Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮೇ 31, ಜೂನ್ 1 ರಂದು ’ಸಿಂಗರ್ಸ್ ಪ್ರೀಮಿಯರ್ ಲೀಗ್ ಕರಾವಳಿ ಕೋಯಲ್ ಚಾಂಪಿಯನ್ಸ್’
    ಕರಾವಳಿ

    ಮೇ 31, ಜೂನ್ 1 ರಂದು ’ಸಿಂಗರ್ಸ್ ಪ್ರೀಮಿಯರ್ ಲೀಗ್ ಕರಾವಳಿ ಕೋಯಲ್ ಚಾಂಪಿಯನ್ಸ್’

    Updated:01/06/2023No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಮಂಗಳೂರು:
    ಅರುಣ್ಯ ಫೌಂಡೇಶನ್ ಮತ್ತು ದಾಸ್ ಕುಡ್ಲ ಇವೆಂಟ್ಸ್ ಸಹಯೋಗದಲ್ಲಿ ಎಲ್ಲಾ ವಯೋಮಿತಿಯ ಸ್ಪರ್ಧಿಗಳನ್ನು ಹೊಂದಿರುವಂತಹ ಜಗತ್ತಿನ ಪ್ರಪ್ರಥಮ ಪ್ರಯೋಗ, ಕರಾವಳಿ ಕರ್ನಾಟಕ ಮೆಗಾ ಮ್ಯೂಸಿಕಲ್ ರಿಯಾಲಿಟಿ ಶೋ, ’ಸಿಂಗರ್ಸ್ ಪ್ರೀಮಿಯರ್ ಲೀಗ್ (ಎಸ್ಪಿಎಲ್ 23): ಕರಾವಳಿ ಕೋಯಲ್ ಚಾಂಪಿಯನ್ಸ್ 2023’ ಕಾರ್ಯಕ್ರಮವು ಮೇ 31 ಮತ್ತು ಜೂನ್ 1 ರಂದು ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಮೇ 31ರಂದು ಮೊದಲ ಸುತ್ತಿನ ಸಂಗೀತ ಕಾರ್ಯಕ್ರಮ ಹಾಗೂ ಎರಡನೇ ದಿನ ಜೂನ್ 1ರಂದು ಬೆಳಗ್ಗೆ 8:30ಕ್ಕೆ ಸೆಮಿಫೈನಲ್ ನಡೆಯಲಿದೆ. ಜೂ.1ರಂದು ಮಧ್ಯಾಹ್ನ 12:30ಕ್ಕೆ ಅಂತಿಮ ಸುತ್ತು ಹಾಗೂ ಸಂಜೆ, ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ವಿತರಣಾ ಸಮಾರಂಭ, ’ಪಂಚಭಾಷಾ ರಸಮಂಜರಿ’ ನಡೆಯಲಿದೆ.

    Click Here

    Call us

    Click Here

    ಎಸ್ಪಿಎಲ್ 23ರ ಆಯೋಜನೆ ಕಳೆದ ನವೆಂಬರಿನಿಂದ ನಡೆದಿದ್ದು, ರಾಜ್ಯದೆಲ್ಲೆಡೆಯಿಂದ ಒಟ್ಟು 453 ಸ್ಪರ್ಧಿಗಳು ಮೊದಲ ಹಾಗೂ ಮೆಗಾ ಅಡಿ?ನ್‌ನಲ್ಲಿ ಭಾಗವಹಿಸಿದ್ದು, ಅಂತಿಮ ಸುತ್ತಿಗೆ ಒಟ್ಟು 72 ಸ್ಪರ್ಧಿಗಳು ಆಯ್ಕೆಯಾಗಿದ್ದು, 9 ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸ್ಪರ್ಧಿಸಲಿವೆ.

