ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಜಿಲ್ಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಹಾಗೂ ಗ್ರಾಮ ಪಂಚಾಯತ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಸಹಯೋಗದೊಂದಿಗೆ ಪಲ್ಸ್ ಪೋಲಿಯೊ ಕಾರ್ಯಕ್ರಮ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ನಡೆಯಿತು.
ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷ ಎಂ.ನಾಗೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಪೋಲಿಯೊ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತಾ, ಭಾರತವು ಪೋಲಿಯೊ ಮುಕ್ತ ದೇಶವಾಗಿದೆ. ಶಾಶ್ವತ ಅಂಗವಿಕಲತೆಯನ್ನು ತರಬಲ್ಲ ಪೋಲಿಯೊವನ್ನು ಲಸಿಕೆ ಮೂಲಕ ಹೋಗಲಾಡಿಸಬಹುದು. ಐದು ವರ್ಷದ ಒಳಗಿನ ಪ್ರತಿ ಮಗುವಿಗೆ ಪೋಲಿಯೊ ಲಸಿಕೆಯನ್ನು, ಮಗುವನ್ನು ಪೋಲಿಯೊದಿಂದ ರಕ್ಷಣೆ ಮಾಡಬಹುದು ಎಂದರು. ರೋಟರಿಯ ಪಲ್ಸ್ ಪೋಲಿಯೊ ಝೋನಲ್ ಕೋ-ಆರ್ಡಿನೇಟರ್ ಪ್ರದೀಪ ಡಿ.ಕೆ. ಶುಭ ಹಾರೈಸಿದರು.
ಆಸ್ಪತ್ರೆಯ ಶುಶ್ರೂಷ ಅಧಿಕಾರಿ ಶೋಭಾ, ಕಿರಿಯ ಆರೋಗ್ಯ ಅಧಿಕಾರಿ ಪ್ರಜ್ವಲಾ, ಫಾರ್ಮಸಿಸ್ಟ್ ವಿಶ್ವನಾಥ ನಾಯಕ್, ಸಿಎಚ್ಒ ನಯನಾ ಮತ್ತು ವತ್ಸಲಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ರೋಟರಿ ಸದಸ್ಯರು, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.