Video ಅಪಘಾತಕ್ಕೀಡಾಗುವ ಅನಾಥ ಗೋವುಗಳ ಆಪತ್ಭಾಂದವ ಬೈಕ್ ಮೆಕ್ಯಾನಿಕ್ ಸಂಜೀವ

Click Here

Call us

Call us

Call us

Watch Video

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗುವ ನೂರಾರು ಗೋವುಗಳಿಗೆ ಆಪತ್ಬಾಂದವರಂತೆ ಸೇವೆ ಸಲ್ಲಿಸುತ್ತಿದ್ದಾರೆ ಯಡ್ತರೆಯ ಈ ಬೈಕ್ ಮೆಕ್ಯಾನಿಕ್. ಬೈಂದೂರು ತಾಲೂಕಿನ ಯಡ್ತರೆಯಲ್ಲಿ ಶ್ರೀ ದುರ್ಗಾ ಆಟೋ ವರ್ಕ್ಸ್ ಎಂಬ ಹೆಸರಿನ ಸ್ವಂತ ಗ್ಯಾರೇಜ್ ನಡೆಸುತ್ತಿರುವ ಸಂಜೀವ ದೇವಾಡಿಗ ಅವರು ಮೂರು ದಶಕಗಳ ಅನುಭವ ಹೊಂದಿರುವ ಪರಿಣತ ಬೈಕ್ ಮೆಕ್ಯಾನಿಕ್.

Click Here

Call us

Click Here

ತನ್ನ ವೃತ್ತಿಯ ಜೊತೆಗೆ ಪ್ರೌವೃತ್ತಿಯಾಗಿ ಆಯ್ದುಕೊಂಡದ್ದು ಅನಾಥ ಗೋವುಗಳ ಚಿಕಿತ್ಸೆ. ಕಳೆದ 15 ವರ್ಷದಿಂದ ಸದ್ದಿದ್ದಲೇ ಗೋಸೇವೆಯಲ್ಲಿ ತೊಡಗಿರುವ ಸಂಜೀವ ದೇವಾಡಿಗ ಅವರು, ನೂರಾರು ಗೋವುಗಳ ಪಾಲಿಗೆ ಆಪತ್ಬಾಂದವರಾಗಿದ್ದಾರೆ. ಅಪಘಾತಕ್ಕೀಡಾಗುವ ದನಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ವೈದ್ಯರ ಮಾರ್ಗದರ್ಶನದಲ್ಲಿ ತಿಂಗಳುಗಟ್ಟಲೇ ಸಲಹುತ್ತಿದ್ದಾರೆ. ತನ್ನ ವೈಯಕ್ತಿಕ ಬದುಕಿನ ನೋವುಗಳ ನಡುವೆಯೂ ಗೋಸೇವೆಯಲ್ಲಿ ಬದುಕಿನ ನೈಜ ಖುಷಿ ಕಾಣುತ್ತಿದ್ದಾರೆ.

Leave a Reply