ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಉಳ್ಳೂರು ಕಂದಾವರ ಗುಂಡಾಡಿಯ ನಿವಾಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವನ ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದಿರುವುದನ್ನು ಮನಗಂಡು ಸೆಲ್ಕೋ ಸೋಲಾರ್ ವತಿಯಿಂದ ಉಚಿತವಾಗಿ ಎರಡು ಸೋಲಾರ್ ಲೈಟ್ ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಸಿಸ್ಟಮ್ ಅಳವಡಿಸಲಾಯಿತು.
ಬಸ್ರೂರು ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಮಣಿಕಂಠನ ತಂಗಿ ಐಶ್ವರ್ಯ ವಿದ್ಯಾಭ್ಯಾಸ ತ್ಯಜಿಸಿ ತಾಯಿಯೊಂದಿಗೆ ಮನೆಯಲ್ಲಿ ಗೇರು ಬೀಜ ಸುಲಿಯುವ ಕೆಲಸ ಮಾಡುತ್ತಿದ್ದಾಳೆ.
ಸೋಲಾರ್ ಲೈಟ್ ಅಳವಡಿಸುವ ಕಾರ್ಯಕ್ರಮದಲ್ಲಿ ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನುಪಮಾ ಶೆಟ್ಟಿ, ಸೆಲ್ಕೋ ಸೋಲಾರ್ ಸಂಸ್ಥೆಯ ಏರಿಯ ಮ್ಯಾನೇಜರ್ ಶೇಖರ್ ಶೆಟ್ಟಿ , ಶಾಖಾ ಪ್ರಬಂಧಕರಾದ ಮಂಜುನಾಥ್, ಧರ್ಮಸ್ಥಳ ಗ್ರಾಮಾಅಭಿವೃದ್ಧಿ ಯೋಜನೆಯ ಬಸ್ರೂರು ವಲಯದ ವಲಯ ಅಧ್ಯಕ್ಷ ಅಶೋಕ್ ಕೆರೆಕಟ್ಟೆ, ವಲಯದ ಮೇಲ್ವಿಚಾರಕಿ ಶಕುಂತಲಾ, ಒಕ್ಕೂಟದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಉದಯ್ ಹೇರಿಕೆರೆ, ಸೆಲ್ಕೋ ಸೋಲಾರ್ ಸೇವಾ ಪ್ರತಿನಿಧಿ ಮಂಜುನಾಥ್ ಶೆಟ್ಟಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಸುಜಾತ ಉಪಸ್ಥಿದ್ದರಿದ್ದರು.