ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಇಲ್ಲಿನ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ 25 ವರ್ಷಗಳ ಸಂವತ್ಸರಗಳನ್ನ ಪೂರೈಸಿದ ಅಂಗವಾಗಿ ಆಯೋಜಿಸಲಾದ ರಜತ ಮಹೋತ್ಸವದ ಸಮಾರೋಪ ಸಮಾರಂಭವು ಇತ್ತಿಚಿಗೆ ಜರುಗಿತು.




ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಾಜಿ ಸಂಪಾದಕರಾದ ಡಾ. ರೊನಾಲ್ಡ್ ಫೆರ್ನಾಂಡಿಸ್ ಕಾರ್ಯಕ್ರಮಕ್ಕೆ ವೈವಿಧ್ಯಮಯವಾಗಿ ಚಾಲನೆ ನೀಡಿ ರೌಪ್ಯೋತ್ಸವದ ನೆನಪಿನಲ್ಲಿ ಸಿದ್ದಗೊಂಡ “ರೌಪ್ಯಯಾನ” ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿಯ ಸಂಚಾಲಕರಾದ ಚಿಟ್ಟೆ ರಾಜಗೋಪಾಲ್ ಹೆಗ್ಡೆ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಪಿ. ಜಗನ್ನಾಥ ಶೆಟ್ಟಿ, ಉಳ್ಳೂರಿನ ಆನಂದ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕರಾದ ಚಂದ್ರಶೇಖರ್ ಶೆಟ್ಟಿ, ಸಂಸ್ಥೆಯ ಸ್ಥಾಪಕ ದ್ವಾಯರಾದ ರೆನೀಟ ಲೋಬೋ ಹಾಗೂ ಶಮಿತ ರಾವ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಯಟ್ ಹಿರಿಯ ಉಪನ್ಯಾಸಕರಾದ ಅಶೋಕ್ ಕಾಮತ್ ವಹಿಸಿದ್ದರು. ಈ ಸಂದರ್ಭ ಸಹಕರಿಸಿದ ಮಹನೀಯರಿಗೆ ಸನ್ಮಾನಿಸಲಾಯಿತು.
ಅತಿಥಿಗಳನ್ನು ಬೇಬಿ ಸ್ವಾಗತಿಸಿದರೆ, ಗಣಿತ ಶಿಕ್ಷಕರಾದ ಜಗದೀಶ್ ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ರಾಮ ಭಟ್ ಸಜಂಗದ್ದೆ ಇವರು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆದವು. ಉಪನ್ಯಾಸಕರಾದ ಪಂಪ ಪೆರಾಜೆ ಹಾಗೂ ರಶಿಕ್ ಶೆಟ್ಟಿ ಇವರು ರಚಿಸಿ ನಿರ್ದೇಶಿಸಿದ ಮಾಯಾಪುರ ಎಂಬ ನಾಟಕ ಪ್ರದರ್ಶನಗೊಂಡಿತು.















