ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟೇಶ್ವರದ ಪುರಾಣ ಪ್ರಸಿದ್ಧ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನ.27ರಂದು ದೇವರ ಶ್ರೀಮನ್ಮಹಾರಥೋತ್ಸವ (ಕೊಡಿ ಹಬ್ಬ) ನ.27ರಂದು ನಡೆಯಲಿವೆ.
ಕೋಡಿ ಹಬ್ಬದ ಪ್ರಯುಕ್ತ ನ.21ರಂದು ಧ್ವಜಾರೋಹಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ನ.24ರಂದು ರಂಗೋತ್ಸವ, ಶತರುದ್ರಾಭಿಷೇಕ, ಕುಂಜರವಾಹನೋತ್ಸವ, ನ.25ರಂದು ಅಶ್ವವಾಹನೋತ್ಸವ, ನ.26ರಂದು ಸಿಂಹವಾಹನೋತ್ಸವ, ನ.27ರಂದು ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀಮನ್ಮಹಾರಥೋತ್ಸವ, ನ.28ರಂದು ಚೂರ್ಣೋತ್ಸವ, ಅವಭೃತ ಸ್ನಾನ ಕಾರ್ಯಕ್ರಮ, ಸ್ಥಳೀಯ ವಿವಿಧ ಭಜನಾ ಮಂಡಳಿಗಳ ನೇತೃತ್ವದಲ್ಲಿ ಪ್ರತಿದಿನ ಸಂಜೆ 6 ಗಂಟೆಯಿಂದ ಭಜನೆ ಹಾಗೂ ಮಂಗಲೋತ್ಸವ ಕಾಠ್ಯಕ್ರಮ ಜರುಗಲಿವೆ.
ಸಾಂಸ್ಕೃತಿಕ ಕಾರ್ಯಕ್ರಮ:
ನ.24ರಂದು ಪುತ್ತೂರು ಬಾಲವನ ಮಹಿಳಾ ಕಲಾವಿದರಿಂದ ವೀರಮಣಿ ಕಾಳಗ ಯಕ್ಷಗಾನ, ನ.25ರಂದು ಶಿವಾನಂದ ಸಂಗಡಿಗರಿಂದ ಗಾನೋಪಾಸನ, ನ.26ರಂದು ಬೆಂಗಳೂರು ಗೋಪಿ ಮತ್ತು ಬಳಗದವರಿಂದ ನಗೆ ಹಬ್ಬ ನ.27ರಂದು ಅರೆಹೊಳೆ ನಂದಗೋಕುಲ ಕಲಾವಿದರಿಂದ ನೃತ್ಯವರ್ಷಾ, ನ.28ರಂದು ವಿದುಷಿಭಾಗೀರಥಿ ಎಂ. ರಾವ್ ಅವರ ಶಿಷ್ಯರಿಂದ ನೃತ್ಯ ಸೌರಭ (ಚಿಣ್ಣರ ಚಿಲಿಪಿಲಿ) ಕಾರಕ್ರಮಗಳು ಪ್ರತಿದಿನ ರಾತ್ರಿ 8 ಗಂಟೆಯಿಂದ ದೇವಾಲಯದ ಶ್ರೀ ಶಾಂತಾರಾಮ ರಂಗಮಂಟಪದಲ್ಲಿ ನಡೆಯಲಿದೆ.
ಜಿ.ಜಿ.ಎಸ್. ಕಟ್ಟೆ ಸ್ನೇಹಿತರು ಮತ್ತು ಬಜರಂಗದಳ ಕೋಟೇಶ್ವರ ನೇತೃತ್ವದಲ್ಲಿ 28ನೇ ವರ್ಷದ ವಾರ್ಷಿಕೋತ್ಸವ ನ.25ರಂದು ಜರುಗಲಿದ್ದು, ಈ ಸಂದರ್ಭ ಪಂಚಮಿ ಮೆಲೋಡಿಸ್ ಕಂಚುಗೋಡು ಕುಂದಾಪುರ ಸಹಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಬಂದ ಹಣ ಅಶಕ್ತರಿಗೆ ಸಹಾಯಾರ್ಥವಾಗಿ ನೀಡಲು ಸಂಸ್ಥೆಗಳು ನಾನಾ ಕಾರ್ಯಕ್ರಮ ಹಮ್ಮಿಕೊಂಡಿವೆ.
ಕೊಡಿ ಹಬ್ಬದ ಪ್ರಯುಕ್ತ ರಾಮನಾಥಗೋಳಿ ಕಟ್ಟೆ ಫ್ರೆಂಡ್ಸ್ ನೇತೃತ್ವದಲ್ಲಿ 54ನೇ ವರ್ಷದ ಕಟ್ಟೆಪೂಜೆ ಮತ್ತು ವಿದ್ಯುದ್ದೀಪಾಲಂಕಾರ ಮತ್ತು ಸಾಂಸ್ಕೃತಿಕ ಕಾಠ್ಯಕ್ರಮಗಳು ನಡೆಯಲಿವೆ. ನ.24ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ರಾತ್ರಿ 10.30ಕ್ಕೆ ಕಟ್ಟೆ ಪೂಜೆ ಹಾಗೂ ಸುಡುಮದ್ದು ಪ್ರದರ್ಶನ ನಡೆಯಲಿದೆ. ನ.27ರಂದು ತೆಕ್ಕಟ್ಟೆ ಕನ್ನುಕೆರೆ `ಓಂಕಾರ್ ಕಲಾವಿದರಿಂದ ಕುಂದಗನ್ನಡ ಹಾಸ್ಯಮಯ ನಗೆ ನಾಟಕ ಅಗೋಚರ ಮತ್ತು ನ.28ರಂದು ಸುರಸಾಗರ ಮೆಲೋಡಿಸ್ ಅರ್ಪಿಸುವ ಕರ್ನಾಟಕ ಮತ್ತು ಕೇರಳದ ಪ್ರಖ್ಯಾತ ಕಲಾವಿದರಿಂದ ಸಂಗೀತ ರಸಮಂಜರಿ ಕಾಠ್ಯಕ್ರಮಗಳು ಕೋಟೇಶ್ವರ ಕೆ.ಪಿ.ಎಸ್ ಮೈದಾನದಲ್ಲಿ ಜರುಗಲಿದೆ.















