ಎಂ.ಓ-4 ಭತ್ತಕ್ಕೆ ಸರಕಾರದ ಬೆಂಬಲ ಬೆಲೆ ಘೋಷಿಸಲು ಆಗ್ರಹ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಬರ ಆತಂಕದ ನಡುವೆಯೂ ರೈತರು ಬೆಳೆದ ಎಂ.ಓ.4 ಭತ್ತದ ಕ್ವಿಂಟಲ್‌ಗೆ ಮೂರು ಸಾವಿರ ಬೆಂಬಲ ಬೆಲೆ ಘೋಷಿಸಿ, ಸರಕಾರವೇ ಕೂಡಲೇ ಖರೀದಿಯನ್ನು ಪ್ರಾರಂಭಿಸಬೇಕು ಎಂದು ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

Call us

Click Here

ಜಿಲ್ಲೆಯಲ್ಲಿ ಈ ಭಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೆ ಕೆಲವೇ ತಾಲೂಕನ್ನು ಬರ ಪೀಡಿತ ತಾಲೂಕು ಪಟ್ಟಿಯಲ್ಲಿ ಸರ್ಕಾರ ಸೇರಿಸಿದೆ. ಇದರಿಂದ ನಮ್ಮ ಜಿಲ್ಲೆಯ ಹೆಚ್ಚಿನ ರೈತರು ಬರ ಪೀಡಿತ ತಾಲ್ಲೂಕುಗಳಿಗೆ ಸರ್ಕಾರ ನೀಡುವ ವಿಶೇಷ ಪ್ಯಾಕೇಜ್ ಗಳಿಂದ ವಂಚಿತರಾಗಿದ್ದಾರೆ. ಆದರೆ ಇಂತಹ ಕಠಿಣ ಪರಿಸ್ಥಿತಿಯಲ್ಲೂ ರೈತರು ಇಲ್ಲಿಯ ಪ್ರಮುಖ ಭತ್ತದ ತಳಿಯಾದ ಎಂ ಓ 4 ಭತ್ತವನ್ನು ಬೆಳೆದು ಉತ್ತಮ ಫಸಲನ್ನು ಪಡೆದಿದ್ದಾರೆ. ಈಗ ಕಟಾವು ಪ್ರಾರಂಭವಾಗಿದ್ದು ರೈತರಿಗೆ ಫಸಲನ್ನು ಶೇಖರಿಸಿಡಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಹೊಲದಿಂದಲೇ ಖಾಸಗಿಯವರಿಗೆ ಕಡಿಮೆ ಬೆಲೆಗೆ ನೇರ ಮಾರಾಟ ಮಾಡುತ್ತಿದ್ದಾರೆ. ಆದುದರಿಂದ ಸರ್ಕಾರ ಕೂಡಲೇ ಎಂ ಓ 4 ಭತ್ತಕ್ಕೆ ಕ್ವಿಂಟಲ್‌ಗೆ ಮೂರು ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು ಹಾಗೂ ಕೂಡಲೇ ಖರೀದಿಯನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

Leave a Reply