ಮಕ್ಕಳ ಸಾಹಿತ್ಯ ಸಂಭ್ರಮ: ಸ್ವರಚಿತ ಕಥೆ ಕವನ ಇತ್ಯಾದಿಗಳಿಗೆ ಆಹ್ವಾನ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಡಾ. ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ (ರಿ.), ಸಾಲಿಗ್ರಾಮ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿ ಇವರ ಸಹಭಾಗಿತ್ವದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಂಭ್ರಮ – 2023 ಜನವರಿಯಲ್ಲಿ ಜರುಗಲಿದ್ದು ವಿದ್ಯಾರ್ಥಿಗಳಿಂದ ಸ್ವರಚಿತ ಕಥೆ ಕವನ ಹಾಗೂ ಸಾಹಿತ್ತಿಕ ಸಾಧನೆಯ ವಿವರಗಳನ್ನು ಆಹ್ವಾನಿಸಲಾಗಿದೆ.

Call us

Click Here

ಮಕ್ಕಳಲ್ಲಿ ಸುಪ್ತವಾಗಿರುವ ಸಾಹಿತ್ಯಕ ಪ್ರತಿಭೆಯನ್ನು ಗುರುತಿಸಿ ವೇದಿಕೆಯನ್ನು ಕಲ್ಪಿಸಲು ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅವರ ಮುಂದಾಳತ್ವದಲ್ಲಿ ಕಳೆದ 15 ವರ್ಷಗಳ ಹಿಂದೆ ಡಾ. ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ (ರಿ.), ಸಾಲಿಗ್ರಾಮ. ವಾರ್ಷಿಕ ಸಮ್ಮೇಳನದ ಪ್ರಯುಕ್ತ 6 ಬಾರಿ ಜಿಲ್ಲಾ ಮಟ್ಟದ “ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲೇ ಜರುಗಲಿರುವ ಈ ಸಮ್ಮೇಳನದಲ್ಲಿ, ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ.

ಈ ವರ್ಷ ಜಿಲ್ಲಾ ಮಟ್ಟದ ಈ ಸಮ್ಮೇಳನವನ್ನು ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರು, ಉದ್ಘಾಟಕರು ಹಾಗೂ ವಿವಿಧ ಗೋಷ್ಠಿಯ ಅಧ್ಯಕ್ಷರುಗಳು, ಕಾರ್ಯಕ್ರಮ ನಿರ್ವಹಣೆ, ಸ್ವಾಗತ, ವಂದನಾರ್ಪಣೆ ಇವುಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸಬೇಕಾಗಿರುವುದರಿಂದ ಅವರುಗಳ ಆಯ್ಕೆ ಪ್ರಕ್ರಿಯೆಯನ್ನು ಡಿಸೆಂಬರ್ ಕೊನೆಯ ವಾರ ಕುಂದಾಪುರದಲ್ಲಿ ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಸಾಹಿತ್ಯಕ ಸಾಧನೆಗಳನ್ನು ಡಿಸೆಂಬರ್ 25 ನೇ ತಾರೀಖಿನೊಳಗೆ ಬರೆದು ಕಳುಹಿಸತಕ್ಕದ್ದು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ವರಚಿತ ಕತೆ, ಕವನ, ಪುಸ್ತಕ ವಿಮರ್ಶೆಗಳನ್ನು ಮಂಡಿಸಲು ಸಹ ಅವಕಾಶ ಕಲ್ಪಿಸಿಕೊಡಲಾಗುವುದು. ತಮ್ಮ ಶಾಲೆಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವುದಿದ್ದಲ್ಲಿ ಅವರು ಮಂಡಿಸಲಿರುವ ಸ್ವರಚಿತ ಕತೆ, ಕವನ, ಪುಸ್ತಕ ವಿಮರ್ಶೆ ಇತ್ಯಾದಿ ಬರವಣಿಗೆಯನ್ನು ಅಂಚೆ ಕಾರ್ಡಿನಲ್ಲಿ ಅಥವಾ ಅಂಚೆ ಕಾರ್ಡಿನಲ್ಲಿ ಬರೆಯುವ ಪ್ರಮಾಣದಷ್ಟು ವಿಷಯವನ್ನು ಬರೆದು ಈ ಕೆಳಗಿನ ವಿಳಾಸಕ್ಕೆ ಕಳುಹಿಸತಕ್ಕದ್ದು. ಆಯ್ಕೆ ಪ್ರಕ್ರಿಯೆಯು ಡಿಸೆಂಬರ್ 31 ರಂದು ಕುಂದಾಪುರದಲ್ಲಿ ನಡೆಯಲಿದೆ.

ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಲು ತಾವು ಪ್ರೇರೇಪಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತಿದ್ದೇವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Click here

Click here

Click here

Click Here

Call us

Call us

ಬರಹಗಳನ್ನು ಕಳುಹಿಸಬೇಕಾದ ವಿಳಾಸ:
ಪ್ರೊ. ಸಿ. ಉಪೇಂದ್ರ ಸೋಮಯಾಜಿ
ಅಧ್ಯಕ್ಷರು ಡಾ. ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ (ರಿ.), ಸಾಲಿಗ್ರಾಮ
ಚಿತ್ರಪಾಡಿ, ಕೋಟ, ಸಾಲಿಗ್ರಾಮ , ಉಡುಪಿ ಜಿಲ್ಲೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ರಾಮ ದೇವಾಡಿಗ – 9480468377
ಪ್ರೊ. ಸಿ. ಉಪೇಂದ್ರ ಸೋಮಯಾಜಿ – 9740842722

Leave a Reply

Your email address will not be published. Required fields are marked *

2 × 3 =