ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾಧ್ಯಕ್ಷರಾಗಿ ಮುಸ್ತಾಕ್ ಅಹ್ಮದ್ ಬೆಳ್ವೆ ಹಾಗೂ ಕಾರ್ಯದರ್ಶಿಯಾಗಿ ಝಹೀರ್ ನಾಖುದಾ ಗಂಗೊಳ್ಳಿ ಆಯ್ಕೆಯಾಗಿದ್ದಾರೆ.
ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಘಟಕದ ಮಹಾಸಭೆ ಉಡುಪಿಯ ಮಣಿಪಾಲ್ ಇನ್ ಹೋಟೆಲಿನಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಬೆಳ್ವೆ ಮುಸ್ತಾಕ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮೌ ಫಝಲ್ ಅಹ್ಮದ್ ಕಂಡ್ಲೂರ್ ಇವರ ಕುರಾನ್ ಪಠಣ ದೊಂದಿಗೆ ಸಭೆ ಆರಂಭವಾಯಿತು. ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ ಪ್ರಾಸ್ತಾವಿಕ ಹಾಗು ಬಂದಂತ ಅತಿಥಿಗಳನ್ನು ಸ್ವಾಗತಿಸಿದರು. ಮೌ ಝಮಿರ್ ಅಹ್ಮದ್ ರಷಾದಿ ವರದಿ ಮಂಡಿಸಿದರು. ಸಯ್ಯದ್ ಅಜ್ಮಲ್ ಲೆಕ್ಕ ಪತ್ರ ಮಂಡನೆ ಮಾಡಿದರು.
ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿ ಪಡೆದ ಪರ್ಕಳ ಹಾಜಿ ಅಬ್ದುಲ್ಲಾ ಸಾಹೇಬ್ ಹಾಗು ಸಮಾಜ ಸೇವಕರಾದ ಡಾ ಮೊಹಮ್ಮದ್ ರಫೀಕ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಗ್ರಿಬ್ ನಮಾಜಿನ ನಂತರ 2024-25 ರ ಸಾಲಿನ ನೂತನ ಜಿಲ್ಲಾ ಅಧ್ಯಕ್ಷ ಹಾಗು ಇತರ ಪದಾಧಿಕಾರಿಗಳಿಗೆ ಆಯ್ಕೆ ಪ್ರತಿಕ್ರಿಯೆ ಪ್ರಾರಂಭ ವಾಯಿತು.
ಜಿಲ್ಲಾ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಬೆಳ್ವೆ ಮುಸ್ತಾಕ್ ಅಹ್ಮದ್ ರವರನ್ನು ಮುಂದಿನ 2 ವರ್ಷಕ್ಕೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
2024/25ರ ಸಾಲಿನ ನೂತನ ಸಮಿತಿ ಅಧ್ಯಕ್ಷ ರಾಗಿ ಮುಸ್ತಾಕ್ ಅಹ್ಮದ್ ಬೆಳ್ವೆ, ಗೌರವ ಅಧ್ಯಕ್ಷರಾಗಿ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ, ಜಿಲ್ಲಾ ಸಂಯೋಜಕರಾಗಿ ಶೈಖ್ ವಾಹಿದ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ರಾಗಿ ಎಸ್ ದಸ್ತಗೀರ್ ಕಂಡ್ಲೂರ್, ಪ್ರದಾನ ಕಾರ್ಯದರ್ಶಿ ಝಹಿರ್ ಅಹ್ಮದ್ ನಾಕುದ ಗಂಗೊಳ್ಳಿ, ಖಜಾಂಚಿ ಯಾಹ್ಯಾ ಉಡುಪಿ, ಉಪಾಧ್ಯಕ್ಷ ರಾಗಿ ರಶೀದ್ ಯು ಏ., ಉಸ್ತಾದ್ ಸಾದಿಕ್ ಹೂಡೆ, ಶಾಕಿರ್ ಹಾವಂಜೆ, ಅಬುಮೊಹಮ್ಮದ್ ಕುಂದಾಪುರ, ಸಯ್ಯದ್ ಅಜ್ಮಲ್ ಶಿರೂರ್, ನಜಿರ್ ಶಾ ಅಜೆಕಾರ್, ಸಂಘಟನಾ ಕಾರ್ಯದರ್ಶಿ ಫಾಝಿಲ್ ಆದಿ ಉಡುಪಿ, ಸ್ಪೊರ್ಟ್ಸ್ ಸಮಿತಿ ಆಶ್ರಫ್ ಪಡುಬಿದ್ರಿ, ಯುವ ಘಟಕ ಜಿಲ್ಲಾ ಅಧ್ಯಕ್ಷ ಅರ್ಫಾತ್ ಬೆಳ್ವೆ, ಯುವ ಘಟಕದ ಸಂಯೋಜಕರು ಅಬ್ದುಲ್ ಖಾದರ್ ಮೂಡ್ ಗೋಪಾಡಿ ರವರು ಆಯ್ಕೆಯಾದರು.
