ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶಕ್ಕಾಗಿ ತ್ಯಾಗ ಮಾಡಿದ ಯೋಧ, ಹಾಗೂ ಅನ್ನ ಕೊಟ್ಟು ಜೀವನ ಪರ್ಯಂತೆ ಪೊರೆಯುತ್ತಿದ್ದು ಮಣ್ಣಿಗೆ ಋಣಿಯಾಗಿರಬೇಕು. ದೇಶಕ್ಕೆ ಸ್ವಾತಂತ್ರ್ಯಸಿಕ್ಕಿ ಅಮೃತಮಹೋತ್ಸವ ಕಾಲದಲ್ಲಿ ಅಮೃತ ಕಲಶ ಅಭಿಯಾನದ ಮೂಲಕ ತ್ಯಾಗಿಗಳ ನೆನಪು ಮಾಡಿಕೊಳ್ಳುವ ಜೊತೆ ದೇಶಕ್ಕಾಗಿ ತ್ಯಾಗ ಮಾಡಿದವರ ಸದಾ ನೆನಪಿಟ್ಟುಕೊಳ್ಳುವ ಕೆಲಸ ಮುಂದಿನ ಜನಾಂಗಕ್ಕೆ ನೆನಪಿಸುವ ಕೆಲಸ ಆಗುತ್ತದೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು.

ರಾಷ್ಟ್ರ ಹಾಗೂ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರೂ ಯುವ ಕೇಂದ್ರ, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಆಶ್ರಯದಲ್ಲಿ ಇಲ್ಲಿನ ಭಂಡಾರ್‌ಕಾರ‍್ಸ್ ಕಾಲೇಜ್ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡದೆ ನನ್ನ ದೇಶ ನನ್ನ ಮಣ್ಣಿ ಅಮೃತಕಲಶ ಜಾಥಾ ಸಭಾ ಕಾರ್ಯಕ್ರಮ ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಅಮೃತಕಲಶೋತ್ಸವ ಜಾತಾ ಶತಶತಮಾನಗಳ ಕಾಲ ಭಾರತೀಯರಲ್ಲಿ ನೆನಪಾಗಿ ಉಳಿಯಲಿದ ಎಂದರು.

ಭಂಡಾರ್‌ಕಾರ‍್ಸ್ ಕಾಲೇಜ್ ಪ್ರಾಂಶುಪಾಲ ಡಾ. ಶುಭಕರಾಚಾರಿ ಮಾತನಾಡಿದರು. ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್., ತಹಸೀಲ್ದಾರ್ ಶೋಭಾಲಕ್ಷ್ಮೀ ಹೆಚ್.ಎಸ್., ಕಾಲೇಜ್ ವಿಶ್ವಸ್ಥ ಮಂಡಳಿ ಹಿರಿಯ ನಿರ್ದೇಶಕ ಶಾಂತಾರಾಮ ಪ್ರಭು, ಪದವಿಪೂರ್ವ ಕಾಲೇಜ್ ಪ್ರಾಂಶುಪಾಲ ಡಾ. ಜಿ.ಎಂ. ಗೊಂಡ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಆರ್., ಇದ್ದರು.
ಕುಂದಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕೆ.ಜಿ. ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ನಿರೂಪಿಸಿದರು.
ನಿವೃತ್ತ ಯೋಧರಾದ ಗಣೇಶ್ ಹೆಬ್ಬಾರ್ ತ್ರಾಸಿ ಹಾಗೂ ಸುಧಾಕರ ಶೆಟ್ಟಿ ಗುಡ್ಡಮ್ಮಾಡಿ ಅವರ ಸನ್ಮಾನಿಸಲಾಯಿತು. ಇದಕ್ಕೂ ಮುನ್ನಾ ನಡೆದ ಅಮೃತಕಲಶ ಜಾಥಾಕ್ಕೆ ತಾಲೂಕು ಪಂಚಾಯಿತಿ ಕಚೇರಿ ಬಳಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಚಾಲನೆ ನೀಡಿದರು. ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜ್ ಹಾಗೂ ಡಾ.ಬಿ.ಬಿ.ಹೆಗ್ಡೆ ಕಾಲೇಜ್ ಎನ್‌ಸಿಸಿ, ನೆವಿ ದಳದ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದು, ಕುಂದಾಪುರ ಮುಖ್ಯರಸ್ತೆಯಲ್ಲಿ ಸಾಗಿ ಕುಂದೇಶ್ವರ ದೇವಸ್ಥಾನ ಬಳಿ ತಿರುವು ಪಡೆದ ಭಂಡಾರ್‌ಕಾರ‍್ಸ್ ಕಾಲೇಜ್ ಸಭಾಭವನಕ್ಕೆ ಆಗಮಿಸಿತು.
ತಾಲೂಕಿನ ಎಲ್ಲಾ ಗ್ರಾಮದ ಮಣ್ಣಿದ್ದ ಅಮೃತಕಲಶ ನೆಹರು ಯುವ ಕೇಂದ್ರದ ಸುಧಾಕರ ಅವರಿಗೆ ಹಸ್ತಾಂತರಿಸಲಾಯಿತು.