ವಿಶ್ವ ವಿನಾಯಕ ಸಿಬಿಎಸ್ಇ ಸ್ಕೂಲ್ ತೆಕ್ಕಟ್ಟೆ: ಎಸ್‌ಎಸ್ಎ‌ಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ,ಮೇ.15:
2023-24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸತತ 11ನೇ ಬಾರಿ ಶೇ.100 ರಷ್ಟು ಫಲಿತಾಂಶ ದಾಖಲಾಗಿದೆ.

Call us

Click Here

ಪರೀಕ್ಷೆಗೆ ಹಾಜರಾಗಿದ್ದು ಒಟ್ಟು 41 ವಿದ್ಯಾರ್ಥಿಗಳಲ್ಲಿ 4 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲಿ, 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

ವಿದ್ಯಾರ್ಥಿಗಳಾದ ಪ್ರಥಮ್ ಜಿ. ಕಾಂಚನ್ (476), ಅನ್ಸಿ ಸಿ. ಶೆಟ್ಟಿ (459), ನಿಶಾ ರಾಜೇಶ್ (453), ಇಶಾನ್ (450), ಟಿ. ಶ್ರೇಯಸ್ ನಾಯಕ್ (445), ವರ್ಷಿತ್ ಯು ಶೆಟ್ಟಿ (444),   ನಿಶ್ಚಿತ್ ಎ.ಎಸ್ (440), ಕಲ್ಪಿತ ಡಿ ಮಣೂರು (436), ಟಿ ಶಾಶ್ವತ್ ನಾಯಕ್ (436), ಪ್ರಥಮ್ ಮಯ್ಯ (431), ಬ್ರಾಹ್ಮಿ ಶೆಟ್ಟಿ( 410), ಆರುಶ್ ಎಸ್ ಪೂಜಾರಿ (408), ಧನ್ಯಶ್ರೀ( 407), ರಚನ (405) ಅಂಕಗಳನ್ನು ಗಳಿಸಿದ್ದಾರೆ.

ವಿದ್ಯಾರ್ಥಿಗನ್ನು ಶಾಲಾ ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾ , ಶಾಲಾ ಮ್ಯಾನೆಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ ಹಾಗೂ ಶಾಲಾ ಶೈಕ್ಷಣಿಕ ನಿರ್ದೇಶಕರಾದ ದಿವಾಕರ ಶೆಟ್ಟಿ ಹೆಚ್ ಅವರು ಅಭಿನಂದಿಸಿದ್ದಾರೆ.

Leave a Reply