ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ ಪ್ರದಾನ

Call us

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಒಂಭತ್ತನೇ ವಾರ್ಷಿಕೋತ್ಸವ ಹಾಗೂ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ- 2024 ಪ್ರದಾನ ಸಮಾರಂಭ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಜರುಗಿತು.

Call us

Click Here

Click here

Click Here

Call us

Visit Now

Click here

ಉದ್ಯಮಿ ನಾಗಭೂಷಣ ರಮೇಶ್ ಐತಾಳ್ ಉಪ್ಪಿನಕುದ್ರು ಅಕಾಡೆಮಿ ಕಟ್ಟಡದ ಆವರಣದಲ್ಲಿ ಸೋಲಾರ್ ಸ್ಟ್ರೀಟ್ ಲೈಟ್ ಹಾಗೂ ಏಣಿಯನ್ನು ಕೊಡುಗೆಯಾಗಿ ನೀಡಿ ಉದ್ಘಾಟಿಸಿದರು.

ಮಾಹೆಯ ಮಾಜಿ ಡೆಪ್ಯೂಟಿ ರಿಜಿಸ್ಟ್ರಾರ್ ಟಿ. ರಂಗ ಪೈ ದೀಪ ಬೆಳಗಿಸಿ, ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2024 ನ್ನು ಹಿರಿಯ ಯಕ್ಷಗಾನ ಚಂಡೆ ಕಲಾವಿದ ಏಳಜಿತ ಸದಾನಂದ ಪ್ರಭು ಅವರಿಗೆ ಪ್ರದಾನ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರುರವರು ಅಧ್ಯಕ್ಷ ಸ್ಥಾನ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಪಿ.ವಿ.ಭಂಡಾರಿ, (ವೈದ್ಯಕೀಯ ಸಲಹೆಗಾರರು ಹಾಗೂ ಮನೋರೋಗ ತಜ್ಞರು, ಡಾ ಬಿ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ,, ಉಡುಪಿ) ಶಿವಾನಂದ ಪೈ ( ಲೆಕ್ಕ ಪರಿಶೋಧಕರು, ಮಂಗಳೂರು) ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯಕ್ಷಗಾನ ಮದ್ದಲೆ ಕಲಾವಿದ ಸುರೇಶ್ ಉಪ್ಪೂರ, ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಸೂತ್ರಧಾರಿ ಪ್ರಭಾಕರ್ ಆಚಾರ್, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ನೆಂಪು, ರಾಜ್ಯ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಪಟು ಕುಮಾರಿ ಪ್ರಾರ್ಥನಾ ಪೈ, ಗಂಗೊಳ್ಳಿ ಇವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಸೋಲಾರ್ ಲೈಟ್ ಕೊಡುಗೆ ನೀಡಿದ ನಾಗಭೂಷಣ ರಮೇಶ್ ಐತಾಳ್, ಉಪ್ಪಿಮಕುದ್ರು ಹಾಗೂ ಯಕ್ಷಗಾನ ಗಾನ ವೈಭವ ಪ್ರಾಯೋಜಕರಾದ ಶಿವಾನಂದ ಪೈ ಯವರನ್ನೂ ಸಹ ಅಕಾಡೆಮಿಯ ವತಿಯಿಂದ ಗೌರವಿಸಲಾಯಿತು. ಯಕ್ಷಗಾನ ಗೊಂಬೆ ಚಿತ್ರ ಬಿಡಿಸಿ ಬಹುಮಾನ ಗೆಲ್ಲಿ ಆನ್ಲೈನ್ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರಿಗೆ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ , ಸ್ಥಳೀಯ ವಿದ್ಯಾರ್ಥಿಳಿಗೆ ಹಾಗೂ ಮಹಿಳೆಯರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

Call us

ಮನೋರಂಜನಾ ಕಾರ್ಯಕ್ರಮವಾಗಿ ಶಿವಾನಂದ ಪೈ ( ಲೆಕ್ಕ ಪರಿಶೋಧಕರು, ಮಂಗಳೂರು) ಪ್ರಾಯೋಜಕತ್ವದಲ್ಲಿ ಮಯ್ಯ ಯಕ್ಷ ಬಳಗ, ಹಾಲಾಡಿ ಇವರಿಂದ ತೆಂಕು – ಬಡಗು ಯಕ್ಷಗಾನ ಗಾನ ವೈಭವ ಪ್ರಸ್ತುತಿಯಡಿ ಬಡಗಿನ ಖ್ಯಾತ ಭಾಗವತದ್ವಯರಾದ ರಾಘವೇಂದ್ರ ಮಯ್ಯ ಹಾಲಾಡಿ, ಪ್ರಸನ್ನ ಭಟ್ ಬಾಳ್ಕಲ್ , ಮದ್ದಲೆಯಲ್ಲಿ ಶಶಾಂಕ್ ಆಚಾರ್, ಚಂಡೆಯಲ್ಲಿ ಸುಜನ ಹಾಲಾಡಿ, ತೆಂಕಿನ ಭಾಗವತರಾಗಿ ಅಮೃತ ಅಡಿಗ ಮತ್ತು ಬಳಗದವರು ನೆರೆದ ಪ್ರೇಕ್ಷಕರ ಗಮನ ಸೆಳೆದರು. ಬೇಳೂರು ವಿಷ್ಣುಮೂರ್ತಿ ನಾಯಕ್ ರವರು ನಿರೂಪಿಸಿದರು. ಇಡೀ ಕಾರ್ಯಕ್ರಮವನ್ನು

ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ರು ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಕಲಾವಿದರು ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥಿಸಿದರು. ನಾಗೇಶ್ ಶ್ಯಾನುಭಾಗ್, ಬಂಟ್ವಾಡಿ ಮತ್ತು ರಾಜೇಂದ್ರ ಪೈ ಯವರು ನಿರ್ವಹಿಸಿದರು.

Leave a Reply

Your email address will not be published. Required fields are marked *

1 × 2 =