ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಸರ್ಕಾರಿ ಆಸ್ಪತ್ರೆ ಕಟ್ಟಡ ಶಿಥಿಲ. ಹೊಸ ಕಟ್ಟಡದ ಅವಶ್ಯಕತೆ ಇದೆ. ವೈದ್ಯರ ಕೊರತೆ. ಸಿಬ್ಬಂದಿ ಕೊರತೆ ಇದೆ. ಹಳೆಯ ವಾಹನ ಮೂಲೆ ಸೇರಿದೆ. ಬೇರೆ ವಾಹನ ಕೊಟ್ಟರೆ ಮತ್ತಷ್ಟು ಸೇವೆಗೆ ಅನಕೂಲವಾಗುತ್ತದೆ. ಲ್ಯಾಬ್ ಟೆಕ್ನಿಶಿಯನ್ ನಿಂದ ಹಿಡಿದು ಆಶಾ ಕಾರ್ಯಕರ್ತೆಯರ ತನಕ ಕೊರತೆ. ಐಸಿಯು ವಾರ್ಡ್ ಸಮಸ್ಯೆ ಇದೆ ಎಂದು ಒಪ್ಪಿಕೊಂಡ ವೈದ್ಯಾಧಿಕಾರಿ.
ಇದು ಕುಂದಾಪುರ ತಾಲೂಕು ಪಂಚಾಯಿತಿ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆ ಸ್ಥಿತಿಗತಿಗಳ ಬಗ್ಗೆ ನಡೆದ ಸಭೆಯಲ್ಲಿ ವೈದ್ಯರು ಕೊರತೆಗಳ ಪಟ್ಟಿ ಬಿಚ್ಚಿಟ್ಟಿದ್ದು ಹೀಗೆ.
ಕೋಟ ಆಸ್ಪತ್ರೆ ನಾಲ್ಕು ಉಪಕೇಂದ್ರ ಹೊಂದಿದ್ದು, 2 ಪೋಸ್ಟ್ ಖಾಲಿ, ಬಸ್ರೂರು ಆರೋಗ್ಯ ಕೇಂದ್ರ ಪಂಚಾಯಿತಿ ಮೂಲಕ ನೀರಿನ ಸಮಸ್ಯೆ ನೀಗಿಕೊಂಡರೂ ಕಟ್ಟಡ ಹಳತು, ಕೆದೂರು ಪರ್ಮನೆಂಟ್ ಪೋಸ್ಟ್ ಖಾಲಿಯಿದ್ದು, ಮಂದಾರ್ತಿ ಆಸ್ಪತ್ರೆ ಜಾಗದ ದಾಖಲೆ ಜೊತೆ ನೀರಿನ ಸಮಸ್ಯೆ ಇದೆ.
ಸೈಬ್ರಕಟ್ಟೆಯಲ್ಲಿ ನೀರಿನ ಸಮಸ್ಯೆ ಹುದ್ದೆಗಳು ಖಾಲಿ, ಗುಡ್ಡಗಾಡ ಪ್ರದೇಶದ ಆರೋಗ್ಯ ಕೇಂದ್ರಕ್ಕೆ ವಾಹನ ಸಮಸ್ಯೆ, ಬಾರ್ಕೂರು ಕೇಂದ್ರಕ್ಕೆ ಹೊಸ ಕಟ್ಟಡ ವಾಹನ ಬೇಕು. ಆವರ್ಸೆ ಕೇಂದ್ರಕ್ಕೆ ವೆಕೆನ್ಸಿ ಬೇಕು. ಕೊಡಿ ಬೆಂಗ್ರೆಗೆ ನೀರು ಬೇಕು. ಸಾಲಿಗ್ರಾಮ ಕೇಂದ್ರದಲ್ಲಿ ಗುದ್ದೆ ಖಾಲಿ ಖಾಲಿ ಎಂದು ಆಯಾಕೇಂದ್ರದ ವೈದ್ಯಾರುಗಳು ಸಮಸ್ಯೆ ಅನಾವರಣ ಮಾಡಿದ್ದು ಹೀಗೆ. ಸಮಾಧನದ ಅಂಶ ಎಂದರೆ ಔಷಧಗಳ ಕೊರತೆಯಿಲ್ಲ.
ಕುಂದಾಪುರ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಿಕ್ಕಪ್ರಶಸ್ತಿ, ದಾನಿಗಳು, ಸಂಘ ಸಂಸ್ಥೆಗಳ ಕೃಪೆಯಿಂದ ಆಸ್ಪತ್ರೆಗೆ ದೊರೆತ ಬಳುವಳಿ, ವ್ಯವಸ್ಥೆ ಬಗ್ಗೆ ಸುಧೀರ್ಘ ಹೇಳಿಕೆ ನೀಡಿದ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಬರ್ಟ್ ರೊಬೆಲ್ಲೊ ಐಸಿಯು ವಾರ್ಡ್ ಸಮಸ್ಯೆ ಸಣ್ಣ ಸಮಸ್ಯೆ ಇದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಮಾತನಾಡಿ, ನಗರ ಪಿಎಚ್ಸಿ ಮಂಜೂರಾಗಬೇಕು, ಟ್ರೋಮಾ ಸೆಂಟರ್, ಕಿಚನ್ ಬೇಕು. ವಾಕ್ ಶ್ರವಣ ಕೇಂದ್ರದ ಕಟ್ಟಡ ಉದ್ಘಾಟಿಸಿ, ದಾನಿಗಳನ್ನು ಸಮ್ಮಾನಿಸಲು ಶಾಸಕರು ದಿನ ನಿಗದಿ ಮಾಡುವಂತೆ ಸೂಚಿಸಿದರು.
ವೈದ್ಯರ ಸಮಸ್ಯೆ ಆಲಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ನನ್ನಿಂದ ಎಷ್ಟೋಗುತ್ತೋ ಗೊತ್ತಲಿ. ಆದರೆ ಸಮಸ್ಯೆ ಪರಿಹಾರದ ಪ್ರಯತ್ನವಂತೂ ಮಾಡುತ್ತೇನೆ ಎಂಬ ಭವವಸೆ ನೀಡಿ, ಶಾಸಕನಾಗಿ ಸಮಸ್ಯೆ ಆಲಿಸುವುದು ಕರ್ತವ್ಯವಾಗಿದ್ದು, ಆರೋಗ್ಯ ಇಲಾಖೆ ಒಂದು ಸ್ಪಷ್ಟ ಚಿತ್ರಣ ಸಿಕ್ಕಿದೆ. ಎಲ್ಲವನ್ನೂ ನಾಳೆಯೇ ಮಾಡುತ್ತೇನೆ ಎನ್ನಲಾರೆ. ಪರಿಹಾರದ ಪಯತ್ನವಂತೂ ನಿರಂತರ ನಡೆಯುತ್ತದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ನಾಗಭೂಷಣ ಉಡುಪ, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್ ಇದ್ದರು.