ಕುಂದಾಪುರದಲ್ಲಿ ಡಿ.16-17ರಂದು ಸಮುದಾಯ ಸಂಘಟನೆಯ 8ನೇ ರಾಜ್ಯ ಸಮ್ಮೇಳನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಐವತ್ತು ವರ್ಷಗಳ ಹಿಂದೆ ಕಾಣಿಸಿಕೊಂಡ ಸಮುದಾಯ ಸಾಂಸ್ಕೃತಿಕ ಸಂಘಟನೆಯು ತನ್ನ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯ ಭಾಗವಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ರಾಜ್ಯ ಸಮ್ಮೇಳನವನ್ನು ನಡೆಸಲಾಗುತ್ತದೆ. ಈ ಬಾರಿಯ ೮ನೇ ರಾಜ್ಯ ಸಮ್ಮೇಳನವನ್ನು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಡಿಸೆಂಬರ್ 16 ಮತ್ತು 17ರಂದು ವಡೇರಹೋಬಳಿಯಲ್ಲಿರುವ ’ಆಶೀರ್ವಾದ’ ಸಭಾಂಗಣದಲ್ಲಿ ನಡೆಸಲು ಉದ್ದೇಶಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ರಾಜಾರಾಂ ತಲ್ಲೂರು ಹೇಳಿದರು.

Call us

Click Here

ಅವರು ಕುಂದಾಪುರ ಪ್ರೆಸ್ಕ್ಲಬ್ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಈ ಬಾರಿಯ ರಾಜ್ಯ ಸಮ್ಮೇಳನದ ಕೇಂದ್ರ ಆಶಯವು ಸಮ್ಮೇಳನದ ಘನತೆಯ ಬದುಕು: ಸಾಂಸ್ಕೃತಿಕ ಮಧ್ಯಪ್ರವೇಶ ಎಂಬುದಾಗಿದೆ. ಮೊದಲ ದಿನವಾದ ಡಿಸೆಂಬರ್ 16 ರಂದು ಸಮ್ಮೇಳನದ ಉದ್ಘಾಟನಾ ಅಧಿವೇಶನವು ಜವಾಹರಲಾಲ ನೆಹರು ವಿಶ್ವವಿದ್ಯಾಲಯ, ದೆಹಲಿ ಇಲ್ಲಿನ ಕನ್ನಡ ಅಧ್ಯಯನ ಪೀಠದ ನಿವೃತ್ತ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಪ್ರೊ ಪುರುಷೋತ್ತಮ ಬಿಳಿಮಲೆ ಯವರ ನೇತೃತ್ವದ ತಾಳಮದ್ದಳೆಯ ಮೂಲಕ ಆರಂಭವಾಗಲಿದೆ. ಖ್ಯಾತ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋಮತ್ತು ಉದಯೋನ್ಮುಖ ಭಾಗವತರಾದ ಕುಮಾರಿ ಚಿಂತನಾ ಮಾಳ್ಕೋಡು ತಾಳಮದ್ದಳೆಯಲ್ಲಿ ಭಾಗವಹಿಸುವರು. ಸಮುದಾಯ ರಾಜ್ಯ ಸಮಿತಿಯ ಅಧ್ಯಕ್ಷರಾದ ಅಚ್ಯುತ ಉದ್ಘಾಟನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಪರಾಹ್ನ ಎರಡು ಘೋಷ್ಟಿಗಳು ನಡೆಯಲಿದ್ದು, ಘನತೆಯ ಬದುಕು: ಹೋರಾಟದ ಹಾದಿ ಎಂಬ ಮೊದಲ ಗೋಷ್ಟಿಯಲ್ಲಿ ನಾಡಿನ ಹಲವು ಚಳುವಳಿಗಳ ಪ್ರಮುಖರು ಶಾಂತಿ, ಸಹಬಾಳ್ವೆಯ ಕರ್ನಾಟಕವನ್ನು ಕಟ್ಟುವ ತಮ್ಮ ದಾರಿಯನ್ನು ವಿವರಿಸಲಿದ್ದಾರೆ. ಈ ಗೋಷ್ಟಿಯಲ್ಲಿ ಲಿಂಗತ್ವ ಸಮಾನತೆಯ ಹೋರಾಟಗಾರರಾದ ಅಕೈ ಪದ್ಮಶಾಲಿ, ರೈತ ಚಳುವಳಿಯರ ವಿಕಿರಣ ಪೂಣಚ್ಚ, ವಿಜ್ಞಾನ ಚಳುವಳಿಯ ಎಫ್.ಸಿ ಚೇಗರೆಡ್ಡಿ, ಆದಿವಾಸಿ ಹಕ್ಕುಗಳ ಹೋರಾಟಗಾರ ಶ್ರೀಧರ ನಾಡಾ, ಮಹಿಳಾ ಚಳುವಳಿಯ ಕೆ.ಎಸ್ ಲಕ್ಷ್ಮಿ ಭಾಗವಹಿಸಲಿದ್ದಾರೆ.

