ಕುಂದಾಪುರ: ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ಕಲ್ಯಾಣ ಮಂದಿರದಲ್ಲಿ ಕಾಶೀ ಮಠದ ಕಿರಿಯ ಯತಿಗಳಾದ ಶ್ರೀ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರ ಚಾತುರ್ಮಾಸ ಅವಧಿಯಲ್ಲಿ ವಿಶೇಷ ಕಾರ್ಯಕ್ರಮವಾಗಿ ಮೂರು ದಿನಗಳ ಕಾಲ ಶ್ರೀ ಜಗನ್ನಾಥದಾಸ ವಿರಚಿತ ’ಹರಿಕಥಾಮೃತ ಸಾರ’ ಇದರ ಆಯ್ದ ಸಂಧಿಗಳ ಉಪನ್ಯಾಸವು ಬಿಂದುಮಾಧವ ಆಚಾರ್ಯ ನಾಗಸಂಪಿಗೆ ಅವರಿಂದ ಹಾಗೂ ಗಾಯನವು ಅನಂತ ಕುಲಕರ್ಣಿ ಬಾಗಲಕೋಟೆ ಅವರಿಂದ ನಡೆಯಿತು.
ಈ ಮೂರು ದಿನ ಅನುಕ್ರಮವಾಗಿ ಶಂಕರ ಶ್ಯಾನುಭಾಗ್, ಪಾಂಡುರಂಗ ನಾಯಕ್ ಪುತ್ತೂರು ಹಾಗೂ ಅನಂತ ಕುಲಕರ್ಣಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಜ್ಞಾನಾಮೃತ ಸಂಸ್ಕಾರದೆಡೆಗೆ ನಡೆ ಎಂಬ ಸರಣಿ ಜ್ಞಾನಯಜ್ಞದ ಕಾರ್ಯಕ್ರಮದಲ್ಲಿ ಶಂಕರ ಶ್ಯಾನುಭಾಗ್ ಅವರು ಭಜನೆ ಅಂದು-ಇಂದು-ಮುಂದು ಎಂಬ ವಿಷಯದ ಬಗ್ಗೆ ಮಾತನಾಡಿದರು.