ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉಪ್ಪುಂದದ ಶ್ರೇಯಸ್ ಜಿ. ರಾವ್ 651ನೇ ರ್ಯಾಂಕ್ ಗಳಿಸಿದ್ದಾರೆ.
ಬೈಂದೂರು ತಾಲೂಕು ಉಪ್ಪುಂದದವರಾದ ಶ್ರೇಯಸ್ ಜಿ. ರಾವ್ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸಂದೀಪನ್ ಮತ್ತು ಹೆಚ್.ಎಂ.ಎಂ.ಎಸ್ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣವನ್ನು ನಾವುಂದದ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಪೂರೈಸಿ ಬಳಿಕ ಶಿವಮೊಗ್ಗದ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಬಳಿಕ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಬಿಎಂಎಸ್ ರೆಡಿಯೋಲಾಜಿ ಉನ್ನತ ಶಿಕ್ಷಣ ಪಡೆದಿದ್ದಾರೆ.
ಕಳೆದ ಎರಡೂವರೆ ವರ್ಷದಲ್ಲಿ ಉಡುಪಿ ಅಂಬಲಪಾಡಿಯಲ್ಲಿ ವೃತ್ತಿಯಲ್ಲಿರುವ ಶ್ರೇಯಸ್ ಅವರು ವೃತ್ತಿಯ ಜೊತೆಗೆ ಯುಪಿಎಸ್ಸಿಗೂ ತಯಾರಿ ನಡೆಸಿದ್ದರು.
ಶ್ರೇಯಸ್ ಅವರು ಉಪ್ಪುಂದದ ದಿ. ಗಣೇಶ್ ಶ್ರೀನಿವಾಸ ರಾವ್ ಹಾಗೂ ಉಪ್ಪುಂದ ಉರ್ದು ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸುಶೀಲಾ ಯು.ಎಸ್. ಅವರ ಪುತ್ರರಾಗಿದ್ದಾರೆ.