ಘನತೆಯ ಬದುಕು: ಕಲೆಯ ಹಾದಿ ಎರಡನೆಯ ಗೋಷ್ಟಿಯಲ್ಲಿ ಹಾಡುಗಾರ್ತಿ ಎಮ್. ಡಿ ಪಲ್ಲವಿ, ರಂಗನಿರ್ದೇಶಕಿ ಮಂಗಳಾ ಎನ್, ಸಿನೇಮಾ ನಿರ್ದೇಶಕರಾದ ಮನ್ಸೋರೆ ಗವಹಿಸಿ ಕಲೆಯ ಮೂಲಕ ಸುಂದರ ಮತ್ತು ಶಾಂತಿಯ ನಾಡನ್ನು ಕಟ್ಟುವ ತಮ್ಮದಾರಿಯನ್ನು ತೆರೆದುಕೊಳ್ಳುವರು. ಎರಡನೆಯ ದಿನ ಪ್ರತಿನಿಧಿ ಸಮ್ಮೇಳನ ನಡೆಯಲಿದೆ. ಸಮುದಾಯ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ದೇವೇಂದ್ರಗೌಡ ಅವರು ಮಂಡಿಸಲಿರುವ ವರದಿಯ ಮೇಲೆ ಚರ್ಚೆಗಳು ನಡೆಯಲಿವೆ. ಹೊಸ ಸಮಿತಿಯ ಆಯ್ಕೆ ನಡೆಯಲಿದೆ ಎಂದರು.

ಕುಂದಾಪುರ ಸಮುದಾಯದ ಕಾರ್ಯಾಧ್ಯಕ್ಷರಾದ ಉದಯ ಗಾಂವಕರ ಮಾತನಾಡಿ, ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಐವತ್ತು ವರ್ಷಗಳ ಹಿಂದೆ ಕಾಣಿಸಿಕೊಂಡ ಸಮುದಾಯ ಸಾಂಸ್ಕೃತಿಕ ಸಂಘಟನೆಯು ಅಂದಿನಿಂದ ಇಂದಿನವರೆಗೂ ತನ್ನ ಅಭಿವ್ಯಕ್ತಿಯ ಮಾಧ್ಯಮಗಳಾದ ಬೀದಿ ನಾಟಕಗಳು, ಜಾಥಾಗಳು, ವಿಚಾರ ಸಂಕಿರಣಗಳು, ಪ್ರದರ್ಶನಗಳು, ರಂಗ-ನಾಟಕಗಳು, ಸಿನೇಮಾ, ಚಿತ್ರಕಲಾ ಪ್ರದರ್ಶನ, ಸಂವಿಧಾನ ಓದು, ಇತ್ಯಾದಿಗಳ ಮೂಲಕ ಜೀವಪರವಾದ ಪರಿಸರವನ್ನು ಸೃಷ್ಟಿಸಲು ಶ್ರಮಿಸುತ್ತಿದೆ. ದೇಶದ ಸಂವಿಧಾನದ ಮೂಲ ಆಶಯಗಳಾದ ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯ ಹಾಗೂ ಸಾರ್ವಭೌಮ ಜನತಂತ್ರದ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ ಎಂದರು.

ಮುಂದಿನ ಮೂರು ವರ್ಷಗಳ ತನ್ನ ಧೋರಣೆ, ಮುನ್ನೋಟ ಮತ್ತು ಸಂಘಟನಾ ಸ್ವರೂಪವನ್ನು ಮರುಕಟ್ಟಿಕೊಳ್ಳುವ ಎರಡು ದಿನಗಳ ರಾಜ್ಯ ಸಮ್ಮೇಳನದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಇನ್ನೂರು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ದೇಶದಪ್ರಮುಖ ಸಾಂಸ್ಕೃತಿಕ ಚಿಂತಕರು, ಕಲಾವಿದರನ್ನು ಈ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಸಮ್ಮೇಳನದ ಸಿದ್ಧತೆಗಾಗಿ ಕುಂದಾಪುರ ಸಮುದಾಯದ ನೇತೃತ್ವದಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ ಎಂದರು.

Click here

Click here

Click here

Click Here

Call us

Call us

ಸುದ್ಧಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ.ಸದಾನಂದ ಬೈಂದೂರು, ಕೋಶಾಧಿಕಾರಿ ಬಾಲಕೃಷ್ಣ ಕೆ.ಎಂ. ಕಾರ್ಯದರ್ಶಿ ವಾಸುದೇವ ಗಂಗೇರ, ಪ್ರಚಾರ ಸಮಿತಿ ಸಂಚಾಲಕ ಉದಯ ಶೆಟ್ಟಿ, ಉಪಾಧ್ಯಕ್ಷರಾದ ಜಿ.ವಿ ಕಾರಂತ ಉಪಸ್ಥಿತರಿದ್ದರು.

Leave a Reply