ಸಾವಿಷ್ಕಾರ್-24 ರಂಗೇರಿಸಿದ ಚಂದನ್ ಶೆಟ್ಟಿ ಮತ್ತು ನವೀನ್ ಸಜ್ಜು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಎಂಐಟಿ ಮೂಡ್ಲಕಟ್ಟೆ ಸಾವಿಷ್ಕಾರ್ -24 ಅಂಗವಾಗಿ ಪ್ರಖ್ಯಾತ ಗಾಯಕ ಚಂದನ್ ಶೆಟ್ಟಿ ಅವರು ತಮ್ಮ ಕನ್ನಡ ರ್ಯಾಪ್ ಹಾಡುಗಳ ಮೂಲಕ ನೆರೆದ ಜನ ಸಮೂಹವನ್ನು ಮಂತ್ರ ಮುಗ್ಧರಾಗಿಸಿದರು.

Call us

Click Here

ತಮ್ಮ ಶೈಲಿಯಲ್ಲಿ ಉತ್ತಮ ಹಿಡಿತವಿರುವ ಅವರು ನೆರೆದಿದ್ದ ವಿದ್ಯಾರ್ಥಿವೃಂದಕ್ಕೆ ಹಾಡು, ನೃತ್ಯದ ಮೂಲಕ ಅವಿಸ್ಮರಣೀಯ ದಿನವಾಗುವಂತೆ ಮಾಡಿದರು. ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಸಿನಿಮಾಗಳಿಗೆ ಹಾಡಿದ ಸರಿಗಮಪ ಖ್ಯಾತಿಯಜ್ಯೂರಿ ಮೆಂಬರ್ ಶಶಿಕಲಾ ಸುನಿಲ್, ಸರಿಗಮಪ-20 ವಿನ್ನರ್ ದರ್ಶನ್ ನಾರಾಯಣ್ ರವರು ಪ್ರೇಕ್ಷಕರನ್ನು ರಂಜಿಸಿದರು.

ಎರಡನೆಯ ದಿನದ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಜಾನಪದ ಶೈಲಿಯಲ್ಲಿ ತಮ್ಮದೇ ಆದ ಚಾಪು ಮೂಡಿಸಿದ ಹೆಸರಾಂತ ಹಿನ್ನೆಲೆ ಗಾಯಕ ನವೀನ್ ಸಜ್ಜು ಮತ್ತು ತಂಡದವರು. ತಾವೇ ಬರೆದ ಗೀತೆಗಳನ್ನ ಕೂಡಾ ಹಾಡಿ ಜನರನ್ನು ರಂಜಿಸಿದರು. ಸಾವಿಷ್ಕಾರ್ -24 ರ ಎರಡು ದಿನದ ಸಂಜೆಯ ಕಾರ್ಯಕ್ರಮವು ರಂಜನೀಯವಾಗಿ ಮೂಡಿ ಬಂದಿತು.

Leave a Reply