ಗಂಗೊಳ್ಳಿ : ಸೇವಾ ಸಂಘ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ೪೧ನೇ ವರ್ಷದ ಶ್ರೀ ಶಾರದಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಮುಳ್ಳಿಕಟ್ಟೆಯಿಂದ ಶ್ರೀ ಶಾರದಾ ಮಂಟಪದ ತನಕ ಶ್ರೀ ದೇವಿಯ ವಿಗ್ರಹ ಪ್ರತಿಷ್ಠಾಪನ ಮೆರವಣಿಗೆ ಅದ್ದೂರಿಯಿಂದ ನಡೆಯಿತು. ಶ್ರೀ ಶಾರದಾ ಮಂಟಪದಲ್ಲಿ ಶ್ರೀದೇವಿಯ ವಿಗ್ರಹದ ಪ್ರತಿಷ್ಠಾಪನೆಯ ಕಾರ್ಯಕ್ರಮಗಳು ಸಮಿತಿಯ ಅಧ್ಯಕ್ಷ ಸತೀಶ ಜಿ. ನೇತೃತ್ವದಲ್ಲಿ ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಪುರೋಹಿತರಾದ ವೇದಮೂರ್ತಿ ಜಿ.ನಾರಾಯಣ ಆಚಾರ್ಯ, ಉದಯಶಂಕರ ರಾವ್, ಶ್ರೀಧರ ಸಕ್ಲಾತಿ, ಗೋಪಾಲ ಚಂದನ್, ಲಕ್ಷ್ಮೀಕಾಂತ ಮಡಿವಾಳ, ಸುರೇಂದ್ರ ಖಾರ್ವಿ, ಸೌಪರ್ಣಿಕ ಬಸವ ಖಾರ್ವಿ, ವೈ.ಸುರೇಶ ಖಾರ್ವಿ, ಟಿ.ವಾಸುದೇವ ದೇವಾಡಿಗ, ರತ್ನಾಕರ ಗಾಣಿಗ, ರಾಘವೇಂದ್ರ ಗಾಣಿಗ, ಶೇಖರ ಜಿ., ರವೀಂದ್ರ ಪಟೇಲ್, ಅಶೋಕ ಪೂಜಾರಿ, ಗೋಪಾಲ ಖಾರ್ವಿ ದಾವನಮನೆ, ಗಿರೀಶ ಕುಮಾರ್, ರಘುವೀರ ಕೆ., ನಿತ್ಯಾನಂದ ಖಾರ್ವಿ, ದಿಲೀಪ ಖಾರ್ವಿ, ಮಹಿಳಾ ಮಂಡಳಿಯ ಪ್ರೇಮಾ ಸಿ.ಪೂಜಾರಿ, ಅನಿತಾ ಶೇಟ್, ರೇಣುಕಾ ವಾಸುದೇವ ದೇವಾಡಿಗ, ಶಾರದಾ ಎಸ್.ಖಾರ್ವಿ, ಜಯಂತಿ ಆರ್.ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.