ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲಯನ್ಸ್ ಕ್ಲಬ್ ವಡೆರಹೋಬಳಿ ಆದರ್ಶ್ ಆಸ್ಪತ್ರೆ ಸೂಪರ್ ಸ್ಪೆಶಲಿಟಿ ಸೆಂಟರ್ ಉಡುಪಿ ಗ್ರಾಮ ಪಂಚಾಯತ್ ತಲ್ಲೂರು ರೋಟರಿ ಸಮುದಾಯ ದಳ ತಲ್ಲೂರು ಸಮುದಾಯ ಯುವಕ ಮಂಡಲ ( ರಿ) ತಲ್ಲೂರು ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ( ರಿ ) ಉಡುಪಿ ಇವರುಗಳ ಸಂಯುಕ್ತ ಅಶ್ರಯ ದಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ ಜರಗಿತು .
ಕಾರ್ಯಕ್ರಮ ಉದ್ಘಾಟಿಸಿ ನ್ಯಾಯ ವಾದಿ ಟಿ. ಬಿ. ಶೆಟ್ಟಿಯವರು ಬದುಕಿನ ಎಲ್ಲ ಸಂಪತಗಿಂತ ಆರೋಗ್ಯ ಸಂಪತ್ತು ಮುಖ್ಯ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ್ದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷ ತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಗಿರೀಶ್ ನಾಯಕ್ ವಹಿಸಿದ್ದರು.
ವೇದಿಕೆಯಲ್ಲಿ ಆಸ್ಪತ್ರೆಯ ವೈದ್ಯಧಿಕಾರಿ ಸುದೀಪ್ ಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ಯೋಗೀಶ್ ಆಚಾರ್ಯ, ಸುರೇಶ್ ಪೂಜಾರಿ , ಪ್ರಶಾಂತ್ ತಲ್ಲೂರು, ಉಪಸ್ಥಿತರಿದ್ದರು.
ಒಟ್ಟು 150 ಕ್ಕೂ ಮಿಕ್ಕಿ ಪಲಾನುಭವಿಗಳು ಪ್ರಯೋಜನ ಪಡೆದು ಕೊಂಡರು ಕಾರ್ಯಕ್ರಮದ ಯಶಸಿಗೆ ಅರವಿಂದ್ ಉಪ್ಪಿನಕುದ್ರು ಮತ್ತು ಮಹೇಂದ್ರ ಉಪ್ಪಿನಕುದ್ರು ಸಹಕರಿಸಿದ್ದರು.
ಭಾಸ್ಕರ್ ಆಚಾರ್ಯ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು