ಕುಂದಾಪುರದಲ್ಲಿ ಉಚಿತ ಹೊಲಿಗೆ ಕೇಂದ್ರದ ಉದ್ಘಾಟನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಗೆಳೆಯರ ಸ್ವಾವಲಂಬನ (ರಿ.) ಕುಂದಾಪುರ-ಮುಂಬೈ ಇವರ ಆಶ್ರಯದಲ್ಲಿ ಕುಂದಾಪುರದ ರಾಮ ಮಂದಿರ ಮಾರ್ಗದಲ್ಲಿ ಉಚಿತ ಹೊಲಿಗೆ ಕೇಂದ್ರದ ಉದ್ಘಾಟನೆಯು ಇತ್ತಿಚಿಗೆ ಜರುಗಿತು.

Call us

Click Here

ಪ್ರಸಿದ್ಧ ವಸ್ತ್ರ ವಿನ್ಯಾಸಕಿ ಪ್ರಮೀಳಾ ಅವರು ಉದ್ಘಾಟಿಸಿ ಮಾತನಾಡಿ ಕುಂದಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶದ ಮಹಿಳೆಯರು ಇದರ ಸದುಪಯೋಗ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಹೇಳಿ ಹೊಲಿಗೆ ಶಿಬಿರಕ್ಕೆ ಶುಭ ಹಾರೈಸಿದರು.

ಕೇಂದ್ರದ ಅಧ್ಯಕ್ಷರಾದ ವೆಂಕಟೇಶ ಪೈ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಗೆಳೆಯರ ಸ್ವಾವಲಂಬನವು ಕಳೆದ 12 ವರ್ಷಗಳಿಂದ ಕುಂದಾಪುರ-ಮುಂಬೈಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಟ್ಟೆ ಚೀಲ ಹೊಲಿಯುವುದರೊಂದಿಗೆ ಪ್ಲಾಸ್ಟಿಕ್ ತ್ಯಜಿಸಿ, ಬಟ್ಟೆ ಚೀಲ ಬಳಸಿ, ಪರಿಸರ ರಕ್ಷಿಸಿ ಎಂಬ ತತ್ವದೊಂದಿಗೆ ಸಮಾಜ ಸೇವೆಗೈಯುತ್ತಿದೆ. ೨೦೦ಕ್ಕೂ ಮಿಕ್ಕಿ ಪುರುಷ, ಮಹಿಳೆಯರು ಕೇಂದ್ರದಲ್ಲಿ ಚೀಲ ಹೊಲಿಯುತ್ತಿದ್ದಾರೆ. ಈಗ ಕುಂದಾಪುರದಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಾಥಮಿಕ ಹೊಲಿಗೆ, ಇಲೆಕ್ಟ್ರಿಕ್ ಮೋಟರ್ ಅಳವಡಿಸಿ ಹೊಲಿಗೆ, ಆಲ್ಟ್ರೇಷನ್, ಫಿಟ್ಟಿಂಗ್, ಬಟ್ಟೆ ಚೀಲಗಳ ಹೊಲಿಗೆ, ಹೊಲಿಗೆ ಯಂತ್ರದ ಸಣ್ಣ ಪುಟ್ಟ ರಿಪೇರಿ ಇತ್ಯಾದಿಗಳನ್ನು ಕಲಿಸಲಾಗುವುದು ಎಂದರು.

ಹೊಲಿಗೆ ಶಿಬಿರದ ಶಿಕ್ಷಕಿ ನಾಗಮಣಿ ಅವರು ವಂದಿಸಿದರು.

Leave a Reply