ್ನು ಸಾಧಿಸಲು ಸಾಧ್ಯ ಎಂದರು. ಗೌರವ ಅತಿಥಿಯರಾದ ದೈಹಿಕ ನಿರ್ದೇಶಕರು ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಜೆರಾಲ್ಡ್ ಸಂತೋಷ್ ಡಿಸೋಜರವರು ವಿದ್ಯಾರ್ಥಿಗಳು ತಮ್ಮ ಸಮಯದ ಪರಿಪಾಲನೆಯನ್ನು ಪಾಲಿಸಿಕೊಂಡು ಬಂದು ಕ್ರೀಡೆಯಲ್ಲಿ ಯಥೇಚ್ಛವಾಗಿ ತಮ್ಮನ್ನು ತಾವು ತೊಡಗಿಸಿ ಕೊಂಡಾಗ ನಿಮ್ಮ ದೇಹದಾಢ್ಯವನ್ನು ಸದೃಢಗೊಳಿಸಲು ಸಾಧ್ಯ, ಮೊಬೈಲ್ ನೋಡುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆಯದೆ ಆ ಸಮಯವನ್ನು ಕ್ರೀಡೆಗೆ ಬಳಸಿಕೊಳ್ಳುವುದರ ಮೂಲಕ ನೀವು ಜೀವನದಲ್ಲಿ ಇನ್ನೂ ಹೆಚ್ಚಿನ ಧೃಡತ್ವವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ರವರು ಅಧ್ಯಕ್ಷೀಯ ಮಾತುಗಳಲ್ಲಿ, ಸೋಲು ಎಂಬುದು ಇವತ್ತಿಗೆ ಕೊನೆಯಲ್ಲ. ಮುಂದಿನ ಸಂದರ್ಭದಲ್ಲಿ ಆ ಸೋಲನ್ನು ಗೆಲುವಾಗಿ ಪರಿಗಣಿಸುವ ಛಲವನ್ನು ಹೊಂದಿ ಅದಕ್ಕೆ ತಕ್ಕನಾದ ಪರಿಶ್ರಮವಹಿಸಿ ನಮ್ಮ ದಾಖಲೆಯನ್ನು ನಾವೇ ಮುರಿಯುವಂತಹ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕು ಎಂದರು.

Click here

Click here

Click here

Click Here

Call us

Call us

ಕಾರ್ಯಕ್ರಮದಲ್ಲಿ ಸಹ ನಿರ್ದೇಶಕರು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಡಾ| ಹರಿದಾಸ ಕೂಳೂರು, ಭಂಡಾರ್ಕರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು ಕುಂದಾಪುರದ ದೈಹಿಕ ಶಿಕ್ಷಣ ನಿರ್ದೇಶಕರಾದ ಶಂಕರ್ ನಾರಾಯಣ, ಐಎಂಜೆ ವಿದ್ಯಾ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ, ಉಪ ಪ್ರಾಂಶುಪಾಲರಾದ ಜಯಶೀಲ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರವೀಣ್ ಖಾರ್ವಿ, ವಿವಿಧ ವಿದ್ಯಾ ಸಂಸ್ಥೆಗಳ ಕ್ರೀಡಾಪಟುಗಳು ಹಾಗೂ ದೈಹಿಕ ಶಿಕ್ಷಕರು, ತೀರ್ಮಾನಗಾರರು, ಕಾಲೇಜಿನ ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಥಮ ಸ್ಥಾನ ಆಳ್ವಾಸ್ ಕಾಲೇಜು ಮೂಡಬಿದಿರೆ, ದ್ವಿತೀಯ ಸ್ಥಾನ ಗೌರ್ನಮೆಂಟ್ ಫಸ್ಟ್ ಗ್ರೇಡ್ ಕಾಲೇಜು ಹೆಬ್ರಿ, ತೃತೀಯ ಸ್ಥಾನ ಪದ್ವ ಕಾಲೇಜು ಮಂಗಳೂರು, ಚತುರ್ಥ ಸ್ಥಾನ ಎಂ ಎಸ್ ಆರ್ ಎಸ್ ಕಾಲೇಜು ಶಿರ್ವ ಪಡೆದುಕೊಂಡಿತು.

ಕಾರ್ಯಕ್ರಮವನ್ನು ಕನ್ನಡ ವಿಭಾಗದ ಸುಮನರವರು ನಿರೂಪಿಸಿದರು. ಆಂಗ್ಲ ವಿಭಾಗದ ಪಾವನ ರವರು ಸ್ವಾಗತಿಸಿದರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರವೀಣ್ ಖಾರ್ವಿ, ವಂದಿಸಿದರು. ವಿಜೇತರ ಪಟ್ಟಿಯನ್ನು ಬಿಸಿಎ ವಿಭಾಗದ ಮುಖ್ಯಸ್ಥರಾದ ಅಹಮದ್ ಖಲೀಲ್ ರವರು ಓದಿದರು.

Leave a Reply