ಪಂಜು ಗಂಗೊಳ್ಳಿಗೆ ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಿಘಂಟು ಬ್ರಹ್ಮ ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ 2023ನೇ ಸಾಲಿನ ಈ ಪುರಸ್ಕಾರಕ್ಕೆ ‘ಕುಂದಾಪ್ರ ಕನ್ನಡ’ ನಿಘಂಟು ಸಂಪಾದಕ ಪಂಜು ಗಂಗೊಳ್ಳಿ ಅವರು ಆಯ್ಕೆಯಾಗಿದ್ದಾರೆ.

Call us

Click Here

ಸುಮಾರು 20 ವರ್ಷಗಳ ಅವಿರತ ಶ್ರಮ, ಅಧ್ಯಯನ, ಸಂಶೋಧನೆ ಮತ್ತು ಸಂಘಟನೆಯಿಂದ ಸಿದ್ಧವಾಗಿರುವ ಕುಂದಾಪ್ರ ಕನಡ ನಿಘಂಟು, ಕನ್ನಡ ಭಾಷೆಗೆ ಅತ್ಯುತ್ತಮ ಕೊಡುಗೆ. ಜಿ.ವಿ ಅವರ 111ನೇ ಹುಟ್ಟುಹಬ್ಬದ ದಿನವಾದ ಆ.23ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕಥೆಕೂಟದ ಗೋಪಾಲಕೃಷ್ಣಕುಂಟನಿ ತಿಳಿಸಿದ್ದಾರೆ.

‘ಕಥೆಕೂಟ’ ಬಳಗವು ನಿಘಂಟು ಬ್ರಹ್ಮ ಜಿ. ವೆಂಕಟಸುಬ್ಬಯ್ಯ ಸ್ಮರಣಾರ್ಥ, ಭಾಷೆಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ, ಭಾಷೆಗೆ ಸೃಜನಶೀಲ ಕೊಡುಗೆ ನೀಡಿದ ಮತ್ತು ಭಾಷೆಯ ಸಾಧ್ಯತೆಗಳನ್ನು ವಿಸ್ತರಿಸುವ ಕೆಲಸದಲ್ಲಿ ನಿರತರಾಗಿರುವ ಪ್ರತಿಭಾವಂತರಿಗೆ ಪ್ರತಿವರ್ಷ ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ ನೀಡಿ ಗೌರವಿಸಲು ನಿರ್ಧರಿಸಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು, ಫಲಕವನ್ನು ಒಳಗೊಂಡಿರುತ್ತದೆ.

ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಗಿರೀಶ್ ರಾವ್ ಹತ್ವಾರ್ (ಜೋಗಿ), ಗೋಪಾಲಕೃಷ್ಣ ಕುಂಟನಿ, ಜಿ.ವಿ. ಅರುಣ ಇದ್ದರು.

Leave a Reply