ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಡ್ತಾಡಿ ಗ್ರಾಮದ ಸಾಧಮ್ಮ ಶೆಡ್ತಿ ಅವರು ನೂರು ವರ್ಷ ಪೂರೈಸಿದ ಅಂಗವಾಗಿ ಅಲ್ತಾರು ದೇವುಬೆಟ್ಟು ವಠಾರದಲ್ಲಿ ಕೀರ್ತಿ ಶೇಷ ಕೊರಗಯ್ಯ ಶೆಟ್ಟಿಯ ಸುಂದರ ವೇದಿಕೆಯಲ್ಲಿ ಜನ್ಮ ಶತಾಬ್ಧಿ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕಿ ರೇಖಾ ವಿ. ಬನ್ನಾಡಿ, ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಎಚ್. ಧನಂಜಯ ಶೆಟ್ಟಿ, ಕಾಜ್ರಳ್ಳಿ ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ನಿರಂಜ ಹೆಗ್ಡೆ, ಉದ್ಯಮಿ ಸಮಾಜಸೇವಕ ಕೃಷ್ಣಮೂರ್ತಿ ಮಂಜ, ಯಡ್ತಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಕುಟುಂಬಸ್ಥರಾದ ಅಲ್ತಾರು ಜಯರಾಮ್ ಶೆಟ್ಟಿ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಕಲಚೇತನರು, ಆರೋಗ್ಯ ಸಮಸ್ಸೆ ಉಳ್ಳವರು, ತಂದೆ -ತಾಯಿ ಕಳೆದುಕೊಂಡ ವಿದ್ಯಾರ್ಥಿನಿಗೆ ಮತ್ತು ಅಸಾಹಯಕರಿಗೆ ಧನಸಹಾಯ ಮಾಡಲಾಯಿತು. ಇದೇ ಸಂದರ್ಭದಲ್ಲಿ ಜಯರಾಮ್ ಶೆಟ್ಟಿ ಅಲ್ತಾರು ಅವರಿಗೆ ́ಕುಟುಂಬ ರತ್ನʼ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಚೇತನ್ ನೈಲ್ಯಾಡಿ ಮತ್ತು ತಂಡ ಹೆಂಗ್ಸ್ರ್ ಪಂಚೇತಿ, ಶ್ರಾವ್ಯ ಶೆಟ್ಟಿ ಅಲ್ತಾರು – ಗಣೇಶ್ ಮೊಳಹಳ್ಳಿ ಅವರಿಂದ ಗೀತಾ ಗಾಯನ ಹಾಗೂ ನೃತ್ಯ ವೈಭವ ನೆರವೇರಿತು.