ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು 2024ರ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90.79 ಫಲಿತಾಂಶ ದಾಖಲಿಸಿದೆ.
ఒట్టు 695 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 631 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 123 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 388 ಪ್ರಥಮ ಶ್ರೇಣಿ ಹಾಗೂ 99 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕಲಾ ವಿಭಾಗದಲ್ಲಿ ಲಿಖಿತಾ ನಾಗ್ ಆರ್ (576), ರಾಘವೇಂದ್ರ ವಿಠಲ ಪರಸನ್ನವರ್ (560), ನರಸಪ್ಪ (553), ವಾಣಿಜ್ಯ ವಿಭಾಗದಲ್ಲಿ ಅಪೂರ್ವ ಅಶೋಕ ದೇವಾಡಿಗ (582), ರೋಹಿತ್ (577), ಸುಶ್ಮಿತಾ (576) ಹಾಗೂ ವಿಜ್ಞಾನ ವಿಭಾಗದಲ್ಲಿ ಪುದೀಪ ಮೊಗವೀರ ಮತ್ತು ಸಾನಿಕಾ (569), ಶಮಿತಾ (564), ಪ್ರಿಯಾಂಕ (554) ಅಂಕ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.