ಹಿರಿಯ ಪತ್ರಕರ್ತ, ಸಾಹಿತ್ಯ ಸಂಘಟಕ ಶೇಖರ ಅಜೆಕಾರು ನಿಧನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಅ.31:
ಹಿರಿಯ ಪತ್ರಕರ್ತ, ಸಾಹಿತಿ, ಸಂಘಟಕ ಶೇಖರ ಅಜೆಕಾರು (54) ಅವರು ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕಾರ್ಕಳ ತಾಲೂಕಿನ ಅಜೆಕಾರು ನಿವಾಸಿಯಾದ ಶೇಖರ್ ಅವರು ಇಂದು ಬೆಳಗ್ಗೆ ಮನೆಯಲ್ಲಿರುವಾಗ ಕುಸಿದು ಬಿದ್ದಿದ್ದರು. ಕುಟುಂಬದವರು ತಕ್ಷಣ ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದರು.

Call us

Click Here

ಶೇಖರ ಅಜೆಕಾರು ಅವರು ಕುಂದಪ್ರಭ ವಾರಪತ್ರಿಕೆಯಿಂದ ವೃತ್ತಿ ಜೀವನ ಆರಂಭಿಸಿದರು. ಮುಂಬಯಿಯ ಕರ್ನಾಟಕ ಮಲ್ಲ ಪತ್ರಿಕೆಯ ಉಪಸಂಪಾದಕರಾಗಿ, ಮಂಗಳೂರಿನ ಜನವಾಹಿನಿ ಪತ್ರಿಕೆಗಳಲ್ಲಿ ಪೂರ್ಣಕಾಲಿಕ ಪತ್ರಕರ್ತರಾಗಿ ಎರಡು ದಶಕಗಳ ಕಾಲ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಡೈಜಿವರ್ಡ್, ಕನ್ನಡಪ್ರಭ, ಉಷಾ ಕಿರಣ ಪತ್ರಿಕೆಗಳಿಗೆ ವರದಿಗಾರರಾಗಿ ಗ್ರಾಮೀಣ ಪತ್ರಿಕೋದ್ಯದಲ್ಲಿ ಹೊಸ ಹಾದಿ ತುಳಿದವರು.

ಭಂಡಾರ್ಕಾರ್ಸ್ ಕಾಲೇಜಿನ ಬಿಕಾಂ ವಿದ್ಯಾರ್ಥಿಯಾಗಿದ್ದ ಶೇಖರ್ ಅವರು, ಯುವ ಸ್ಪಂದನ ಹೆಸರಿನ ಹಸ್ತ ಪತ್ರಿಕೆ, ಮಾಸಿಕ ಮುದ್ರಿತ ಪತ್ರಿಕೆಗಳನ್ನು ಸಂಪಾದಿಸಿ ಪ್ರಕಟಿಸಿದ್ದರು. ಪತ್ರಕರ್ತರ ವೇದಿಕೆ (ರಿ) ಬೆಂಗಳೂರು ಇದರ ಉಡುಪಿ ಜಿಲ್ಲಾಅಧ್ಯಕ್ಷರಾಗಿ 11 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ನಡೆಸಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅದೇ ಹೆಸರಿನ ಕಾರ್ಯಕ್ರಮಗಳಿಗೆ ಪ್ರೇರಣೆಯಾಗಿದ್ದಾರೆ. ಪತ್ರಕರ್ತ ದಿ. ರಾಜೇಶ ಶಿಬಾಜೆ ಅವರ ಹೆಸರಿನ ಪತ್ರಿಕಾ ಗೌರವವನ್ನು ಆಯೋಜಿಸುತ್ತಾ ಬಂದಿದ್ದಾರೆ. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಹಾಗೂ ಆದಿ ಗ್ರಾಮೋತ್ಸವ ಎಂಬ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸಿ ನೂರಾರು ಸಾಧಕರನ್ನು ಗುರುತಿಸಿ ಗೌರವಿಸಿದ್ದಾರೆ. ಕರಾವಳಿ ಮತ್ತು ಮುಂಬಯಿಯಲ್ಲಿ ಪತ್ರಿಕಾ ತರಬೇತಿ ಕಾರ್ಯಕ್ರಮಗಳನ್ನು ರಾಜ್ಯ ಮಟ್ಟದ ಕರ್ನಾಟಕ ಮಿನಿ ಚಲನಚಿತ್ರೋತ್ಸವಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. 22 ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.

ಮಾಧ್ಯಮ ಸಹಿತ ಬಹುಮುಖಿ ಪ್ರತಿಭೆಗಾಗಿ 2018ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ 2018, ಆಮಂತ್ರಣ್ ಆವಾರ್ಡ್ 2019, ಕೃಷಿಕ ಬಂಧು 2019, ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಪ್ರಶ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ವಿಶ್ವ ದರ್ಶನ ಸಾಹಿತ್ಯ ಪುರಸ್ಕಾರ ಸಹಿತ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

ಮಾಧ್ಯಮ ಸೇವೆಗಾಇ ಅಖಿಲ ಭಾರತ ಅಗ್ನಿ ಶಿಖಾ ಮಂಚ್ ಪ್ರಶಸ್ತಿಯನ್ನು 1995ರಲ್ಲಿ ಮುಂಬಯಿಯಲ್ಲಿ ಸ್ವೀಕರಿಸಿರುವ ಅವರು ಮುಂಬಯಿ ಸೋಮಯ್ಯ ಕಾಲೇಜ್ ಆಫ್ ಮ್ಯಾನೆಜ್ ಮೆಂಟ್ ಇಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ಮುಂಬಯಿ ವಿಶ್ವವಿದ್ಯಾಲಯದಿಂದ ವರದರಾಜ ಆದ್ಯ ಚಿನ್ನದ ಪದಕದೊಂದಿಗೆ ಎಂ.ಏ ಪದವಿ ಹಾಗೂ ಇತ್ತಿಚಿಗೆ ಕಂಬಳ ಕ್ಷೇತ್ರದ ಅಧ್ಯಯನಕ್ಕಾಗಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದರು.

Click here

Click here

Click here

Click Here

Call us

Call us

ಮಾಧ್ಯಮ ರಂಗದಲ್ಲಿ ಮಿಂಚುತ್ತಿರುವ ಅನೇಕ ಶಿಷ್ಯವೃಂದವನ್ನು ಹೊಂದಿದ್ದಾರೆ. ಹುಟ್ಟೂರಿನಲ್ಲಿಯೇ ಕೃಷಿ ಬದುಕು ಕಟ್ಟಿಕೊಂಡಿದ್ದ ಅವರು ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಆದಿ ಗ್ರಾಮೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ ಯಶಸ್ಸಿ ಸಂಘಟಕ ಎನಿಸಿಕೊಂಡಿದ್ದರು.

ಮೃತರು ಪತ್ನಿ, ಓರ್ವ ಪುತ್ರಿ, ಪುತ್ರನನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಅಜೆಕಾರಿನಲ್ಲಿ ಸಂಜೆ ನಡೆದಿದೆ.

Leave a Reply

Your email address will not be published. Required fields are marked *

17 + one =