ಸದ್ಯಸ್ಯರಾಗಿ ಪಿರ್ ಮೊಹಮ್ಮದ್ ಉಡುಪಿ, ಇಮ್ರಾನ್ ಹೆನ್ನಾಬೈಲ್, ಶಾಬಾನ್ ಹಂಗಳೂರ್, ನಿಹಾರ್ ಅಹ್ಮದ್, ಫಝಲ್ ಅಹ್ಮದ್ ಕಂಡ್ಲೂರ್, ಅಬೂಬಕ್ಕರ್ ಮಾವಿನಕಟ್ಟೆ, ಮೊಹಮ್ಮದ್ ಪಿ ಗುಲ್ವಾಡಿ, ಉಸ್ಮಾನ್ ಪಳ್ಳಿ, ಜಮಾಲ್ ಗುಲ್ವಾಡಿ, ಅನ್ವರ್ ಕಂಡ್ಲೂರ್, ಮುಜಾಹಿದ್ ಗಂಗೊಳ್ಳಿ, ಇರ್ಫಾನ್ ಕಾಪು, ಹಮೀದ್ ಯೂಸುಫ್, ರಜ್ಜಾಕ್ ಹುಸೇನ್, ಮುಸ್ತಾಕ್ ಹೆನ್ನಾಬೈಲ್.ಅನ್ಸಾರ್ ಹೊಸಂಗಡಿ. ಮುನವರ್ ಅಜೆಕಾರ್.ಆಸೀಫ್ ಅಲ್ಬಾಡಿ. ರಯಾನ್ ಬೆಳ್ವೆ. ಉಡುಪಿಯ ಉಸ್ತುವಾರಿಯಾಗಿ ನಝಿರ್ ನೆಜಾರ್, ಸಮೀರ್ ಮಣಿಪಾಲ್ ಕಾರ್ಕಳ ದ ಉಸ್ತುವಾರಿ ಯಾಗಿ ಶಿಷಾ ಹುಸೇನ್. ಮುಸ್ತಫಾ ಕಾರ್ಕಳ. ಸಮದ್ ಖಾನ್. ಹೆಬ್ರಿ ಉಸ್ತುವಾರಿ ಯಾಗಿ ಮೊಹಮ್ಮದ್ ರಫೀಕ್ ಅಜೆಕಾರ್, ಅಬ್ದುಲ್ ಶುಕೂರ್ ಬೆಳ್ವೆ. ಬೈಂದೂರು ಉಸ್ತುವಾರಿ ಯಾಗಿ ಸಮಿ ಹಳಗೇರಿ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ 2024/25 ರ ಸಾಲಿನ ಜಿಲ್ಲಾ ಸಮಿತಿಯ ವೀಕ್ಷಕರಾಗಿ ಉಪಸ್ಥಿತರಿದ್ದರು.















