ಎಕ್ಸ್‌ಪ್ಲೋರ್‌ ಬೈಂದೂರು ಸ್ಪರ್ಧೆಯ ಪೋಸ್ಟರ್ ಸ್ಕೂಬಾ ಡೈವಿಂಗ್ ಮೂಲಕ ಅನಾವರಣ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪ್ರವಾಸೋದ್ಯಮದಲ್ಲಿ ಬೈಂದೂರು ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳನ್ನು ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡುವ ಉದ್ದೇಶದಿಂದ ನಾವು ಗಟ್ಟಿ ಹೆಜ್ಜೆ ಇರಿಸಿದ್ದು ಅದರ ಒಂದು ಭಾಗವಾಗಿ ಎಕ್ಸ್‌ಪ್ಲೋರ್‌ ಬೈಂದೂರು ಎಂಬ ಕಾರ್ಯಕ್ರಮವನ್ನು ಪರಿಚಯಿಸಿದ್ದೇವೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

Call us

Click Here

ಅವರು ಬೈಂದೂರಿನ ಪ್ರವಾಸೋದ್ಯಮ ಕ್ಷೇತ್ರಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಎಕ್ಸ್‌ಪ್ಲೋರ್‌ ಬೈಂದೂರು ಎಂಬ ಕಾರ್ಯಕ್ರಮಕ್ಕೆ ಶನಿವಾರ ಸ್ಕೂಬಾ ಡೈವಿಂಗ್ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪ್ರವಾಸಿಗರು ನಮ್ಮೂರಿಗೆ ಭೇಟಿ ನೀಡಿದಷ್ಟು ಊರಿನ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರವಾಸಿಗರನ್ನು ಗೌರವದಿಂದ ಕಾಣುತ್ತಾ, ಸುಂದರ ವಾತಾವರಣವನ್ನು ಕಟ್ಟಿಕೊಡುತ್ತಾ ನಾವು ಬೆಳೆಯುವ ಕಲ್ಪನೆ ನಮ್ಮದಾಗಿದ್ದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.

ಬೈಂದೂರಿನ ಸೋಮೇಶ್ವರ ತೀರದ ನೇರಕ್ಕೆ ಸಮುದ್ರ ಮಧ್ಯದ ನಾಯ್ಕನ ಕಲ್ಲು ಪ್ರದೇಶದ ಬಳಿ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್ ಮೂಲಕ ನೀರಿನಲ್ಲಿ ತೇಲಾಡುತ್ತಾ ಎಕ್ಸ್‌ಪ್ಲೋರ್‌ ಬೈಂದೂರು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮೃದ್ಧ ಬೈಂದೂರು ಎಂಬ ಪರಿಕಲ್ಪನೆಯಡಿಯಲ್ಲಿ ಈ ಯೋಜನೆ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಭಾಗವಾಗಿ ವಿವಿಧ ರೀತಿಯ ಸ್ಪರ್ಧೆಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಬೈಂದೂರಿನ ಸೌಂದರ್ಯವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ಬೈಂದೂರು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ರೀಲ್ಸ್, ಫೋಟೋಗ್ರಫಿ, ಡ್ರೋನ್ ಶೂಟ್, ಲೋಗೋ ಡಿಸೈನ್ ಎಂಬ ಸ್ಪರ್ಧೆಗಳನ್ನು ಆಯೋಜಿಸಿದ್ದು, ವಿಜೆತರಿಗೆ ಆಕರ್ಷಕ ಬಹುಮಾನ ಕೂಡ ಪ್ರಾಯೋಜಿಸಲಾಗಿದೆ.

Click here

Click here

Click here

Click Here

Call us

Call us

ಸ್ಪರ್ಧೆಯಲ್ಲಿ ಭಾಗವಹಿಸಲು ಮನವಿ
ಎಕ್ಸ್‌ಪ್ಲೋರ್‌ ಬೈಂದೂರು ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದ್ದು, ಪ್ರವಾಸಾಸಕ್ತರು, ಪ್ರವಾಸೋದ್ಯಮಿಗಳು, ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ಗಳು, ಕ್ಷೇತ್ರದ ಜನತೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕಕ್ಕಾಗಿ 8310290427 / 8618954293 ಸಂಪರ್ಕಿಸುವಂತೆ, contest.sb2024@gmail.com ಇ-ಮೇಲ್ ಮೂಲಕವೂ ಸಂಪರ್ಕಿಸಬಹುದಾಗಿದೆ.

Leave a Reply