ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಶೇ. 99.35 ಫಲಿತಾಂಶ ದಾಖಲಿಸಿದ್ದು, ವಿಜ್ಞಾನ ವಿಭಾಗದಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಕುಳಿತ 155 ವಿದ್ಯಾರ್ಥಿಗಳಲ್ಲಿ 154 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 62 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ, 83 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು ಓರ್ವ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಸಂಸ್ಕೃತ ವಿಷಯದಲ್ಲಿ 11 ವಿದ್ಯಾರ್ಥಿಗಳು 100 ಅಂಕಗಳನ್ನು ಪಡೆದಿದ್ದರೆ, ಗಣಿತಶಾಸ್ತçದಲ್ಲಿ 6 ವಿದ್ಯಾರ್ಥಿಗಳು 100 ಅಂಕಗಳನ್ನು ಪಡೆದುಕೊಂಡಿದ್ದಾರೆ. ರಸಾಯನಶಾಸ್ತç, ಜೀವಶಾಸ್ತçದಲ್ಲಿ, ಅರ್ಥಶಾಸ್ತçದಲ್ಲಿ ಹಾಗೂ ವ್ಯವಹಾರ ಅಧ್ಯಯನದಲ್ಲಿ ತಲಾ ಒಬ್ಬ ವಿದ್ಯಾರ್ಥಿ 100 ಅಂಕಗಳನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 590 ಅಂಕಗಳನ್ನು ಪಡೆದಿರುವ ನೇಹಾ ಎಸ್.ಕೊಡೇರಿ ಕಾಲೇಜಿನ ಅಗ್ರ ಸ್ಥಾನಿಯಾಗಿ ಮೂಡಿ ಬಂದಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಸನ್ನಿಧಿ ಹೊಳ್ಳ 587 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ನೇಹಾ ಎಸ್.ಕೊಡೇರಿ (590), ಪೂರ್ವಿ ಚಿತ್ತಾಲ್ (586), ಇಂಚರಾ ದೇವಾಡಿಗ (586), ಹರ್ಷಿತಾ ಎಸ್.ಪೂಜಾರಿ (585), ಶ್ರೀಲಕ್ಷೀ (580), ಅಮೋಘ ದೇವಾಡಿಗ (580), ಅನುಶ್ರೀ ಕಿಣಿ (579), ಸುಶ್ಮಿತಾ (576), ಅಶ್ವಿಕ್ (575), ನಿಶಾ (571), ದೀಕ್ಷಣ್ ಎಸ್.ಶೇರುಗಾರ್ (567), ಪ್ರಜ್ವಲ್ ಜಿ.ಕೆ. (565), ವೀಕ್ಷಿತಾ (565), ಸೃಜನ್ (565) ಉತ್ತಮ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸನ್ನಿಧಿ ಹೊಳ್ಳ (587) ವೆಲಿಟಾ ಲೋಬೊ (579), ದೀಕ್ಷಾ ಎಸ್.ಪೂಜಾರಿ (578), ಎಂ.ಅಕ್ಷತಾ ದೇವಾಡಿಗ (576), ಸಂಜನಾ ಎಸ್.ನಾಯ್ಕ್ (574). ದೀಪ್ತಿ ಆರ್.ಶೆಣೈ (573), ಶ್ರೇಯಾ (570), ದೀಕ್ಷಾ (567), ಶ್ರೇಯಾ ಮೇಸ್ತ (566) ಮತ್ತು ನಾಗೇಂದ್ರ ಪೂಜಾರಿ (566) ಉತ್ತಮ ಸಾಧನೆ ಮಾಡಿದ್ದಾರೆ.