ಕುಂದಾಪ್ರ ಡಾ.ಕಾಂ ಸುದ್ದಿ
ಬೈಂದೂರು: ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಪ್ರತಿವರ್ಷದಂತೆ ಆಯೋಜಿಸಲಾಗುವ ರಂಗಸುರಭಿ -2024 ರಾಜ್ಯ ಮಟ್ಟದ ನಾಟಕೋತ್ಸವ ಏ. 06 ರಿಂದ 08ರ ತನಕ ಬೈಂದೂರು ಶಾರದಾ ವೇದಿಕೆಯಲ್ಲಿ ಪ್ರತಿದಿನ ಸಂಜೆ 6-30ಕ್ಕೆ ಜರುಗಲಿದೆ.
ಎ.06ರ ಶನಿವಾರ ನಾಟಕೋತ್ಸವವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಸ್ಥಾನದ ವ್ಯವಸ್ಥಾಪನ ಸಮಿತಿ ನಿಕಟಪೂರ್ವಾಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಶ್ರೀರಾಮ ವಿವಿದ್ದೊದ್ಧೇಶ ಟ್ರಸ್ಟ್ ಆಡಳಿತ ಟ್ರಸ್ಟಿ ಬಿ. ರಾಮಕೃಷ್ಣ ಶೇರೆಗಾರ್ ಅವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಿರೂರು ಉದ್ಯಮಿಯಾದ ರಾಮು ಮೇಸ್ತ , ಮರವಂತೆಯ ಚೇತನಾ ಚಿಕಿತ್ಸಾಲಯ ಡಾ| ರೂಪಾಶ್ರಿ ಮರವಂತೆ , ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷರಾದ ಪ್ರಸಾದ್ ಪ್ರಭು ಇನ್ನಿತರು ಉಪಸ್ಥಿತರಿದ್ದಾರೆ. ಅಂದು ಹಿರಿಯ ರಂಗ ಕಲಾವಿದ, ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಿಶ್ವೇಶ್ವರ ಅಡಿಗ ಬಿಜೂರು ಅವರನ್ನು ಸನ್ಮಾನಿಸಲಾಗುವುದು.
ಅಸ್ತಿತ್ವ ಮಂಗಳೂರು ಅಭಿನಯದ, ವೈಕಂ ಮಹಮ್ಮದ್ ಬಶೀರ್ ಅವರ ಕಥೆ ಹಾಗೂ ಸುನೈಫ್ ವಿಟ್ಲ ಅನುವಾದಿಸಿ, ಅರುಣ್ ಲಾಲ್ ಕೇರಳ ಅವರು ನಿರ್ದೇಶಿಸಿರುವ ನಾಟಕ ʼಜುಗಾರಿʼ ಪ್ರದರ್ಶನಗೊಳ್ಳಲಿದೆ.
ಏ. 07ರ ಭಾನುವಾರ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ರಾಂತ ಮುಖ್ಯೋಪಾಧ್ಯಾರಾದ ಕೃಷ್ಣಪ್ಪ ಹುಂಜನಿ ಅವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉದ್ಯಮಿ ಕೆ.ಟಿ ವೆಂಕಟೇಶ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ. ನಾಯ್ಕ, ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಶುಂಪಾಲರಾದ ನಾಗರಾಜ ಶೆಟ್ಟಿ, ಉದ್ಯಮಿ ಸತ್ಯನಾರಾಯಣ ಆಚಾರ್ಯ , ಶಿರೂರು ರೂರಲ್ ಜೆ.ಸಿ.ಐ ಅಧ್ಯಕ್ಷ ಸತೀಶ ಕೊಠಾರಿ ಉಪಸ್ಥಿತರಿದ್ದಾರೆ. ಪಾಂಬೂರು ಪರಿಚಯ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಾಶ್ ನೋರೋನ್ನಾ ಅವರನ್ನು ಸನ್ಮಾನಿಸಲಾಗುವುದು.
ಬಳಿಕ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಅಭಿಯದ, ಐ.ಕೆ. ಬೋಳುವಾರು ರಂಗಪಠ್ಯ, ಸಂತೋಷ್ ನಾಯಕ್ ಪಟ್ಲ ವಿನ್ಯಾಸ ಮತ್ತು ನಿರ್ದೇಶನದ ನಾಟಕ ʼಒಂದು ಧಮ್ಮ ಪದʼ ಪ್ರದರ್ಶನಗೊಳ್ಳಲಿದೆ.
ಎ.08ರ ಸೋಮವಾರ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಸುರಭಿ ರಿ. ಬೈಂದೂರು ಅಧ್ಯಕ್ಷರಾದ ನಾಗರಾಜ ಪಿ. ಯಡ್ತರೆ ಅವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ರೆಸಿಡೆನ್ಸಿಯಲ್ ಸ್ಕೂಲ್ ಪ್ರಾಂಶುಪಾಲರಾದ ಶರಣ ಕುಮಾರ್, ಉಪ್ಪುಂದ ಲಯನ್ಸ್ ಕ್ಲಬ್ ಬೈಂದೂರು ಅಧ್ಯಕ್ಷರಾದ ಗೀರಿಶ್ ಶ್ಯಾನುಭಾಗ್, ಉದ್ಯಮಿ ಶ್ರೀಧರ ಬೇಲೆಮನೆ, ಬೈಂದೂರು ಲಾವಣ್ಯ ರಿ. ಅಧ್ಯಕ್ಷ ನರಸಿಂಹ ನಾಯಕ್, ಬೈಂದೂರು ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಚಂದ್ರೀಕಾ ರಾಮು ಉಪಸ್ಥಿತರಿರಲಿದ್ದಾರೆ. ಮಂದಾರ ಬೈಕಾಡಿ ಅಧ್ಯಕ್ಷರಾದ ರೋಹಿತ್ ಎಸ್. ಬೈಕಾಡಿ ಅವರನ್ನು ಸನ್ಮಾನಿಸಲಾಗುವುದು.
ಬಳಿಕ ರಂಗಬೆಳಕು ಶಿವಮೊಗ್ಗ ಅಭಿನಯದ, ಅಜೇಯ ನೀನಾಸಂ ನಿರ್ದೇಶನದ ನಾಟಕ ಒಲವಿನ ಜಂಕ್ಷನ್ ಪ್ರದರ್ಶನಗೊಳ್ಳಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.















