ಕುಂದಾಪುರ: ಹೋಲಿ ರೋಜರಿ ಮಾತೆ ಇಗರ್ಜಿಯ ತೆರಾಲಿ ಹಬ್ಬದ ಪೂರ್ವಭಾವಿಯಾಗಿ ಭಾನುವಾರ ಸಂಜೆ ಇಗರ್ಜಿ ಭಕ್ತವಂದದವರ ಸಹಭಾಗಿತ್ವದಲ್ಲಿ ಬೃಹತ್ ಪುರಮೆರವಣಿಗೆ ಹಾಗೂ ಸಹೋದರ ಭಾಂದತ್ವದ ರವಿವಾರವನ್ನು ಆಚರಿಸಲಾಯಿತು.
ಮಂಗಳೂರಿನ ಮಂಗಳ ಜ್ಯೋತಿಯ ನಿರ್ದೇಶಕರಾದ ವಂದನೀಯ ಧರ್ಮಗುರು ವಿಜಯ್ ಮಚಾದೊ ಅವರ ಮಾರ್ಗದರ್ಶನದಲ್ಲಿ ರೊಜಾರಿ ಚರ್ಚಿನಲ್ಲಿ ಪವಿತ್ರ ಬಲಿದಾನದ ಪೂಜೆ ನೆರವೇರಿಸಲಾಯಿತು. ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಧರ್ಮಗುರು ವ| ಅನೀಲ್ ಡಿ’ಸೋಜಾ ಹಾಜರಿರು. ಸಹಾಯಕ ಧರ್ಮ ಗುರುಳಾದ ವ|ಪಾವ್ಲ್ ಪ್ರಕಾಶ್ ಡಿಸೋಜಾ ಮತ್ತು ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲಾರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್, ಚರ್ಚ್ ಮಂಡಳಿಯ ಸದಸ್ಯರು, ಧರ್ಮ ಭಗಿನಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಪೂಜಾ ವಿಧಿಯಲ್ಲಿ ಭಾಗವಹಿಸಿದ್ದರು.
ಬಳಿಕ ಸಂತ ಮೇರಿಸ್ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದ ಪರಮ ಪ್ರಸಾದದ ಆರಾಧನೆಯಲ್ಲಿ ಕುಂದಾಪುರದ ಕ್ರೈಸ್ತ ಸಮುದಾಯದ ಬಂಧುಗಳು ಭಾಗವಹಿಸಿದ್ದರು. ಸಭೆಗೂ ಮೊದಲು ಮೇಣದ ಬತ್ತಿಗಳನ್ನು ಹೊತ್ತಿಸಿ, ಭಕ್ತಿ ಗಾಯನದೊಂದಿಗೆ, ಅಲಂಕಾರಗಳೊಂದಿಗೆ ಪರಮ ಪ್ರಸಾದದ ಮೆರವಣಿಗೆಯನ್ನು ಕುಂದಾಪುರದ ಮುಖ್ಯ ಬೀದಿಗಳಲ್ಲಿ ನಡೆಸಲಾಯಿತು.