ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೋವುಗಳನ್ನು ಕಳವು ಮಾಡಿ ಗೋಮಾಂಸ ತಯಾರಿಸುತ್ತಿದ್ದ ದಂಧೆಯನ್ನು ಬೇಧಿಸಿದ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕಾವ್ರಾಡಿ ಗ್ರಾಮದ ಕಂಡ್ಲೂರು ಕರಾಣಿ ಅಬು ಮೊಹಮ್ಮದ್ ಎಂಬವರ ಮನೆಯ ಹಿಂಬದಿಯ ಶೆಡ್‌ನಲ್ಲಿ ಝಾಕೀರ್ ಹುಸೇನ್ ಮತ್ತು ಕರಾಣಿ ಶಾಕೀರ್ ಎಂಬ ವ್ಯಕ್ತಿಗಳು ಕಳವು ಮಾಡಿದ ಗೋವುಗಳನ್ನು ತಂದು ಅಕ್ರಮವಾಗಿ ವಧೆ ಮಾಡಿ ಮಾಂಸ ತಯಾರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಬುಧವಾರ ಮಧ್ಯಾಹ್ನ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿದ್ದ ಇಬ್ಬರು ವ್ಯಕ್ತಿಗಳು ಅಲ್ಲಿದ್ದ ಕಾಲ್ಕಿತ್ತಿದ್ದಾರೆ. ಪರಾರಿಯಾರಿದ್ದ ಮೊದಲ ಆರೋಪಿ ಝಾಕೀರ್ ಹುಸೇನ್ ಎಂಬಾತನನ್ನು ಕೊನೆಗೆ ಬಂಧಿಸಿದ್ದಾರೆ.
ದಾಳಿ ನಡೆಸಿದಾಗ ಶೆಡ್ಡಿನಲ್ಲಿದ್ದ ಪ್ಲಾಸ್ಟಿಕ್ ಟಬ್‌ನಲ್ಲಿದ್ದ 152 ಕೆ.ಜಿ ಗೋವಿನ ಮಾಂಸವಿರುವುದು ಕಂಡುಬಂದಿದೆ. ಎಲ್ಲವನ್ನು ಸೀಜ್ ಮಾಡಲಾಗಿದ್ದು ಇನ್ನೋರ್ವ ಆರೋಪಿಯ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಪವನ್ ನಾಯಕ್ ಅವರ ನೇತೃತ್ವದಲ್ಲಿ, ಇನ್ವೆಸ್ಟಿಗೇಷನ್ ಪಿಎಸ್ಐ ನೂತನ, ಎ.ಎಸ್.ಐ ವಿಶ್ವನಾಥ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿದ್ದರು.