    ಜ್ಞಾನೋದಯದ ಉದಯ್ ಗುರೂಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಹಿರಿಯ ಸಮಾಜ ಸೇವಕ ಸುರೇಶ್ ಬಲ್ಲಾಳ್, ಶ್ರೀ ವೇದಮಾಯು ಆಯುರ್ವೇದ ಆಸ್ಪತ್ರೆಯ ಡಾ. ಕೇಶವರಾಜ್, ವೆನ್ಲಾಕ್ ಆಸ್ಪತ್ರೆಯ ಜೀವಸಾರ್ಥಕತೆ (ಸೊಟ್ಟೊ) ಸಂಯೋಜಕಿ ಪದ್ಮಾ ವೇಣೂರು, ವೆರಿಟೊ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪೆಜತ್ತಾಯ, ದೊಡ್ಮನೆ ಅಪ್ಪು ಯುವಸೇನೆಯ ಜನಾರ್ದನ ಬಾಬು, ಹಿನ್ನೆಲೆ ಗಾಯಕ ಮತ್ತು ಕಾರ್ಯಕ್ರಮದ ಮುಖ್ಯ ಸಂಯೋಜಕ ರಮೇಶ್ಚಂದ್ರ ಉಪಸ್ಥಿತರಿರಲಿದ್ದಾರೆ.

    ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶ್ರೀಮತಿ ಜಯಶ್ರೀ ಅಮರನಾಥ ಶೆಟ್ಟಿ ಅವರು ದೀಪಪ್ರಜ್ವಲನಗೊಳಿಸಿ ಉದ್ಘಾಟಿಸುವರು. ವಿಧಾನಸಭೆಯ ಅಧ್ಯಕ್ಷರಾಗಿರುವ ಮಾನ್ಯ ಯು. ಟಿ. ಖಾದರ್, ಮಂಗಳೂರಿನ ಮಹಾಪೌರರಾಗಿರುವ ಜಯಾನಂದ ಅಂಚನ್, ಸ್ಥಳೀಯ ಶಾಸಕರಾಗಿರುವ ಡಿ. ವೇದವ್ಯಾಸ್ ಕಾಮತ್, ಉಡುಪಿಯ ಶಾಸಕರಾಗಿರುವ ಯಶ್‌ಪಾಲ್ ಸುವರ್ಣ, ಕಾಪು ಕ್ಷೇತ್ರದ ಶಾಸಕರಾಗಿರುವ ಸುರೇಶ್ ಶೆಟ್ಟಿ ಗುರ್ಮೆ, ಸಿನಿಮಾ ನಿರ್ಮಾಪಕ ಚಿನ್ನೇಗೌಡ, ನಟ ಸುಂದರ್ ರಾಜ್, ಹಿನ್ನೆಲೆ ಗಾಯಕಿ ವಾಣಿ ಹರಿಕೃ?, ಶ್ರೀ ಧನಲಕ್ಷ್ಮೀ ಗ್ರೂಪಿನ ಶ್ರೀಪತಿ ಭಟ್, ಗುರು ಬೆಳದಿಂಗಳು ಪ್ರತಿ?ನದ ಪದ್ಮರಾಜ್ ರಾಮಯ್ಯ, ಮೂಡ ಅಧ್ಯಕ್ಷ ರವಿಶಂಕರ್ ಮಿಜಾರ್, ಕಾರ್ಡೋಲೈಟ್ ಸ್ಪೆ?ಲಿಟಿ ಕೆಮಿಕಲ್ಸ್ ಇಂಡಿಯಾದ ಜನರಲ್ ಮ್ಯಾನೇಜರ್ ದಿವಾಕರ್ ಬಿಜೈ, ರಾಜ್ಯ ಇಂಟಕ್ ಕಾರ್ಯಾಧ್ಯಕ್ಷರಾಗಿರುವ ರಾಕೇಶ್ ಮಲ್ಲಿ, ಶ್ರೀ ಸಾಯಿ ಮಂದಿರ ತೋಟದಮನೆಯ ದಿವಾಕರ ಶೆಟ್ಟಿ ಕೊಡವೂರು, ಇಂಡಸ್ಟ್ರಿಯಲ್ ಕ್ಯಾಟರರ್ಸ್ ಸಂಸ್ಥೆಯ ಪ್ರಭಾಕರ ಪೂಜಾರಿ, ನಿವೃತ್ತ ಎಸ್ಪಿ ಜಯಂತ್ ಶೆಟ್ಟಿ ಹಾಗೂ ಹಿರಿಯ ನ್ಯಾಯವಾದಿ ವರದರಾಜ್ ಎ., ಅಲೇರಿ ಶ್ರೀ ಸತ್ಯ ಸಾರಮಾನಿ – ಕಾನದ ಕಟದ ಮೂಲಕ್ಷೇತ್ರದ ಅಧ್ಯಕ್ಷರಾಗಿರುವ ಶಿವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

