ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕ್ಷ್ಯುಲ್ಲಕ ಕಾರಣಕ್ಕೆ 20ಕ್ಕೂ ಹೆಚ್ಚು ಜಾನುವಾರುಗಳಿಗೆ ಗುಂಡಿಕ್ಕಿ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ಅಂಗಡಿ ಜೆಡ್ಡು ಎಂಬಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವುದಾಗಿ ಬೆಳಕಿಗೆ ಬಂದಿದ್ದು, ಪರಿಣಾಮವಾಗಿ ನಾಲ್ಕು ದನಗಳು ಸತ್ತು 15 ದನಗಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಸೆ.23ರಂದು ಸ್ಥಳೀಯ ನಿವಾಸಿ ಗುಲಾಬಿ ಎಂಬುವರಿಗೆ ಸೇರಿದ ದನವೊಂದನ್ನು ಮೇಯಲು ಬಿಟ್ಟಿದ್ದು ಅದು ನರಸಿಂಹ ಎಂಬಾತನ ಗದ್ದೆಗೆ ಹೋಗಿತ್ತು. ಇದರಿಂದ ಆಕ್ರೋಶಿತಗೊಂಡ ನರಸಿಂಹ ತನ್ನ ನಾಡಕೋವಿಯಿಂದ ಗುಂಡಿಕ್ಕಿ ದನವನ್ನು ಸಾಯಿಸಿದ್ದಾನೆ. ಇದನ್ನು ಗಮನಿಸಿ ವಿಚಾರಿಸಲು ಹೋದಾಗ ಆರೋಪಿ ನರಸಿಂಹ ಗುಲಾಬಿ ಹಾಗೂ ಅವರ ಮನೆಯವರಿಗೆ ಕೋವಿಯಲ್ಲಿ ಗುರಿಯಿಟ್ಟು, ಈಗಾಗಲೇ 20ಕ್ಕೂ ಹೆಚ್ಚು ದನಗಳಿಗೆ ಗುಂಡಿಕ್ಕಿದ್ದೇನೆ. ಅದರಲ್ಲಿ ನಾಲ್ಕು ಸತ್ತಿವೆ. ಇನ್ನಳಿದವು ಸಾಯುತ್ತವೆ. ಜಾಗ್ರತೆ ಮಾಡದಿದ್ದಲ್ಲಿ ದನಗಳಿಗಾದ ಗತಿ ನಿಮಗೂ ಬರುತ್ತದೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಗುಲಾಬಿ ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.