ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಜತ ಸಂಭ್ರಮದಲ್ಲಿರುವ ಶಂಕರನಾರಾಯಣದ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ‘ರೌಪ್ಯೋತ್ಸವ’ ಲಾಂಛನವನ್ನು ಸೋಮವಾರ ಬಿಡುಗಡೆ ಮಾಡಲಾಯಿತು. ರೌ
ರೌಪ್ಯೋತ್ಸವ ಮುನ್ನುಡಿ ಎನ್ನುವಂತೆ ‘ಪ್ರೀತಿ ಎಲ್ಲವನ್ನು ಗೆಲ್ಲುತ್ತದೆ ‘ ಎಂಬ ಸಂಸ್ಥೆಯ ಸಂದೇಶದೊಂದಿಗೆ ಪ್ರೀತಿಯ ಸಂಕೇತದ ಕೆಂಪು ಬಲೂನ್ ಗಳನ್ನು ರೌಪ್ಯದ ಲಾಂಛನದೊಂದಿಗೆ ಆಕಾಶದ ಎತ್ತರಕ್ಕೆ ಹಾರಿಸಿಬಿಡುವ ಮೂಲಕ ರೌಪ್ಯದ ಲೋಗೋವನ್ನು ಆಡಳಿತ ನಿರ್ದೇಶಕರು ಬಿಡುಗಡೆಗೊಳಿಸಿದರು.




ರೌಪ್ಯದ ಲಾಂಛನ ಬಿಡುಗಡೆಗೊಳಿಸಿದ ಸಂಸ್ಥೆಯ ಆಡಳಿತ ನಿರ್ದೇಶಕರು ಮಾತನಾಡಿ, ರೌಪ್ಯ ಎನ್ನುವುದು ಬೆಳ್ಳಿಯ ಸಂಸ್ಕೃತ ಪದವಾಗಿದೆ. ಲಾಂಛನದಲ್ಲಿರುವ ಕುದುರೆಯು ಅವಿರತವಾದ ಓಟವನ್ನು ಹಾಗೂ ಅದರಲ್ಲಿನ ಸೂರ್ಯಕಿರಣಗಳು 25 ಸಂವತ್ಸರಗಳನ್ನು ಸೂಚಿಸುತ್ತವೆ ಎಂದರು. ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಶಿಕ್ಷಣವನ್ನು ಅರಸಿ ತುಂಬಾ ದೂರ ಹೋಗಬೇಕಾದ ಸನ್ನಿವೇಶದಲ್ಲಿ ಶಂಕರನಾರಾಯಣದ ಸುತ್ತಮುತ್ತ ಗ್ರಾಮಗಳ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟ ಶಿಕ್ಷಣ ನೀಡಿದ್ದರ ಕುರಿತು ಸಾರ್ಥಕತೆ ಕಂಡುಕೊಂಡ ಕುರಿತು ಸಂತಸ ವ್ಯಕ್ತಪಡಿಸಿದರು.
ಸಂಸ್ಥೆಯ ಎಲ್ಲಾ ಶಿಕ್ಷಕ ಶಿಕ್ಷಕೇತರ ಬಂಧುಗಳು ಸ್ನೇಹ ಮತ್ತು ಶಾಂತಿಯ ಸಂಕೇತವಾದ ಬಿಳಿ ಮತ್ತು ಹಳದಿ ಬಲೂನುಗಳನ್ನು ಆಕಾಶದತ್ತ ಹಾರಿಸುವ ಮೂಲಕ ಈ ಸಂಭ್ರಮದ ಕ್ಷಣಕ್ಕೆ ಜೊತೆಯಾದರು. ಅದರೊಂದಿಗೆ ರೌಪ್ಯೋತ್ಸವದ ಲಾಂಛನವನ್ನು ಎಲ್ಲ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಮೂಲಕ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.