    ಜೂನ್ ೧ರ ಸಂಜೆ ೪ ರಿಂದ ೯ ಗಂಟೆಯವರೆಗೆ, ’ಮಧುವನ ಕರೆದರೆ’ ಖ್ಯಾತಿಯ ವಾಣಿ ಹರಿಕೃ? ಉಪಸ್ಥಿತಿಯೊಂದಿಗೆ, ರಮೇಶ್ಚಂದ್ರ ಸಾರಥ್ಯದಲ್ಲಿ, ಎಸ್ಪಿಎಲ್ ಟೀಂ ಲೀಡರ್‌ಗಳಾಗಿರುವ ಪಂಚಮ್ ಹಳೆಬಂಡಿ, ಪ್ರತಿಮಾ ಭಟ್, ಸುರೇಖಾ ಹೆಗ್ಡೆ, ರಾಧಿಕಾ ಕಲ್ಲೂರಾಯ, ರಶ್ಮಿ ಚಿಕ್ಕಮಗಳೂರು, ಶ್ರೀಕೃಪಾ, ಶಶಿಕಿರಣ್, ರವೀಂದ್ರ ಪ್ರಭು ಹಾಗೂ ಮಿಥುನ್ ವಿದ್ಯಾಪುರ ಇವರ ಸಮ್ಮಿಲನದೊಂದಿಗೆ, ವಿಜೇತ ತಂಡಗಳ ಸಮಾಗಮದೊಂದಿಗೆ ಕಣ್ಮನ ಸೆಳೆಯುವ ’ಪಂಚಭಾ? ರಸಮಂಜರಿ’ ಜರುಗಲಿದೆ.

    Click here

    Click here

    Click here

    Call us

    Call us

    ಈ ಸಂದರ್ಭದಲ್ಲಿ ಕಲಾ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಆಳ್ವಾಸ್ ಶಿಕ್ಷಣ ಪ್ರತಿ?ನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರಿಗೆ ಕಲಾವೀರ ತಿಲಕರತ್ನ ಗೌರವ ಪ್ರಶಸ್ತಿ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಭೀ? ಖ್ಯಾತಿಯ ಮನೋಹರ್ ಪ್ರಸಾದ್ ಅವರಿಗೆ ಸಕಲ ಕಲಾಸಂಪನ್ನ ಗೌರವ ಪ್ರಶಸ್ತಿ, ಸಂಗೀತ ಕ್ಷೇತ್ರದಲ್ಲಿನ ಜೀವಮಾನ ಸಾಧನೆ ಪ್ರಶಸ್ತಿಯನ್ನು ಠಾಗೋರ್ ದಾಸ್ ಮತ್ತು ಶಾರದಾ ಬಾರ್ಕೂರ್ ಅವರಿಗೆ ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವ ಕಲಾ ಸಾಧಕ ಪ್ರಶಸ್ತಿ, ವಿಶೇ? ಚೇತನ ಕಲಾ ಸಾಧಕ ಪ್ರಶಸ್ತಿ, ಗೌರವ ಕ್ರೀಡಾ ಸಾಧಕ ಪ್ರಶಸ್ತಿ, ಗೌರವ ಸಮಾಜಸೇವಾ ರತ್ನ ಪ್ರಶಸ್ತಿ ಹಾಗೂ ಗೌರವ ಕಲಾಪೋ?ಕ ರತ್ನ ಪ್ರಶಸ್ತಿ ನೀಡಲಾಗುವುದು.

