ಸಿದ್ದಾಪುರ ಸೊಸೈಟಿ ಮ್ಯಾನೇಜರ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಸಿಬ್ಬಂದಿಗಳ ಕಿರುಕುಳ ಆರೋಪ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮಾ.27:
ತಾಲೂಕಿನ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಭಾರ ವ್ಯವಸ್ಥಾಪಕಿ ಆಶಾ ಎಸ್. ( 52) ಅವರು ಮಾರ್ಚ್ 20ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಹೊಸ ತಿರುವು ಸಿಕ್ಕಿದ್ದು, ಕಛೇರಿಯ ಸಿಬ್ಬಂದಿಗಳ ವಿರುದ್ಧವೇ ದೂರು ದಾಖಲಾಗಿದೆ.

Call us

Click Here

ಸಂಘದ ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ರಾವ್, ಸಿಬ್ಬಂದಿ ಮಂಜುನಾಥ್, ವಲಯ ಮೇಲ್ವಿಚಾರಕ ಉದಯ್ ಕುಮಾರ್ ಶೆಟ್ಟಿ ಅವರೇ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾರೆ ಎಂದು ಮೃತ ಆಶಾ ಅವರ ಪತಿ ವಿಜಯ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಚೇರಿಯ ಸಿಬ್ಬಂದಿ ಪತ್ನಿಗೆ ಸದಾ ಕಿರುಕುಳ ನೀಡುತ್ತಿದ್ದು,ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಯಾರೊಂದಿಗೂ ಅವರು ಹೆಚ್ಚು ಮಾತನಾಡುತ್ತಿರಲಿಲ್ಲ ಇದರ ಬಗ್ಗೆ ವಿಚಾರಿಸಿದಾಗ ಸಂಘದ ಮಹೇಶ್ ರಾವ್, ಮಂಜುನಾಥ್ ಶೆಟ್ಟಿ ಅವರು ಸಂಘದಲ್ಲಿ ನಡೆದ ವಂಚನೆಯನ್ನು ತಾವೇ ಒಪ್ಪಿಕೊಳ್ಳುವಂತೆ ಒತ್ತಡ ಹಾಕಿದ್ದಲ್ಲದೆ ವಂಚನೆಗೊಳಗಾದ ಸಂಘದ ಹಣವನ್ನು ಕೂಡಲೇ ಕೊಡು ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೋ ಎಂದು ಸತಾಯಿಸುತ್ತಿದ್ದರು.

ಮಾರ್ಚ್ 20ರಂದು ಪೂರ್ವಾಹ್ನ 11:30ರ ಸಮಯದಲ್ಲಿ ಆಶಾ ಬ್ಯಾಂಕಿನಿಂದ ನೇರವಾಗಿ ಮನೆಗೆ ಬಂದಿದ್ದರು ಸುಮಾರು 11: 50ರ ಸಮಯದಲ್ಲಿ ಮಹೇಶ್ ರಾವ್, ಮಂಜುನಾಥ, ಉದಯ್ ಕುಮಾರ್ ಶೆಟ್ಟಿ ಕಾರಿನಲ್ಲಿ ಬಂದು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ. ಈ ನಿಂದನೆ ತಾಳಲಾರದೆ ಆಶಾ ಮನೆಯ ಮಹಡಿಯ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.

ಆಶಾ ಅವರು 28 ವರ್ಷಗಳ ಕಾಲ ಸೊಸೈಟಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಭಾರ ವ್ಯವಸ್ಥಾಪಕಿಯಾಗಿ ಮಾರ್ಚ್ 20ರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಸಂಘದಲ್ಲಿ ಅಡಿಟ್ ನಡೆಯುತ್ತಿದ್ದು ಮಧ್ಯದಲ್ಲಿಯೇ ಕಚೇರಿಯಿಂದ ಯಾರಿಗೂ ತಿಳಿಸದೆ ನೇರವಾಗಿ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.

Click here

Click here

Click here

Click Here

Call us

Call us

ಸಂಘದಲ್ಲಿ ಕೊಟ್ಯಾಂತರ ರೂಪಾಯಿ ಹಗರಣ ಆರೋಪ?
ಸಿದ್ಧಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಎರಡು ವರ್ಷದ ಹಿಂದೆ ಶಾಖಾ ವ್ಯವಸ್ಥಾಪಕರಾಗಿದ್ದ ಸಂಪತ್ ಕಾಮತ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಕುರಿತು ನಿಖೆ ನಡೆಯುತ್ತಿರುವಾಗಲೇ ಆಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಬಯಲಿಗೆಳೆಯಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.

Leave a Reply