ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಬಿರುಸಿನ ಮತದಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯಗಳು ಬರದಿಂದ ಸಾಗುತ್ತಿದ್ದು ಉಡುಪಿ ಜಿಕ್ಕಮಗಳೂರು ಎರಡೂ ಜಿಲ್ಲೆಗಳಲ್ಲಿ ಶಾಂತ ರೀತಿಯಲ್ಲಿ ಮತದಾನ ನಡೆಯುತ್ತಿದೆ. ಸಂಜೆ 5 ಗಂಟೆಯ ತನಕ ಒಟ್ಟು ಶೇ.72.12 ಮತದಾನ ನಡೆದಿದೆ.

Call us

Click Here

ಉಡುಪಿ ಜಿಲ್ಲೆಯಲ್ಲಿ ಬಿರುಸಿನ ಮತದಾನ ನಡೆದಿದ್ದು, ಜಿಲ್ಲೆಯಾದ್ಯಂತ ಹಿರಿಯ ನಾಗರಿಕರು, ವಿಕಲಚೇತನರು, ವಧು ವರರು, ಪ್ರಥಮ ಭಾರಿಗೆ ಮತದಾನ ಮಾಡುವ ಯುವ ಸಮೂಹ ಕೂಡ ಖುಷಿಯಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ನಡೆದು ಬರಲು ಸಾಧ್ಯವಾಗದ ವಿಕಲಚೇತನರಿಗೆ ವಾಹನದ ಮೂಲಕ ಕರೆತಂದು ವೀಲ್ ಚೇರ್ ಮೂಲಕ ಮತಗಟ್ಟೆಗೆ ಕರೆದೋಯ್ದು ಮತದಾನ ಮಾಡಿಸಲಾಯಿತು. ಕುಂದಾಪುರ ಕೋಯಕುಟ್ಟಿ ಹಾಲ್ ಸಮೀಪದ 21ನೇ ಮತಗಟ್ಟೆಯಲ್ಲಿ ಅನಾರೋಗ್ಯವುಳ್ಳ ತಾಯಿ ವಿ.ಕೆ ಲಲಿತಾ (85) ಅವರನ್ನು ಪುತ್ರ ವಿ. ವಾಸುದೇವ ಹಂದೆ ಅವರು ತಮ್ಮ ಅಂಬುಲೆನ್ಸ್ ಮೂಲಕ ಕರೆತಂದು ಮತದಾನ ಮಾಡಿಸಿ ತಮ್ಮ ಜವಾಬ್ದಾರಿ ಮೆರೆದರು.

ಮದುವೆ ತಯಾರಿಯಲ್ಲಿದ್ದ ಮಧುಗಳು ಕೂಡ, ಹಸೆಮಣೆ ಏರುವ ಮುನ್ನವೇ ಮತದಾನ ಮಾಡಿ ತಮ್ಮ ಜವಾಬ್ದಾರಿ ಮೆರೆದಿದ್ದಾರೆ. ಯಡಬೆಟ್ಟು ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ವಧು ಸೂರ್ತಿ ಆಚಾರ್ಯ, ಗೋಪಾಡಿ ಗ್ರಾ.ಪಂ ವ್ಯಾಪ್ತಿಯ ಮತಗಟ್ಟೆಯಲ್ಲಿ ವಧು ಹೃತಿಕಾ ಹಾಗೂ ವಡೆರಹೋಬಳಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ವಧು ಅಶ್ವಿನಿ ಮತಚಲಾಯಿಸಿದರೇ, ಹಾಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮಾಧುರಿ ಹಾಗೂ ನಾಗರಾಜ ದಂಪತಿಗಳು ಮತಚಲಾಯಿಸಿದರು.

Leave a Reply