ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತ್ತೀಚಿಗೆ ಮುಂಬೈಯಲ್ಲಿ ಜರುಗಿದ 7ನೇ ಅಂತಾರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ಶಿಪ್ 2024ರಲ್ಲಿ 11ರ ವಯೋಮಾನದ ವಿಭಾಗದ ಕುಮಿಟಿ ಹಾಗೂ ಕಟಾ ಎರಡೂ ವಿಭಾಗದಲ್ಲಿಯೂ ಖಾರ್ವಿಕೇರಿಯ ಸಾನಿಧ್ಯ ಸಂತೋಷ್ ನಾಯ್ಕ್ ಚಿನ್ನದ ಪದಕ ಪಡೆದಿದ್ದಾಳೆ.
ಸಾನಿಧ್ಯ ಕೋಟೇಶ್ವರದ ಗುರುಕುಲ ಪಬ್ಲಿಕ್ ಸ್ಕೂಲಿನಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.
7ರ ವಯೋಮಾನದ ವಿಭಾಗದಲ್ಲಿ ಖಾರ್ವಿಕೇರಿಯ ಸಂಕಲ್ಪ್ ಸಂತೋಷ್ ನಾಯ್ಕ್ ಕುಮಿಟಿಯಲ್ಲಿ ಚಿನ್ನ ಮತ್ತು ಕಟಾದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಈತ ಗುರುಕುಲ ಪಬ್ಲಿಕ್ ಸ್ಕೂಲಿನಲ್ಲಿ 2ನೇ ತರಗತಿಯ ವ್ಯಾಸಂಗ ಮಾಡುತ್ತಿದ್ದಾನೆ.
ಕುಂದಾಪುರ ಖಾರ್ವಿಕೇರಿ ನಿವಾಸಿ ಸಂತೋಷ್ ನಾಯ್ಕ್ ಹಾಗೂ ಶ್ಯಾಮಲಾ ನಾಯ್ಕ್ ದಂಪತಿಗಳ ಮಕ್ಕಳಾದ ಈರ್ವರೂ, ಕುಂದಾಪುರದ ಕೆಡಿಎಫ್ ಕರಾಟೆ ಸ್ಕೂಲಿನ ಕಿರಣ್ ಕುಂದಾಪುರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.