ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಯಂತಹ ಸಂಸ್ಥೆಯಿಂದ ಗ್ರಾಮೀಣ ಭಾಗದ ಪ್ರತಿಭೆಗಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ಹಾಗಾಗಿ ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಡೆಸಾರ್ಟ್ ಸಿಸ್ಟಂ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿ ವಿಶ್ವನಾಥ ಶೇಟ್ ಹೇಳಿದರು.
ಅವರು ಯಡ್ತರೆ ಜೆಎನ್ಆರ್ ಕಲಾಮಂದಿರದಲ್ಲಿ ಜೆಸಿಐ ಬೈಂದೂರು ಸಿಟಿ ಆಥಿತ್ಯದಲ್ಲಿ ಜರುಗಿದ ಜೆಸಿಐ ವಲಯ 15ರ ಮಹಿಳಾ ಜೆಸಿ ಹಾಗೂ ಜ್ಯೂನಿಯರ್ ಜೆಸಿ ಸಮ್ಮೇಳನ – ಚುಕ್ಕಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇಂದು ಅವಕಾಶಗಳು ಹಲವಿದೆ ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳುವ ಮಾರ್ಗದರ್ಶನ ಯುವಜನತೆಗೆ ಬೇಕಾಗಿದೆ ಎಂದರು.
ಜೆಸಿಐ ವಲಯದ ಮೊದಲ ಮಹಿಳೆ ಶಿಲ್ಪಾ ಪುರುಶೋತ್ತಮ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಜೆಸಿಐ ಝೋನ್ 15ರ ಲೇಡಿ ಜೆಸಿ ಕೋ-ಆರ್ಡಿನೇಟರ್ ಸುಮನಾ ಪೊಳಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರ್.ಜೆ. ನಯನಾ ದಿಕ್ಸೂಚಿ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿಐ ವಲಯಾಧ್ಯಕ್ಷ ಪುರುಶೋತ್ತಮ ಶೆಟ್ಟಿ, ನಿಕಟಪೂರ್ವ ವಲಯಾಧ್ಯಕ್ಷ ರಾಯನ್ ಉದಯ ಕ್ರಾಸ್ಟಾ, ವಲಯ ರಕ್ತದಾನ ವಿಭಾಗದ ವಲಯಾಧಿಕಾರಿ ಪ್ರವೀಣ ಪೂಜಾರಿ, ಎಕ್ಸಿಕ್ಯೂಟಿವ್ ಅಸಿಸ್ಟೆನ್ಸ್ ಟು ಝಡ್ಪಿ ಕಾರ್ತಿಕ್ ಬಿ, ಐಡಿಯಾತ್ರ ಕೋ-ಆರ್ಡಿನೇಟರ್ ಗಿರೀಶ್ ಸಾಲಿಯಾನ್, ಸ್ಕಿಲ್ ಡೆವಲಪ್ಮೆಂಟಲ್ ಝೋನ್ ಕೋ-ಆರ್ಟಿನೇಟರ್ ಡಾ. ವಿಜಯ ನಗಲೂರು, ಜೇಸಿ ಸಪ್ತಾಹ ನಿರ್ದೇಶಕ ಚಂದ್ರಹಾಸ ಕೊಪ್ಪಲ, ಒನ್ ಸೆನಿಟೆಬಲ್ ವಿಭಾಗದ ವಲಯಾಧಿಕಾರಿ ನಿರ್ಮಲಾ ಜಯರಾಮ್, ವಲಯ ಪ್ರಶಸ್ತಿ ಹಾಗೂ ಮನ್ನಣೆ ವಿಭಾಗದ ವಲಯಾಧಿಕಾರಿ ಪಾಂಡುರಂಗ ಅಳ್ವೆಗದ್ದೆ, ಎಂಪವರಿಂಗ್ ಯೂಥ್ ಕೋ-ಆರ್ಡಿನೇಟರ್ ಚಂದನ್ ರಾಬಿನ್ಸನ್, ಗೋಗ್ರಿನ್ ವಿಭಾಗದ ಕೋ-ಆರ್ಡಿನೇಟರ್ ನವೀನ್, ಕಮ್ಯೂನಿಟಿ ಡೆವಲಪ್ಮೆಂಟ್ ಕೋ-ಆರ್ಡಿನೇಟರ್ ಗುರುರಾಜ ಅಜ್ಜಾವರ, ಜೆಸಿಐ ಝೋನ್ ವಿವಿಧ ಪದಾಧಿಕಾರಿಗಳಾದ ಶಶಿರಾಜ್ ರೈ, ಸಂತೋಷ್ ಕುಮಾರ್, ಕೃಷ್ಣ ಪವಾರ್, ಮೋಹನ್ ಚಂದ್ರ, ವಿಜಯನರಸಿಂಹ ಐತಾಳ್, ಅಡ್ವೈಸರ್ ಪರಿಯಪ್ಪ, ವಿನೀತ್, ಸ್ವಾತಿ ಜೆ. ರೈ, ಸ್ವರೂಪ್ ಶೇಖರ್, ನಾಗರಾಜ ಪೂಜಾರಿ, ಅಕ್ಷತಾ ಗಿರೀಶ್ ಐತಾಳ್, ಉಷಾ ಎನ್ ಕಲ್ಮಾಡಿ, ಪ್ರದೀಪ್ ಬಾಕಿಲಾ, ಪ್ರಶಾಂತ್ ಲೈಲಾ, ಕಾಶಿನಾಥ್ ಗೊಗಟೆ, ಸತೀಶ್ ಪೂಜಾರಿ, ಮಂಜುನಾಥ್ ದೇವಾಡಿಗ, ಜಯಶ್ರೀ ಮಿತ್ರಕುಮಾರ್, ಅಭಿಪಾಲ್ ಬಿ.ಐ, ಸುಧಾಕರ ಆಚಾರ್ಯ, ಭರತ್ ಶೆಟ್ಟಿ, ಅಜಿತ್ ಕುಮಾರ್ ರೈ, ದೇವರಾಜ್ ಪುತ್ತಾಜೆ ಉಪಸ್ಥಿತರಿದ್ದರು.
ಜೆಸಿಐ ಬೈಂದೂರು ಸಿಟಿ ಅಧ್ಯಕ್ಷ ಕೆ. ನರೇಂದ್ರ ಶೇಟ್, ಜೆಜೆಸಿ ವಿಭಾಗದ ಅಧ್ಯಕ್ಷ ಹರ್ಷಿತ್ ಎನ್. ಶೇಟ್, ಲೇಡಿ ಜೆಸಿ ಕೋ-ಆರ್ಡಿನೇಟರ್ ಗುಲಾಬಿ ಮರವಂತೆ, ಜೆಸಿಐ ಬೈಂದೂರು ಸಿಟಿ ಕಾರ್ಯದರ್ಶಿ ಸತೀಶ್ ಎಂ, ಚುಕ್ಕಿ ಕಾರ್ಯಕ್ರಮದ ಸಂಯೋಜಕಿ ಕವಿತಾ ಎನ್. ಶೇಟ್ ಇದ್ದರು.
ಮಹಿಳಾ ಜೇಸಿ ಹಾಗೂ ಜೆಜೆಸಿಗಳಿಗೆ ವಿವಿಧ ಸ್ಪರ್ಧೆ ಹಾಗೂ ಸಾಧಕ ಜೇಸಿ ಸಂಸ್ಥೆಗಳಿಗೆ ಪುರಸ್ಕಾರ, ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಜೆಸಿಐ ವಲಯದ ವಿವಿಧ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಜೆಸಿಐ ಬೈಂದೂರು ಸಿಟಿ ಕಾರ್ಯದರ್ಶಿ ಸತೀಶ್ ಎಂ, ಹಾಗೂ ಚೈತ್ರಾ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ದೀಪಿಕಾ ಪ್ರಾರ್ಥಿಸಿದರು. ಸ್ಥಾಪಕಾಧ್ಯಕ್ಷ ಮಣಿಕಂಠ ದೇವಾಡಿಗ, ಅನಿತಾ ಮರವಂತೆ, ರಾಘವೇಂದ್ರ ಯಡ್ತರೆ, ಪ್ರೀಯದರ್ಶಿನಿ ಬೆಸ್ಕೂರು, ಭಾನುಮತಿ ಬಿ.ಕೆ., ಸವಿತಾ ದಿನೇಶ್ ಅತಿಥಿಗಳ ಪರಿಚಯ ವಾಚಿಸಿದರು.