ಹೆಮ್ಮಾಡಿ ಜನತಾ ಸ್ವತಂತ್ರ ಪಿಯು ಕಾಲೇಜಿನಲ್ಲಿ ಹೆಜ್ಜೆ ಹಾಕಿದ ನವರಾತ್ರಿ ಹುಲಿಗಳು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಹೆಮ್ಮಾಡಿಯ ಜತನಾ ಸ್ವತಂತ್ರ ಪಿಯು ಕಾಲೇಜಿಗೆ ಲಗ್ಗೆ ಇಟ್ಟ ನವರಾತ್ರಿ ಹುಲಿಗಳ ತಂಡ ತಾಸೆಯ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ, ಸಾಹಸ ಪ್ರದರ್ಶಿಸುತ್ತಾ ಮೆಚ್ಚುಗೆಗೆ ಪಾತ್ರವಾಯಿತು.

Call us

Click Here

ಶನಿವಾರ ಕಾಲೇಜಿನ ಆವರಣದಲ್ಲಿ ಜೆಸಿಐ ಕುಂದಾಪುರ, ಕಿಯೋನಿಕ್ಸ್ ಯುವ.ಕಾಂ ಹಾಗೂ ಚಾಲುಕ್ಯ ಕ್ರಿಕೆಟರ್ಸ್ ಸಹಯೋಗದೊಂದಿಗೆ ಟಿ.ಟಿ. ಟೈಗರ್ಸ್ ಕುಂದಾಪುರ ತಂಡದ ಹುಲಿಗಳ ಕುಣಿತ ನವರಾತ್ರಿಯ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕವರ್ಗವನ್ನು ಪುಳಕಿತಗೊಳಿಸಿತು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ ಅವರು ಮಾತನಾಡಿ, ಕಾಲೇಜು ಆವರಣದಲ್ಲಿ ಹುಲಿವೇಷ ನೃತ್ಯ ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳು ಹತ್ತಿರದಲ್ಲಿಯೇ ಹುಲಿವೇಷದ ಸೊಗಬಗನ್ನು ನೋಡುವಂತೆ ಮಾಡಿದ ಎಲ್ಲಾ ಸಂಘ ಸಂಸ್ಥೆಗಳಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ನವರಾತ್ರಿ ಹುಲಿ ಕುಣಿತದ ಕೊನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತಾಸೆಯ ಸದ್ದಿನೊಂದಿಗೆ ಹೆಜ್ಜೆ ಹಾಕಿದರು.

ಈ ಸಂದರ್ಭ ಜೆಸಿಐ ಕುಂದಾಪುರ ಸಿಟಿ ಸ್ಥಾಪಕಾಧ್ಯಕ್ಷ ಹುಸೆನ್ ಹೈಕಾಡಿ, ಅಧ್ಯಕ್ಷೆ ಡಾ. ಸೋನಿ ಡಿಕೊಸ್ಟಾ, ಮಾಜಿ ಅಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ನಿಯೋಜಿತ ಅಧ್ಯಕ್ಷ ರಾಘವೇಂದ್ರ ಕುಲಾಲ್, ಕಿಯೋನಿಕ್ಸ್ನ ಧೀರಜ್ ಹೆಜಮಾಡಿ, ಕಾಲೇಜಿನ ಉಪಪ್ರಾಂಶುಪಾಲ ರಮೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಉದಯ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

Click here

Click here

Click here

Click Here

Call us

Call us

Leave a Reply