    ಪ್ರಶಸ್ತಿ ಪ್ರದಾನ, ಬಹುಮಾನ ವಿತರಣೆ ಜೊತೆಗಿನ ರಸಮಂಜರಿ ಕಾರ್ಯಕ್ರಮದ ನೇರಪ್ರಸಾರವನ್ನು ವಿ೪ ವಾಹಿನಿ ಹಾಗೂ ಇತರ ಸಹಭಾಗಿ ಯುಟ್ಯೂಬ್ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಎರಡು ದಿನದ ಸ್ಪರ್ಧೆಯನ್ನು ಕಂತುಗಳಾಗಿ ವಿ೪ ವಾಹಿನಿ ಹಾಗೂ ಸಹಯೋಗಿ ಯುಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.

    ಈ ಕಾರ್ಯಕ್ರಮದಲ್ಲಿ ಸಂಗ್ರಹವಾಗಿ ಉಳಿದ ಹಣದಲ್ಲಿ ವಿಶೇ? ಚೇತನ ಮಕ್ಕಳಿಗೆ ಹಾಗೂ ಸಂಸ್ಥೆಗಳಿಗೆ ಸಹಾಯ ಹಾಗೂ ಹಿರಿಯ ಕಲಾವಿದರಿಗೆ ಮಾಸಾಶನ ವ್ಯವಸ್ಥೆಯನ್ನು ಮಾಡಲಾಗುವುದು. ಅರುಣ್ಯ ಫೌಂಡೇಶನ್ ಕೃಷಿ, ಗ್ರಾಮೀಣಾಭಿವೃದ್ಧಿ, ಯುವಸಬಲೀಕರಣ, ಕಲೆ, ಸಂಸ್ಕೃತಿ, ಶಿಕ್ಷಣ, ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿದ್ದು, ಕಳೆದ ೫ ವ?ಗಳಿಂದ ಸಕ್ರೀಯವಾಗಿದೆ. ದಾಸ್ ಕುಡ್ಲ ಇವೆಂಟ್ಸ್ ರಾಜ್ಯದ ಸಂಗೀತ ಕಲಾವಿದರಿಗೆ ಪ್ರೊತ್ಸಾಹ, ಹಾಗೂ ವೇದಿಕೆಯನ್ನು ನೀಡುತ್ತಿದೆ. ಸುರ್‌ಸಂಗಮ್ ಆರ್ಕೆಸ್ಟ್ರಾ ಮೂಲಕ ಮಂಗಳೂರು ದಸರಾ ಆಚರಣೆಯಲ್ಲಿ ಸಾಂಸ್ಕೃತಿಕ ಉತ್ಸವವನ್ನು ಸತತವಾಗಿ ಆರು ವ?ಗಳ ಕಾಲ ಆಯೋಜಿಸಿರುವುದು, ಕರಾವಳಿಯ ಸಂಗೀತ ಪ್ರಿಯರ ಮನಸ್ಸಿನಲ್ಲಿ ಗಾಢವಾದ ಛಾಪು ಮೂಡಿಸಿದೆ.

    ಪತ್ರಿಕಾಗೋಷ್ಠಿ ವೇಳೆ ರಮೇಶ್ಚಂದ್ರ, ಮುಖ್ಯ ಸಂಯೋಜಕರು, ವಿಕ್ರಮ್ ಕೆ., ಮ್ಯಾನೆಜಿಂಗ್ ಟ್ರಸ್ಟಿ, ಅರುಣ್ಯ ಫೌಂಡೇಶನ್, ಸದಾಶಿವದಾಸ್ ಪಾಂಡೇಶ್ವರ, ದಾಸ್ ಕುಡ್ಲ ಇವೆಂಟ್ಸ್, ನಾರಾಯಣ ರಾಜ್, ಸಂಯೋಜನಾ ಸದಸ್ಯರು, ಶ್ರೀನಿವಾಸ ಪೆಜತ್ತಾಯ, ಕಾರ್ಯದರ್ಶಿ, ಅರುಣ್ಯ ಫೌಂಡೇಶನ್ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    18/12/2025

    ಸಣ್ಣ ಕೈಗಾರಿಕೆಗಳು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಕಾರ್ಯನಿರ್ವಹಿಸಬೇಕು: ಸಿ.ಇ.ಓ ಪ್ರತೀಕ್ ಬಾಯಲ್

    18/12/2025

    ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

    17/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ
    • ಸುಜ್ಞಾನ ಪಿಯು ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.