ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ಕ್ಯಾಶ್ಯೂ ಫ್ಟಾಕ್ಟರಿಯಿಂದ ರೂ.1.21 ಕೋಟಿ ಮೌಲ್ಯದ ಗೋಡಂಬಿಯನ್ನು ಟ್ರಕ್ ಮೂಲಕ ಕೊಂಡೊಯ್ದಿದ್ದ ಚಾಲಕ ಟ್ರಕ್ ಸಹಿತ ಪರಾರಿಯಾಗಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಹೊರರಾಜ್ಯದಲ್ಲಿ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ರಹ್ಮಾವರ ತಾಲೂಕಿನ 33ನೇ ಶೀರೂರು ಗ್ರಾಮದ ಮೂಡುಗುಡ ಎಂಬಲ್ಲಿರುವ ಶ್ರೀ ಕೃಷ್ಣ ಕ್ಯಾಶ್ ಪ್ಯಾಕ್ಟರಿಯಿಂದ ಟ್ರಕ್ನಲ್ಲಿ ಗೋಡಂಬಿಯನ್ನು ಸೂರತ್ ಹಾಗೂ ಅಹಮ್ಮದಬಾದಿಗೆ ಕ್ರಮವಾಗಿ 21.24 ಹಾಗೂ 3.450 ಟನ್ ಗೋಂಡಬಿಯನ್ನು ಲೋಡ್ ಮಾಡಿ ಇನ್ವೈಸ್ ಮತ್ತು ಇ-ವೇ ಬಿಲ್ ತಯಾರಿಸಿ ಲಾರಿಯ ಚಾಲಕ ರಮ್ಝಾನ್ ಸೌದಾ ಮತ್ತು ಸಹ ಚಾಲಕ ಮಹೇಂದ್ರಪುರಿ ಲಾಲ್ಪುರಿ ಗುಸ್ಸಾಯಿ ಜೊತೆಯಲ್ಲಿ ಲೋಡ್ ಮಾಡಿಸಿಕೊಂಡು ತೆರಳಿದವರು ಲಾರಿಯಲ್ಲಿದ್ದ 1,21,76,598 ರೂ ಮೌಲ್ಯದ 24.69 ಮೆಟ್ರಿಕ್ ಟನ್ ಗೋಡಂಬಿಯನ್ನು ತಲುಪಿಸಬೇಕಾಗಿದ್ದವರಿಗೆ ತಲುಪಿಸದೇ ಮೋಸ ಮಾಡಿ ವಂಚನೆ ಮಾಡಿದ್ದರು.
ಈ ಬಗ್ಗೆ ಮೋಹನ ದಾಸ್ ಶೆಟ್ಟಿ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆಗೆ ಪಿಎಸೈ ಪವನ್ ನಾಯಕ್, ಪಿ.ಎಸ್.ಐ. ಸಿಬ್ಬಂದಿಗಳಾದ ಕೃಷ್ಣಪ್ರಸಾದ್ ಜೀವನ್ ಅವರ ವಿಶೇಷ ತಂಡವನ್ನು ರಚಿಸಲಾಗಿತ್ತು. ವಿಶೇಷ ತಂಡವು ಮಹಾರಾಷ್ಟ್ರ ರಾಜ್ಯದ ವಿರಾರ್ ಮತ್ತು ಗನ್ಸೋಲಿ ಎಂಬಲ್ಲಿಂದ ಗೋಡಂಬಿ ತುಂಬಿದ ಬಾಕ್ಸ್‌ಗಳನ್ನು ಹಾಗೂ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ ಓರ್ವನಾದ ಮಹೇಂದ್ರಪುರಿ ಲಾಲ್ಪುರಿ ಗುಸ್ಸಾಯಿ ಎಂಬಾತನನ್ನು ಟ್ರಕ್ ಸಹಿತ ಒಟ್ಟು 88,37,430/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಡಾ|| ಅರುಣ್ ಕುಮಾರ್, ಮಾನ್ಯ ಪೊಲೀಸ್ ಅಧೀಕ್ಷಕರು ಇವು ನಿರ್ದೇಶನದಂತೆ ಸಿದ್ದಲಿಂಗಯ್ಯ ಟಿ.ಎಸ್, ಪರಮೇಶ್ವರ ಹೆಗಡೆ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಇವರ ಮಾರ್ಗದರ್ಶನದಂತೆ ರಾಮಚಂದ್ರ ನಾಯಕ್, ಪಿ. ಐ., ಪವನ್ ನಾಯಕ್, ಪಿ.ಎಸ್.ಐ. ಸಿಬ್ಬಂದಿಗಳಾದ ಕೃಷ್ಣಪ್ರಸಾದ್, ಜೀವನ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ದಿನೇಶ್ ನಾಯ್ಕ್ ಹಾಗೂ ನಿತಿನ್ ಇವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.