ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಸಂದೀಪ್ ಗಾಣಿಗ ನೇಮಕಗೊಂಡಿದ್ದಾರೆ.
ಸಿಇಟಿ, ನೀಟ್, ಜೆಇಇ ತರಬೇತುದಾರರಾಗಿರುವ ಸಂದೀಪ್ ಗಾಣಿಗ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 10 ವರ್ಷಗಳಿಂದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ವಿಶಿಷ್ಟ ಬೋಧನಾ ಶೈಲಿಯಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಛಾಪು ಮೂಡಿಸಿದ ಇವರು ಪ್ರಸ್ತುತ ವರ್ಷದಿಂದ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕ ಗೊಂಡಿದ್ದಾರೆ.
ಸಿಇಟಿ, ಜೆಇಇ ತರಬೇತುದಾರ ಹಾಗೂ ಗಣಿತಶಾಸ್ತ್ರವನ್ನು ಸರಳ ತಂತ್ರ ಗಳ ಮೂಲಕ ಬೋಧಿಸಿ ವಿದ್ಯಾರ್ಥಿಗಳ ಮನಗೆದ್ದಿರುವ ಉಪನ್ಯಾಸಕ ಸುಜಯ್ ಕೋಟೆಗಾರ್ ಉಪಪ್ರಾಂಶುಪಾಲರಾಗಿ ನೇಮಕ ಗೊಂಡಿದ್ದಾರೆ.
ಸಂಸ್ಥೆಯ ಕಾರ್ಯದರ್ಶಿ ಕೆ ರಾಧಾಕೃಷ್ಣ ಶೆಣೈ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು.