ಸಾಲಿಗ್ರಾಮ ಕಾಯಾಕಿಂಗ್ ಪಾಯಿಂಟ್‌ನಲ್ಲಿ ಸಂವಿಧಾನ ಜಾಗೃತಿ ಪಥ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಸಂವಿಧಾನ ಜಾಗೃತಿಯ ಅಂಗವಾಗಿ ಸಾಲಿಗ್ರಾಮ ಕಾಯಾಕಿಂಗ್ ಪಾಯಿಂಟ್ ನಲ್ಲಿ ವಿನೂತನವಾಗಿ ಪ್ರವಾಸಿ ಬೋಟನ್ನು ಸಂವಿಧಾನ ಜಾಗೃತಿ ಪಥವನ್ನಾಗಿ ವಿನ್ಯಾಸಗೊಳಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂವಿಧಾನ ಜಾಗೃತಿ ಪಥಕ್ಕೆ ಈ ಮೂಲಕ ಚಾಲನೆ ನೀಡಲಾಯಿತು.

Call us

Click Here

ಸೀತಾ ನದಿಯಲ್ಲಿ ಕಾಯಾಕಿಂಗ್ ಮೂಲಕ ತೆರಳಿ ಮ್ಯಾಂಗ್ರೋ ಕಾಡುಗಳ ಮಧ್ಯೆ ನೀರಿನಲ್ಲಿ 75ಎಂದು ಕಾಯ ಕಿಂಗ್ ದೋಣಿಗಳನ್ನು ಬಳಸಿ ವಿನ್ಯಾಸಗೊಳಿಸಲಾಯಿತು.

ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್ನಲ್ಲಿ ಇದಕ್ಕೂ ಮೊದಲು ಮತದಾನ ಜಾಗೃತಿ, ಪ್ಲಾಸ್ಟಿಕ್ ಜಾಗ್ರತಿ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳನ್ನು ನವ ನವೀನ ಮಾದರಿಯ ಪ್ರಯೋಗಗಳ ಮೂಲಕ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಲೇ ಬಂದಿದೆ. ಇದೀಗ ಸಂವಿಧಾನ ಜಾಗ್ರತಿ ಕಾರ್ಯಕ್ರಮವನ್ನು ಪ್ರಕೃತಿ ಮಡಿಲಲ್ಲಿ ಮಾಡಿ ಅಧಿಕಾರಿಗಳಿಂದ ಸೈ ಎನಿಸಿಕೊಂಡಿದೇ.

ಈ ಸಂದರ್ಭದಲ್ಲಿ ಸಿಇಓ ಪ್ರತೀಕ್ ಬಾಯಲ್ ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಎಸ್ ಆರ್, ಉಡುಪಿ ಎಡಿಸಿ ಮಮತಾ ದೇವಿ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕಿ ಅನಿತಾ ಮಡ್ಲೂರು, ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷ ಪ್ರಿಯಂವದ, ಬ್ರಹ್ಮಾವರ ತಹಸಿಲ್ದಾರ್ ಶ್ರೀಕಾಂತ್ ಹೆಗ್ಡೆ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಶಿವ ನಾಯ್ಕ, ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್ ಮುಖ್ಯಸ್ಥ ಮಿಥುನ್ ಕುಮಾರ್ ಮೆಂಡನ್, ಲೋಕೇಶ್ ವಿನಯ್ ಮೊದಲಾದವರು ಇದ್ದರು.

Leave a Reply