ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ, ಮೇ.15: ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ಸತತ 14ನೇ ಬಾರಿ ಸಿ.ಬಿ.ಎಸ್.ಸಿ. 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100% ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 76 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 47 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 11 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳಾದ ಧವಲ್ ಎಸ್. ಶೆಟ್ಟಿ ಕೆ 95.00%, ಸುರ್ವಿ ಶೆಟ್ಟಿ 93.80%, ಅನ್ವಿತಾ ಕೆ 93.20%, ನೇಹಾಲಾ ಆರ್. ಹೆಗ್ಡೆ 93.00%, ಶಿರಿನ್ ಹೆಗ್ಡೆ 91%, ಎನುಗುಲಾ ಶ್ರೆಯಸ್ 90.40%, ಪ್ರಣವ 90.00%, ಪ್ರತೀಕ್ಷಾ ಎಚ್. ಶೆಟ್ಟಿ 89.60%, ಸಹನಾ ಎಸ್. ಶೆಟ್ಟಿ 88.80%, ಸಾನ್ವಿ ಎಸ್ ಬಿಲ್ಲವ 88.80%, ಪಾವನಿ ಎಸ್. ಕುಮಾರ್ 88.60%, ಹೇಮಂತ್‌ಗಣೇಶ್ ಸಿ.ವಿ 88.00%, ನೇಹಾ ಹೀರೆಕೊಡಿ 87.20%, ಸಾನ್ವಿ ಕೊಠಾರಿ 87.20%, ದ್ಯುತಿ ಶ್ರೀಕಾಂತ್ 87.00%, ಸುಕ್ಷಾನ್‌ಆರ್ ಶೆಟ್ಟಿ 86.40%, ಶ್ರೇಷ್ಟಾ ಆರ್. ನಾಯಕ್ 86.20%, ಆಝ್ಮಾ ಆಫಿಯಾ 86.20% ಅಂಕಗಳನ್ನು ಗಳಿಸಿದ್ದಾರೆ.